ವುಡ್‍ವಿಲ್ಲೆ ಅರಮನೆ ಎಂಬುದು ಶಿಮ್ಲಾ ನಗರದ ಬಿಡುವಿಲ್ಲದ ಒಂದು ಕಟ್ಟಡವಾಗಿದೆ. ದಾಖಲೆಗಳ ಪ್ರಕಾರ ಇದು ಮೊದಲಿಗೆ ಬ್ರಿಟೀಷ್ ಸೇನೆಯ ಕಮಾಂಡರ್-ಇನ್-ಛೀಫ್ ಆಗಿದ್ದ ಜನರಲ್ ಸರ್ ವಿಲಿಯಂ ರೋಸ್ ಮ್ಯಾನ್ಸ್ ಫೀಲ್ಡ್ ರವರ ನಿವಾಸವಾಗಿತ್ತು. ಆನಂತರ ಇದರ ವಾರಸುದಾರತ್ವ ಹಲವರ ಕೈ ಬದಲಾಯಿಸಿತು. 1919ರಲ್ಲಿ ಇದು ಅಲಯನ್ಸ್ ಬ್ಯಾಂಕಿನವರ ವಶಕ್ಕೆ ಬಂದಿತ್ತು. 1926ರಲ್ಲಿ ಇದನ್ನು ಗುಜರಾತಿನ ರಾಜ ಭಗ್ವತ್ ಸಿಂಗ್ ಕೊಂಡು ಕೊಂಡನು. 1930ರಲ್ಲಿ ಆತ ಇದನ್ನು ತನ್ನ ಮಗಳಾದ ಜುಬ್ಬಲ್‍ನ ರಾಣಿ ಲೀಲಾಬಾಗೆ ಉಡುಗೊರೆಯಾಗಿ ನೀಡಿದನು. ಆನಂತರ 1938ರಲ್ಲಿ ಜುಬ್ಬಲ್‍ನ ರಾಜ ಇದರ ಹಳೆಯ ಕಟ್ಟಡವನ್ನು ಕೆಡವಿ ಹೊಚ್ಚ ಹೊಸತಾದ ಅದ್ಧೂರಿಯಾದ ಕಟ್ಟಡವನ್ನು ತನ್ನ ರಾಜ ಪರಿವಾರಕ್ಕಾಗಿ ನಿರ್ಮಿಸಿದನು. ಯುವರಾಜ ಉದಯ್ ಸಿಂಗ್ 1977ರಲ್ಲಿ ಈ ಕಟ್ಟಡವನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಿದನು.


Click it and Unblock the Notifications