ಅಕ್ಟೋಬರ್ ನಿಂದ ಫೆಬ್ರುವರಿ ತಿಂಗಳಿನಲ್ಲಿ ಚಳಿಗಾಲವಿದ್ದು ಶಿವಮೊಗ್ಗ ಭೇಟಿ ನೀಡಲು ಸೂಕ್ತ ಸಮಯ.
ಬೇಸಿಗೆಯ ದಿನಗಳಲ್ಲಿ ಉಷ್ಣತೆ 23 ಡಿಗ್ರಿಯಿಂದ 36 ಡಿಗ್ರಿಯವರೆಗೆ ಇರುತ್ತದೆ. ಮಾರ್ಚ್ ತಿಂಗಳ ಅಂತ್ಯಭಾಗದಿಂದ ಜೂನ್ ತಿಂಗಳ ಮಧ್ಯಭಾಗದವರೆಗೆ ಬೇಸಿಗೆಯಿರುತ್ತದೆ.
ಮಾನ್ಸೂನ್ ನಲ್ಲಿ ಸಾಮಾನ್ಯವಾಗಿ ಸಾಧಾರಣ ಮಳೆಯಿದ್ದು ಗಾಳಿಯಿಂದ ಕೂಡಿರುತ್ತದೆ. ಮೇಯಿಂದ ಅಕ್ಟೋಬರ್ ತಿಂಗಳು ಮಳೆಯ ದಿನಗಳಾಗಿದ್ದು ಈ ಸಮಯದಲ್ಲಿ ವಾತಾವರಣದ ಉಷ್ಣತೆ 21 ಡಿಗ್ರಿಯಿಂದ 34 ಡಿಗ್ರಿಯವರೆಗೆ ಇರುತ್ತದೆ. ಅಥವಾ 69.8 ಡಿಗ್ರಿ ಫ್ಯಾರನ್ ಹೀಟ್ ನಿಂದ 93.2 ಡಿಗ್ರಿ ಫ್ಯಾರನ್ ಹೀಟ್ ಉಷ್ಣತೆಯಿರುತ್ತದೆ.
ಅಕ್ಟೋಬರ್ ನಿಂದ ಫೆಬ್ರುವರಿಯವರೆಗೆ ಚಳಿಗಾಲವಿದ್ದು ಉಷ್ಣಾಂಶ 17 ಡಿಗ್ರಿಯಿಂದ 30 ಡಿಗ್ರಿಯವರೆಗೆ ಇರುತ್ತದೆ. ವಾತಾವರಣ ಈ ಸಮಯದಲ್ಲಿ ಏರಿಳಿತ ಕಾಣುವುದು ಸಹಜ.