Search
  • Follow NativePlanet
Share
ಮುಖಪುಟ » ಸ್ಥಳಗಳು» ಶಿಮ್ಲಾ

ಶಿಮ್ಲಾ - ಗಿರಿಧಾಮಗಳ ರಾಣಿ

83

ಶಿಮ್ಲಾ ನಗರವು ಒಂದು ಸುಂದರ ಗಿರಿಧಾಮವಾಗಿದ್ದು, ಹಿಮಾಚಲ್ ಪ್ರದೇಶದ ರಾಜಧಾನಿಯಾಗಿದೆ. ಈ ಸ್ಥಳವು " ಬೇಸಿಗೆಯ ಆಶ್ರಯ ತಾಣ" ಮತ್ತು " ಗಿರಿಧಾಮಗಳ ರಾಣಿ" ಎಂದೆ ಖ್ಯಾತಿ ಪಡೆದಿದೆ. ಇದು ಸಮುದ್ರ ಮಟ್ಟದಿಂದ 2202 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪ್ರಸ್ತುತ ನಾವು ನೋಡುತ್ತಿರುವ ಶಿಮ್ಲಾ ಜಿಲ್ಲೆಯು 1972ರಲ್ಲಿ ಆಸ್ತಿತ್ವಕ್ಕೆ ಬಂದಿತು. ಈ ಸ್ಥಳದ ಹೆಸರು ಕಾಳಿ ಮಾತೆಯ ಇನ್ನೊಂದು ಹೆಸರಾದ " ಶ್ಯಾಮಲ" ಎಂಬ ಹೆಸರಿನಿಂದ ಬಂದಿದೆ. ಜಖು, ಪ್ರೊಸ್ಪೆಕ್ಟ್, ಅಬ್ಸರ್ವೇಟರಿ, ಇಲಿಸಿಯಂ ಮತ್ತು ಬೇಸಿಗೆಗಳು ಶಿಮ್ಲಾದಲ್ಲಿರುವ ಪ್ರಮುಖ ಪರ್ವತಗಳಾಗಿವೆ. 1864ರಲ್ಲಿ ಈ ಸ್ಥಳವನ್ನು ಬ್ರಿಟೀಷ್ ಇಂಡಿಯಾದ ಬೇಸಿಗೆ ರಾಜಧಾನಿಯನ್ನಾಗಿ ಘೋಷಿಸಲಾಯಿತು. ಸ್ವಾತಂತ್ರಾನಂತರ ಶಿಮ್ಲಾವು ಪಂಜಾಬಿನ ರಾಜಧಾನಿಯಾಗಿ ಕಾರ್ಯನಿರ್ವಹಿಸಿತು. ಆನಂತರ ಇದು ಹಿಮಾಚಲ್ ಪ್ರದೇಶದ ರಾಜಧಾನಿಯಾಯಿತು.

ಈ ನಯನ ಮನೋಹರ ಗಿರಿಧಾಮವು ಪ್ರವಾಸಿಗರಿಗೆ ಅತ್ಯಾಕರ್ಷಕ ಸ್ಥಳಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ. ಪ್ರವಾಸಿಗರು ಇಲ್ಲಿ ವಿಶಾಲವಾದ ಲಕ್ಕರ್ ಬಜಾರ್ ಮತ್ತು ಸ್ಕ್ಯಾಂಡಲ್ ಪಾಯಿಂಟ್ ಎಂಬ ಸ್ಥಳದಿಂದ ಮೂಕವಿಸ್ಮಿತಗೊಳ್ಳುವ ಪರ್ವತ ಶ್ರೇಣಿ ಮತ್ತು ಕಣಿವೆಗಳ ದೃಶ್ಯವನ್ನು ನೋಡಿ ಸವಿಯಬಹುದು. ಜಖು ದೇವಾಲಯವು ಹನುಮಾನ್ ದೇವಾಲಯವಾಗಿದ್ದು, ಸಮುದ್ರ ಮಟ್ಟದಿಂದ 8048 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಅಲ್ಲದೆ ಕಲೋನೆಲ್ ಜೆ. ಟಿ ಬೊಯಿಲೌರವರು ವಿನ್ಯಾಸಗೊಳಿಸಿರುವ ಸುಂದರವಾದ ಚರ್ಚ್ ಇಲ್ಲಿದೆ. ಇದು ಗಾಜಿನ ತುಣುಕುಗಳಿಂದ ಶೃಂಗಾರಗೊಂಡಿದ್ದು, ಪ್ರಪಾತದ ಪಕ್ಕದಲ್ಲಿ ತಲೆ ಎತ್ತಿ ನಿಂತಿದೆ.

