Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಲ್ಲಾಂಗ್ » ಹವಾಮಾನ

ಶಿಲ್ಲಾಂಗ್ ಹವಾಮಾನ

ಚಳಿಗಾಲ ಹಾಗೂ ಮಳೆಗಾಲದ ನಂತರದ ಸಮಯವು, ಅಂದರೆ, ಮಾರ್ಚ್-ಏಪ್ರಿಲ್ ಮತ್ತು ಸೆಪ್ಟೆಂಬರ್-ಅಕ್ಟೋಬರ್ ಗಳ ನಡುವಿನ ಅವಧಿಯು ಶಿಲ್ಲಾಂಗ್ ಗೆ ಭೇಟಿ ನೀಡಲು ಅತಿ ಪ್ರಶಸ್ತ ಕಾಲ.  ಚಳಿಗಾಲದ ನಂತರದ ತಿಂಗಳುಗಳು ಅತೀ ಶೀತಲವೂ ಆಗಿರುವುದಿಲ್ಲ ಹಾಗೂ ಅತಿ ಮಳೆಯೂ ಬೀಳುವುದಿಲ್ಲ.  ಮಳೆಗಾಲದ ನಂತರದ ತಿಂಗಳುಗಳು ಹಿತವಾದ ಬಿಸಿಲಿನಿಂದ ಕೂಡಿದ್ದು, ರಮಣೀಯ ತಾಣಗಳಿಗೆ ಭೇಟಿ ನೀಡಲು ಸಕಾಲವಾಗಿದೆ.

ಬೇಸಿಗೆಗಾಲ

ಶಿಲ್ಲಾಂಗ್ ಪಟ್ಟಣವು ಆಹ್ಲಾದಕರ ಬೇಸಿಗೆಯನ್ನು ಅನುಭವಿಸುತ್ತದೆ ಹಾಗೂ ಈ ಸಮಯದಲ್ಲಿ ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ.  ಏಪ್ರಿಲ್ ತಿಂಗಳಿನಿಂದ ಅರಭಾವಾಗುವ ಬೇಸಗೆಯು ಜುಲೈ ನ ಮಧ್ಯಭಾಗದವರೆಗೆ ಮುಂದುವರೆಯುತ್ತದೆ.  ಆದರೆ, ಕೆಲವೊಮ್ಮೆ ಬೇಸಿಗೆಯಲ್ಲಿಯೂ ಕೂಡ ಪ್ರವಾಸಿಗರು ಭಾರಿ ಹಿಮಪಾತವನ್ನು ನಿರೀಕ್ಷಿಸಬಹುದು.  ಅದ್ದರಿಂದ, ಬೇಸಗೆಯಲ್ಲಿಯೂ ಸಹ ಹಗುರವಾದ, ಉಲ್ಲನ್ ಬಟ್ಟೆಗಳನ್ನು ಕೊಂಡೊಯ್ಯುವುದು ಒಳ್ಳೆಯದು.

ಮಳೆಗಾಲ

ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆಗಾಲವು ಸೆಪ್ಟೆಂಬರ್ ನವರೆಗೂ ಮುಂದುವರೆಯುತ್ತದೆ.  ಆದರೂ ಸಹ ಪರ್ವತ ಶ್ರೇಣಿಗಳು ನಿತ್ಯ ಮಳೆಯ ಸಂಗಾತಿಗಳಾಗಿರುವುದರಿಂದ, ಈ ಕಾಲಾವಧಿಗೂ ಬಹಳ ಮೊದಲು, ಅಥವಾ ಬಹಳ ನಂತರವೂ ಕೂಡ ಪ್ರವಾಸಿಗರು ಮಳೆಯನ್ನು ಅನುಭವಿಸಿದರೆ, ಅದರಲ್ಲಿ ಆಶ್ಚರ್ಯವೇನಿಲ್ಲ.  ಈ ಸಂಗತಿಯನ್ನು ನೆನಪಿಟ್ಟುಕೊಂಡು, ಶಿಲ್ಲಾಂಗ್ ಗೆ ಹೋಗುವಾಗ ಯಾವಾಗಲೂ ಹಗುರವಾದ ಉಲ್ಲನ್ ಬಟ್ಟೆಗಳನ್ನು ಒಯ್ಯುವುದು ಒಳ್ಳೆಯದು.

ಚಳಿಗಾಲ

ಶಿಲ್ಲಾಂಗ್ ನಲ್ಲಿ ಚಳಿಗಾಲವು ಭೀಷಣವಾಗಿದ್ದು, ತಾಪಮಾನವು 1 ಡಿಗ್ರಿ ಸೆಲ್ಸಿಯಸ್ ನಷ್ಟು ಕೆಳಕ್ಕೆ ಬೀಳುತ್ತದೆ. ಮುಂಜಾನೆಯ ಮಂಜು ಮುಸುಕು ಹಾಗೂ ದಿನದ ವೇಳೆಯಲ್ಲಿ ದಟ್ಟನೆಯ ಇಬ್ಬನಿಯು ಶಿಲ್ಲಾಂಗ್ ನ ಚಳಿಗಾಲದ ಸಾಮಾನ್ಯ ನೋಟ. ಇಬ್ಬನಿಯು ಬೀಳದ್ದಿದ್ದಾಗ , ಸೂರ್ಯನು ಹಿತವಾಗಿ ಪ್ರಕಾಶಿಸಿ, ವಾತಾವರಣವನ್ನು ಅಹ್ಲಾದಕರವನ್ನಗಿ ಮಾಡುತ್ತಾನೆ.