Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಹವಾಮಾನ

ಶಿರಡಿ ಹವಾಮಾನ

ಶಿರಡಿ ಪ್ರಾಥಮಿಕವಾಗಿ ವರ್ಷಪೂರ್ತಿ ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ. ಅದರೊಂದಿಗೆ ಹವಾಮಾನ ಸ್ವಲ್ಪ ಸಹನೀಯ ಅಸ್ತಿತ್ವದಲ್ಲಿದೆ. ಚಳಿಗಾಲವು ಶಿರಡಿ ಪವಿತ್ರ ಕೇಂದ್ರಕ್ಕೆ ಭೇಟಿ ನೀಡಲು ಸೂಕ್ತ ಸಮಯ.

ಬೇಸಿಗೆಗಾಲ

ಶಿರಡಿಯಲ್ಲಿ ಮಾರ್ಚ್ ನಿಂದ ಮೇ ತಿಂಗಳವರೆಗೆ ಬೇಸಿಗೆಗಾಲವಾಗಿದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಪ್ರವಾಸಿಗರು ಬರುವುದರಿಂದ ಹಿಂಜರಿಯುತ್ತಾರೆ.  ಇದಕ್ಕೆ ಕಾರಣ  ಉಷ್ಣಾಂಶದ ಮಟ್ಟ ಅನಾನುಕೂಲವಾಗಿದ್ದು ಸರಾಸರಿ 40 ಡಿಗ್ರಿ ಯಷ್ಟು ಸುಡು ಬಿಸಿಲಿನಿಂದ ಕೂಡಿರುತ್ತದೆ. ರಾತ್ರಿ ಸಮಯದಲ್ಲಿ ಅದು ಕನಿಷ್ಠ 21 ಡಿಗ್ರಿ ಗೆ ಇಳಿಯುತ್ತದೆ.

ಮಳೆಗಾಲ

ಈ ಯಾತ್ರಾ  ಸ್ಥಳವು ಹೆಚ್ಚಾಗಿ ಒಣ ಹವೆ ಹೊಂದಿದೆ. ಆದ್ದರಿಂದ, ಮಳೆಗಾಲದ ಆಗಮನವು ಈ ಪ್ರದೇಶಕ್ಕೆ ಹೆಚ್ಚು ಅಗತ್ಯತೆಯ ಅನುಕೂಲವನ್ನು ಒದಗಿಸುತ್ತದೆ. ಜೂನನಿಂದ ಆಗಸ್ಟ್ ವರೆಗೂ ವ್ಯಾಪಿಸಿರುವ ಈ ಋತುವನ್ನು ಸಣ್ಣ ಮಳೆಯಿಂದ ವರ್ಗೀಕರಿಸಿದ್ದು ಸುತ್ತಮುತ್ತಲಿನ ವಾತಾವರಣವೂ ಫಲವತ್ತಾದ, ಹಸಿರು ದೃಶ್ಯಗಳಿಂದ ತುಂಬುತ್ತದೆ. ಈ ಆಶ್ರಮಕ್ಕೆ ಭೇಟಿನೀಡಲು ಮತ್ತು ಸಾಯಿಬಾಬರಿಗೆ ಗೌರವಾರ್ಪಣೆ ಸಲ್ಲಿಸಲು ಇದುವೇ ವರ್ಷದ ಅತ್ಯುತ್ತಮ ಸಮಯ.

ಚಳಿಗಾಲ

ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿಯವರೆಗೆ ಕೊನೆಗೊಳ್ಳುತ್ತದೆ. ಉಷ್ಣಾಂಶದ ಗರಿಷ್ಠ ಮಟ್ಟ 32 ಡಿಗ್ರಿ ಮತ್ತು ಕನಿಷ್ಠ 8 ಡಿಗ್ರಿ ಇರುತ್ತದೆ, ಉಷ್ಣಾಂಶವು ಒಮ್ಮೊಮ್ಮೆ 7 ಡಿಗ್ರಿ ವರೆಗೂ ತಲುಪುವುದರ ಕಾರಣ ಶಿರಡಿಯ ಚಳಿಗಾಲವು ಅತ್ಯಂತ ಚಳಿಯಿಂದ ಕೂಡಿರುತ್ತದೆ. ಪ್ರವಾಸಿಗರು ಹೆಚ್ಚಾಗಿ ಈ ಸಮಯದಲ್ಲಿ ಭೇಟಿ ನೀಡುತ್ತಾರೆ.