ಡೊರ್ಜೆ ಡ್ರಾಕ್ ಬೌದ್ಧ ಮಠವು ನೈಂಗಿಮ ಸಂಪ್ರದಾಯಕ್ಕೆ ಸೇರಿದ ಮಠವಾಗಿದ್ದು, ಟಿಬೇಟಿಯನ್ ಬೌದ್ಧ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ಇದರೊಂದಿಗೆ ಕಾಳಿ ಬರಿ ದೇವಾಲಯವನ್ನು ಕಾಳಿಮಾತೆಗಾಗಿ ಇಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷವು ಇಲ್ಲಿಗೆ ಸಹಸ್ರಾರು ಭಕ್ತಾಧಿಗಳು ಭೇಟಿ ಕೊಡುತ್ತಾರೆ. ದೀಪಾವಳಿ, ನವರಾತ್ರಿ ಮತ್ತು ದುರ್ಗಾ ಪೂಜೆಯಂತಹ ಹಿಂದೂ ಹಬ್ಬಗಳನ್ನು ಇಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತಿ ಹಾಗು ಸಂಭ್ರಮಗಳೊಂದಿಗೆ ಆಚರಿಸಲಾಗುತ್ತದೆ. ಭಕ್ತಾಧಿಗಳು ಇಲ್ಲಿರುವ ಹನುಮಾನ್ ದೇವಾಲಯವಾದ ಸಂಕಟ ಮೋಚನ್ ದೇವಾಲಯಕ್ಕೆ ಸಹ ಭೇಟಿಕೊಡಬಹುದು . ಇದು ಸಮುದ್ರ ಮಟ್ಟದಿಂದ 1975 ಮೀಟರ್ ಎತ್ತರದಲ್ಲಿದೆ. ಈ ದೇವಾಲಯವನ್ನು 1966ರಲ್ಲಿ ನಿರ್ಮಿಸಲಾಯಿತು. ಅಲ್ಲದೆ ಇಲ್ಲಿ ವಿವಿಧ ಹಿಂದೂ ದೇವತೆಗಳ ಪೂಜಾ ಮಂದಿರಗಳನ್ನು ಹೊಂದಿರುವ ವಿವಿಧ ಸಂಕೀರ್ಣಗಳನ್ನು ಸಹ ನಾವು ನೋಡಬಹುದು.

ಶಿಮ್ಲಾವು ವಸಾಹತು ಶಾಹಿ ಶೈಲಿಯ ಪಾರಂಪರಿಕ ಕಟ್ಟಡಗಳಿಗೆ ಹೆಸರುವಾಸಿಯಾಗಿದೆ. ಇವೆಲ್ಲವು ಬ್ರಿಟೀಷರ ವಾಸ್ತುಶೈಲಿಯನ್ನು ಪ್ರತಿನಿಧಿಸುತ್ತವೆ. ರೋಟ್ನಿ ಕೋಟೆಯು ಇಲ್ಲಿ ಮುಖ್ಯವಾಗಿ ಹೇಳಲೆ ಬೇಕಾಗಿರುವ ಸ್ಥಳವಾಗಿದೆ. ಇದು ಅಲನ್ ಅಕ್ಟಾವಿನ್ ಹ್ಯೂಮ್‍ರ ನಿವಾಸವಾಗಿತ್ತು. ಪ್ರವಾಸಿಗರು ಇಲ್ಲಿ ಮನೊರ್ ವಿಲ್ಲೆ ಮಹಲ್‍ನ್ನು ವೀಕ್ಷಿಸಬಹುದು. ಇಲ್ಲಿ 1945ರಲ್ಲಿ ಮಹಾತ್ಮ ಗಾಂಧಿ, ಜವಹಾರ್ ಲಾಲ್ ನೆಹರೂ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಮೌಲಾನ ಆಜಾದ್‍ರವರು ಲಾರ್ಡ್ ವಾವೆಲ್‍ರ ಜೊತೆಗೆ ಭಾರತದ ಸ್ವಾತಂತ್ರದ ಕುರಿತು ಚರ್ಚೆನಡೆಸಿದರು ಎಂಬ ಕಾರಣಕ್ಕೆ ಇದು ಖ್ಯಾತಿ ಪಡೆದಿದೆ. ಟೌನ್ ಹಾಲ್ ಇಲ್ಲಿರುವ ಇನ್ನೊಂದು ಆಕರ್ಷಕ ಪಾರಂಪರಿಕ ಕಟ್ಟಡವಾಗಿದೆ. ಇದು 1910ರಲ್ಲಿ ನಿರ್ಮಾಣಗೊಂಡಿತು. ಪ್ರಸ್ತುತ ಇದು ಶಿಮ್ಲಾದ ನಗರ ಸಭೆಯ ಕಛೇರಿಯನ್ನು ಹೊಂದಿದೆ. ವೈಸ್‍ರೀಗಲ್ ಲಾಡ್ಜ್ ಅಥವಾ ರಾಷ್ಟ್ರಪತಿ ನಿವಾಸ್ ಎಂದು ಕರೆಯಲಾಗುವ ಕಟ್ಟಡವನ್ನು ನಾವು ಇಲ್ಲಿ ಕಾಣಬಹುದು. ಇದು 1888ರಲ್ಲಿ ನಿರ್ಮಾಣಗೊಂಡ ಕಟ್ಟಡವಾಗಿದೆ. ಇದು ಆರು ಅಂತಸ್ತಿನ ಕಟ್ಟಡವಾಗಿದ್ದು, ಸುತ್ತಲು ಸುಂದರವಾದ ಹುಲ್ಲು ಹಾಸು ಮತ್ತು ಉದ್ಯಾನವನಗಳನ್ನು ನಾವು ಇಲ್ಲಿ ನೋಡಬಹುದು. ಪ್ರಸ್ತುತ ಈ ಕಟ್ಟಡದಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಅಡ್ವಾನ್ಸ್ ಡ್  ಸ್ಟಡಿ ಕೇಂದ್ರವು ಕಾರ್ಯ ನಿರ್ವಹಿಸುತ್ತಿದೆ. ಈ ಕಟ್ಟಡವು ಪುನರುಜ್ಜೀವನ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ. ಆ ಕಾರಣದಿಂದ ಇದನ್ನು ಶಿಮ್ಲಾದ ಪ್ರಮುಖ ಪ್ರವಾಸಿ ತಾಣವನ್ನಾಗಿಸಿದೆ.

ಗೈಯೆಟೆ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣವು ಹೆನ್ರಿ ಇರ್ವಿನ್‍ರವರಿಂದ ನಿರ್ಮಾಣಗೊಂಡಿದ್ದು, ಗೋಥಿಕ್ ವಿಕ್ಟೋರಿಯನ್ ವಾಸ್ತುಶೈಲಿಯನ್ನು ಪ್ರತಿನಿಧಿಸುತ್ತದೆ. ಈ ಕಟ್ಟಡದ ಸಂಕೀರ್ಣವು ಪ್ರವಾಸಿಗರಿಗೆ ಆಧುನಿಕ ಮತ್ತು ಸಾಂಪ್ರದಾಯಿಕವಾದ ಕಲಾವಸ್ತುಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ. ಈ ಕಟ್ಟಡದಲ್ಲಿ ಒಂದು ಸಭಾಂಗಣ ಮತ್ತು ಹಳೆಯ ಥಿಯೇಟರ್ ಇದೆ.  ವುಡ್‍ವಿಲ್ಲೆಯು ಜನರಲ್ ಸರ್ ವಿಲಿಯಂ ರೋಸ್ ಮ್ಯಾನ್ಸ್ ಫೀಲ್ಡ್ ರವರ ನಿವಾಸವಾಗಿತ್ತು. ಇವರು ಬ್ರಿಟೀಷರಕಾಲದಲ್ಲಿ ಭಾರತದ ಕಮಾಂಡರ್ - ಇನ್- ಛೀಫ್ ಆಗಿ ಕಾರ್ಯ ನಿರ್ವಹಿಸಿದರು. ಈ ಕಟ್ಟಡವನ್ನು 1977ರಲ್ಲಿ ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಯಿತು. ಗೋರ್ಟನ್ ದುರ್ಗ ಮತ್ತು ರೈಲ್ವೇ ಬೋರ್ಡ್ ಕಟ್ಟಡಗಳು ಶಿಮ್ಲಾದಲ್ಲಿನ ವಸಾಹತು ಕಾಲದ ವಾಸ್ತುಶಿಲ್ಪದ ಅದ್ಭುತಗಳ ಸಾಲಿನಲ್ಲಿ ನಿಂತಿವೆ.

ಹಿಮಾಲಯನ್ ಅವಿಯರಿ ( ಹಕ್ಕಿ ಗೂಡು)ಯು ಪ್ರವಾಸಿಗರಿಗೆ ವಿವಿಧ ಬಗೆಯ ಪಕ್ಷಿಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ. ಇದರಲ್ಲಿ ಈ ರಾಜ್ಯದ ಪಕ್ಷಿಯಾದ ಮೋನಲ್ ಸಹ ಇದೆ. ಇದು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಗ್ಲೆನ್ ಎಂಬ ಸ್ಥಳವು ಕಮರಿಯಿಂದ 4 ಕಿ,ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಅದ್ಭುತವಾದ ಝರಿಗಳ ಮತ್ತು ಹಸಿರಿನ ಸೊಬಗನ್ನು ಸವಿಯುವ ಅವಕಾಶವನ್ನು ಒದಗಿಸುತ್ತದೆ. ಪ್ರವಾಸಿಗರು ಅನ್ನಡೇಲ್‍ನಲ್ಲಿ ಸಹ ವಿಹಾರಕ್ಕೆ ಹೋಗಬಹುದು. ಬ್ರಿಟೀಷರ ಆಡಳಿತಾವಧಿಯಲ್ಲಿ ಇಲ್ಲಿನ ಹೊರಾಂಗಣದಲ್ಲಿ ರೇಸ್, ಪೋಲೊ ಮತ್ತು ಕ್ರಿಕೇಟ್ ಆಟಗಳನ್ನು ಆಡಲಾಗುತ್ತಿತ್ತಂತೆ. ಲಾರ್ಡ್ ಕರ್ಜನ್ 1903ರಲ್ಲಿ ಇಲ್ಲಿ ಐತಿಹಾಸಿಕ ಪುಟಾಣಿ ರೈಲು ಪ್ರಯಾಣವನ್ನು ಉದ್ಘಾಟಿಸಿದನಂತೆ. ಈ ಪ್ರಯಾಣವು ಅತ್ಯದ್ಭುತವಾದ 96 ಕಿ.ಮೀ ಗಳ ಪ್ರವಾಸವಾಗಿದ್ದು, ಪ್ರವಾಸಿಗರಿಗೆ ಸುಂದರವಾದ ಕಣಿವೆಗಳ ಮತ್ತು ಪರ್ವತಗಳ ಸೊಬಗನ್ನು ಸವಿಯುವ ಅವಕಾಶವನ್ನು ನೀಡುತ್ತದೆ.

ಸೋಲನ್ ಬ್ರಿವರಿ, ದರ್ಲಘಾಟ್, ಸ್ಕ್ಯಾಂಡಲ್ ಪಾಯಿಂಟ್, ಕಮ್ನ ದೇವಿ ದೇವಾಲಯ, ಜಖು ಬೆಟ್ಟ ಮತ್ತು ಗುರ್ಖಾ ಗೇಟ್‍ಗಳು ಇಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿವೆ. ಹಿಮಾಚಲ್ ಪ್ರದೇಶ್ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವು ಪಹರಿ ಮಿನಿಯೇಚರ್, ಮೊಘಲ್, ರಾಜಸ್ಥಾನಿ ಮತ್ತು ಸಮಕಾಲೀನ ವರ್ಣಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ಇಲ್ಲಿ ಹಲವಾರು ಕಂಚಿನ ಕಲಾಕೃತಿಗಳು, ಛಾಯಾಚಿತ್ರಗಳು, ಅಂಚೆ ಚೀಟಿಗಳು, ಮಾನವ ಶಾಸ್ತ್ರದ ವಸ್ತುಗಳನ್ನು ನಾವು ನೋಡಬಹುದು. ಶಿಮ್ಲಾವು ಪ್ರವಾಸಿಗರಿಗೆ ಅನುಪಮವಾದ ವ್ಯಾಪಾರ ಕೇಂದ್ರಗಳನ್ನು ಒದಗಿಸುತ್ತದೆ. ಮಾಲ್, ಲೋವರ್ ಬಜಾರ್ ಮತ್ತು ಲಕ್ಕರ್ ಗಳು ಇಲ್ಲಿನ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದು, ಪ್ರವಾಸಿಗರು ಇಲ್ಲಿ ಬೇಕಾದ್ದನ್ನು ಕೊಳ್ಳಬಹುದು. ಇವು ಮರದ ಕಲಾಕೃತಿಗಳಿಗೆ ಮತ್ತು ಆಭರಣಗಳಿಗೆ ಖ್ಯಾತಿಯನ್ನು ಪಡೆದಿವೆ.

ಶಿಮ್ಲಾವು ಭಾರತದಲ್ಲಿ ಅತ್ಯಂತ ದೊಡ್ಡ ಐಸ್ ಸ್ಕೇಟಿಂಗ್ ರಿಂಕ್‍ನ್ನು ಹೊಂದಿದೆ. ಚಳಿಗಾಲದಲ್ಲಿ ಈ ಅಂಗಣವು ನೈಸರ್ಗಿಕವಾದ ಹಿಮದಿಂದ ಮುಚ್ಚಲ್ಪಡುತ್ತದೆ. ಆಗ ಸ್ಕೇಟಿಂಗ್‍ನ ಮಜವನ್ನು ಅನುಭವಿಸಲು ಹೇಳಿ ಮಾಡಿಸಿದ ಸಮಯವಾಗಿದೆ ( ಡಿಸೆಂಬರ್ - ಫೆಬ್ರವರಿ). ಚಾರಣವು ಸಹ ಇಲ್ಲಿನ ಪ್ರಸಿದ್ಧ ಚಟುವಟಿಕೆಯಾಗಿದೆ. ಜುಂಗ, ಚೈಲ್, ಚುರ್ದಾರ್, ಶಲಿ ಪರ್ವತ, ಹಟು ಪರ್ವತ ಮತ್ತು ಕುಲುಗಳಿಗೆ ಶಿಮ್ಲಾದಿಂದ ಚಾರಣ ಮಾರ್ಗಗಳಿವೆ. ಅಲ್ಲದೆ ಪ್ರವಾಸಿಗರು ಶಿಮ್ಲಾದಿಂದ ಮೌಂಟೆನ್ ಬೈಕಿಂಗ್ ( ಸೈಕಲ್ ಸವಾರಿ) ಮೂಲಕ ನಲ್ಡೆಹರ ಮತ್ತು ಸಲೊಗ್ರಗಳಿಗೆ ಭೇಟಿ ಕೊಡಬಹುದು. ಬಿಯಾಸ್, ರಾವಿ ,ಚಿನಬ್ ಮತ್ತು ಝೀಲಮ್‍ನಂತಹ ನದಿಗಳು ಪ್ರವಾಸಿಗರಿಗೆ ನದಿಯಲ್ಲಿ ರಾಫ್ಟಿಂಗ್‍ ನಡೆಸುವ ಅವಕಾಶವನ್ನು ಒದಗಿಸುತ್ತದೆ.

ಶಿಮ್ಲಾವು ಸಾರಿಗೆಯ ಮೂರು ವಿಧಗಳ ಮೂಲಕ ಹೊರ ಪ್ರಪಂಚದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನೀವು ಸಿಮ್ಲಾಗೆ ಬರಲು ವಿಮಾನ, ರಸ್ತೆ ಮತ್ತು ರೈಲು ಮಾರ್ಗಗಳು ಲಭ್ಯವಿವೆ. ಜುಬ್ಬರ್ ಹಟ್ಟಿ ವಿಮಾನ ನಿಲ್ದಾಣವು ಶಿಮ್ಲಾಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಲ್ಲಿಗೆ ನಿಯಮಿತವಾಗಿ ವಿಮಾನಗಳು ಬಂದು ಹೋಗುತ್ತಿರುತ್ತವೆ. ಪ್ರವಾಸಿಗರು ಇಲ್ಲಿಗೆ ಕಲ್ಕ ರೈಲು ನಿಲ್ದಾಣದಿಂದ ಸಹ ತಲುಪಬಹುದು. ಹತ್ತಿರದ ಪ್ರಮುಖ ನಗರಗಳಿಂದ ಶಿಮ್ಲಾಗೆ ಬಸ್ಸುಗಳು ಸಹ ಬಂದು ಹೋಗುತ್ತಿರುತ್ತವೆ. ಚಳಿಗಾಲವು ಇಲ್ಲಿ ಸ್ಕೆಯಿಂಗ್ ಮತ್ತು ಐಸ್ ಸ್ಕೇಟಿಂಗ್‍ಗಳ ಮೋಜನ್ನು ಅನುಭವಿಸಲು ಹೇಳಿ ಮಾಡಿಸಿದ ಸಮಯವಾಗಿದೆ. ಆದರು ಬೇಸಿಗೆ ಕಾಲವು ಇಲ್ಲಿ ಸ್ಥಳ ವೀಕ್ಷಣೆಗೆ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಸಮಯವಾಗಿದೆ.

ಶಿಮ್ಲಾ ಪ್ರಸಿದ್ಧವಾಗಿದೆ

ಶಿಮ್ಲಾ ಹವಾಮಾನ

ಉತ್ತಮ ಸಮಯ ಶಿಮ್ಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶಿಮ್ಲಾ

  • ರಸ್ತೆಯ ಮೂಲಕ
    ಹತ್ತಿರದ ನಗರಗಳಿಂದ ಬಸ್ಸುಗಳು ಶಿಮ್ಲಾಗೆ ಬಂದು ಹೋಗುತ್ತಿರುತ್ತವೆ. ದೆಹಲಿಯಿಂದ ಡೀಲಕ್ಸ್ ಮತ್ತು ಸಾಮಾನ್ಯ ಬಸ್ಸುಗಳು ಶಿಮ್ಲಾದತ್ತ ಹೋಗುತ್ತಿರುತ್ತವೆ. ಇದರೊಂದಿಗೆ ಪ್ರವಾಸಿಗರು ದೆಹಲಿಯಿಂದ ಶಿಮ್ಲಾಗೆ ಎ. ಸಿ ಟ್ಯಾಕ್ಸಿಗಳಲ್ಲಿ ಸಹ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಶಿಮ್ಲಾದಲ್ಲಿ ಮೀಟರ್ ಗೇಜ್ ರೈಲು ನಿಲ್ದಾಣವಿದೆ. ಬ್ರಾಡ್‍ಗೇಜ್ ನಿಲ್ದಾಣವು ಇಲ್ಲಿಗೆ ಸಮೀಪದ ಕಲ್ಕದಲ್ಲಿದೆ. ದೇಶದ ಪ್ರಮುಖ ನಗರಗಳಿಂದ ಕಲ್ಕಗೆ ನಿರಂತರವಾಗಿ ರೈಲುಗಳು ಬಂದು ಹೋಗುತ್ತಿರುತ್ತವೆ. ಪ್ರವಾಸಿಗರು ಈ ನಿಲ್ದಾಣದಿಂದ ಶಿಮ್ಲಾಗೆ ಟ್ಯಾಕ್ಸಿಗಳಲ್ಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜುಬ್ಬರಹಟ್ಟಿ ವಿಮಾನ ನಿಲ್ದಾಣವು ಶಿಮ್ಲಾದಿಂದ 25 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣದಿಂದ ಶಿಮ್ಲಾಗೆ ಟ್ಯಾಕ್ಸಿಗಳು ದೊರೆಯುತ್ತವೆ. ವಿದೇಶಿ ಪ್ರವಾಸಿಗರು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿಮ್ಲಾಗೆ ತಲುಪಬಹುದು. ಈ ನಿಲ್ದಾಣವು ಇಲ್ಲಿಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ನಿಲ್ದಾಣವು ಪ್ರಮುಖ ನಗರ ಮತ್ತು ದೇಶಗಳ ವಿಮಾನ ನಿಲ್ದಾಣಗಳೊಂದಿಗೆ ಉತ್ತಮ ವಿಮಾನ ಯಾನ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat