Search
  • Follow NativePlanet
Share
ಮುಖಪುಟ » ಸ್ಥಳಗಳು» ಸೇವಾಗ್ರಾಮ

ಸೇವಾಗ್ರಾಮ - ಕೆಲವೊಂದು ಮಾಹಿತಿ

7

ಸೇವಾಗ್ರಾಮವು ಒಂದು ಸಣ್ಣ ಪಟ್ಟಣವಾಗಿದ್ದು ಶಾಂತಿ ಬಯಸುವ ಪ್ರತಿಯೊಬ್ಬರಿಗು ಪ್ರಶಾಂತವಾಗಿ ಕಾಲಕಳೆಯಲು ಅನುವು ಮಾಡಿಕೊಡುತ್ತದೆ. ಈ ಗ್ರಾಮವು ಹಚ್ಚ ಹಸಿರಿನ ಕಾಡುಗಳ ನಡುವೆ ಮನೆಮಾಡಿಕೊಂಡಿದ್ದು, ಧ್ಯಾನಾಸಕ್ತರಿಗೆ ಮತ್ತು ಆಧ್ಯಾತ್ಮಿಕದ ಒಲವು ಉಳ್ಳವರಿಗೆ ಅತ್ಯಾನಂದ ನೀಡುವ ತಾಣವಾಗಿದೆ.

ಸೇವಾಗ್ರಾಮವು ಮಹಾರಾಷ್ಟ್ರ ರಾಜ್ಯದಲ್ಲಿರುವ ಒಂದು ಗ್ರಾಮ. ಸೇವಾಗ್ರಾಮ ಹೆಸರು ಸೇವೆಗಾಗಿ ಮುಡಿಪಾದ ಗ್ರಾಮ ಎಂದು ಸೂಚಿಸುತ್ತದೆ. ಈ ಊರಿನ ಮೊದಲ ಹೆಸರು ಶೆಗಾಂವ್. 1940 ರಲ್ಲಿ ಮಹಾತ್ಮ ಗಾಂಧೀಜಿಯವರು ಇಲ್ಲಿ ತಂಗಲು ನಿರ್ಧರಿಸಿದಾಗ ಈ ಊರಿಗೆ ಸೇವಾಗ್ರಾಮ ಎಂಬ ಹೆಸರು ಬಂದಿತು.

ಈ ಊರು ವಾರ್ಧಾ ಜಿಲ್ಲಾ ಕೇಂದ್ರದಿಂದ 8 ಕಿ.ಮೀ ದೂರದಲ್ಲಿದೆ. ಅಲ್ಲದೆ ಭಾರತೀಯರ ಅತಿಥಿ ಸತ್ಕಾರ ಮತ್ತು ಆದರಗಳಿಗೆ ದ್ಯೋತಕವಾಗಿ ನಿಂತಿದೆ.

ಸೇವಾಗ್ರಾಮ ಆಶ್ರಮ

ಸೇವಾಗ್ರಾಮ ಆಶ್ರಮವು ಗಾಂಧೀಜಿಯವರ ಜೀವನ ಶೈಲಿಗೆ ಅತ್ಯಂತ ನಿಕಟ ಸಂಬಂಧವನ್ನು ಹೊಂದಿದೆ. ಇಲ್ಲಿ ಗಾಂಧೀಜಿಯವರು ತಮ್ಮ ಪತ್ನಿ ಕಸ್ತೂರಬಾ ಅವರೊಂದಿಗೆ ತಂಗಿದ್ದ ಕುಟೀರವು ಇಂದಿಗೂ ದೃಢವಾಗಿ ನಿಂತಿರುವುದನ್ನು ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ವೀಕ್ಷಿಸಬಹುದು. ಇಲ್ಲಿನ ಕುಟೀರಗಳನ್ನು ಯಾವುದೇ ವಸ್ತುಗಳಿಂದ ಶೃಂಗಾರಗೊಳಿಸಿಲ್ಲ, ಬದಲಾಗಿ ಅವು ಸ್ವಾಭಾವಿಕವಾಗಿಯೆ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಅಲ್ಲದೆ ಇದಕ್ಕಾಗಿ ನಾರಿನ, ಬಿದಿರಿನ ಮತ್ತು ಹಸಿ ಮಣ್ಣಿನ ಹೆಂಚುಗಳನ್ನು ಬಳಸಲಾಗಿದ್ದು, ಇವೆಲ್ಲವು ಗಾಂಧೀಜಿಯವರು ಅಳವಡಿಸಿಕೊಂಡಿದ್ದ ಸರಳ ಜೀವನದೆಡೆಗೆ ಬೆಳಕು ಚೆಲ್ಲುತ್ತವೆ.

ಇಲ್ಲಿನ ಆಶ್ರಮದಲ್ಲಿ ಮಹದೇವ ಕುಟಿ, ಕಿಶೋರ್ ಕುಟಿ, ಪರ್ಚುರೆ ಕುಟಿಯಂತಹ ಕೆಲವು ಕುಟೀರಗಳನ್ನು ಕಾಣಬಹುದು. ಇತಿಹಾಸದ ಆಸಕ್ತಿಯುಳ್ಳವರಿಗೆ ಈ ಸ್ಥಳವು ಸ್ವಾತಂತ್ರ್ಯಾಪೂರ್ವ ಕಾಲದ ಸಂವೇದನೆಯನ್ನು ಒದಗಿಸುತ್ತದೆ.

ಹಿಂದೆ ಗಾಂಧೀಜಿಯವರು ಇಲ್ಲಿ ಆಶ್ರಮವನ್ನು ಸ್ಥಾಪಿಸಿದಾಗ ಸುಮಾರು 1000 ಜನರು ಇಲ್ಲಿ ತಂಗಿದ್ದರು. ಇಂದು ಸೇವಾಗ್ರಾಮವು ಸ್ವಾತಂತ್ರ್ಯ ಭಾರತದ ರಾಷ್ಟ್ರ ಪಿತನ ಜೀವನಶೈಲಿಯನ್ನು ಖುದ್ದು ನೋಡುವ ಆಸಕ್ತಿಯಿಂದ ಆಗಮಿಸುವ ಪ್ರವಾಸಿಗರಿಂದ ವರ್ಷವಿಡೀ ತುಂಬಿ ತುಳುಕುವ ಗ್ರಾಮವಾಗಿದೆ.

ಸೇವಾಗ್ರಾಮಕ್ಕೆ ಒಮ್ಮೆ ಭೇಟಿಕೊಟ್ಟರೆ ಈ ಗ್ರಾಮವು ತನ್ನ ಮನಮೋಹಕ ಸೌಂದರ್ಯದಿಂದಾಗಿ ಮತ್ತು ಅತಿಥಿ ಸತ್ಕಾರದಿಂದಾಗಿ ನಿಮ್ಮನ್ನು ಮರುಳು ಮಾಡಿಬಿಡುತ್ತದೆ.

ಸೇವಾಗ್ರಾಮ ಪ್ರಸಿದ್ಧವಾಗಿದೆ

ಸೇವಾಗ್ರಾಮ ಹವಾಮಾನ

ಉತ್ತಮ ಸಮಯ ಸೇವಾಗ್ರಾಮ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೇವಾಗ್ರಾಮ

  • ರಸ್ತೆಯ ಮೂಲಕ
    ಸೇವಾಗ್ರಾಮಕ್ಕೆ ತಲುಪಲು ಹತ್ತಿರದ ನಾಗ್ಪುರ, ವಾರ್ಧಾ ಹಾಗು ಮುಂಬೈ, ಹೈದರಾಬಾದ್, ನಾಶಿಕ್, ಭೂಪಾಲ್, ಕಾನ್ಪುರ, ವಿಶಾಖ ಪಟ್ಟಣ, ಇಂದೋರ್, ವಿಜಯವಾಡ ಮತ್ತು ಪುಣೆಗಳಂತಹ ಹೊರ ರಾಜ್ಯದ ನಗರಗಳಿಂದಲು ಬಸ್ಸುಗಳ ಸೇವೆ ಲಭ್ಯವಿದೆ. ಈ ಬಸ್ಸುಗಳು ಸರ್ಕಾರಿ ಅಥವಾ ಖಾಸಗಿ ಪ್ರವಾಸ ನಿರ್ವಾಹಕರಿಗೆ ಸೇರಿದ್ದಾಗಿರಬಹುದು. ಇವು ನಿಮ್ಮನ್ನು ಸೇವಾಗ್ರಾಮಕ್ಕೆ ಸುಲಭವಾಗಿ ತಲುಪಿಸಲು ನೆರವಾಗುತ್ತವೆ. ಬಸ್ಸು ಪ್ರಯಾಣ ದರವು ನೀವು ಯಾವ ಮಾದರಿಯ ಬಸ್ಸಿನಲ್ಲಿ ಪ್ರಯಾಣಿಸುತ್ತೀರಿ ಎಂಬುದನ್ನು ಅವಲಂಬಿಸಿದೆ. ದರವು ಸಾಮಾನ್ಯ, ಸುವಿಹಾರಿ ಅಥವಾ ಅರೆ ಸುವಿಹಾರಿ ಬಸ್ಸುಗಳಿಗೆ ಅನುಗುಣವಾಗಿ ಬದಲಾಗುತ್ತದೆ. ನಾಗ್ಪುರದಿಂದ ಸೇವಾಗ್ರಾಮಕ್ಕೆ ಬಸ್ಸಿನಲ್ಲಿ ತಲುಪಲು ತಗುಲುವ ಅಂದಾಜು ದರ, ಪ್ರತಿಯೊಬ್ಬರಿಗೆ 100 ರೂಪಾಯಿ ಅಷ್ಟೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೇವಾಗ್ರಾಮವು ನಾಗ್ಪುರ ರೈಲು ನಿಲ್ದಾಣಕ್ಕೆ ಹತ್ತಿರದಲ್ಲಿ ಅಂದರೆ 75 ಕಿ.ಮೀ ದೂರದಲ್ಲಿ ಇದೆ. ನಾಗ್ಪುರ ರೈಲು ನಿಲ್ದಾಣವು ಮಹಾರಾಷ್ಟ್ರದ ಹಲವು ರೈಲು ನಿಲ್ದಾಣದಗಳು ಮತ್ತು ಹೊರರಾಜ್ಯದ ನಿಲ್ದಾಣಗಳೊಂದಿಗೆ ಉತ್ತಮ ರೈಲು ಸಂಪರ್ಕ ಸೇವೆಯನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಸೇವಾಗ್ರಾಮ ತಲುಪಲು ಸುಲಭಾವಾಗಲೆಂದು ಟ್ಯಾಕ್ಸಿಗಳ ವ್ಯವಸ್ಥೆ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸೇವಾಗ್ರಾಮವು ನಾಗ್ಪುರ ನಗರಕ್ಕೆ ಸಮೀಪದಲ್ಲಿದೆ. ಹಾಗಾಗಿ ವಿಮಾನದಲ್ಲಿ ಸೇವಾಗ್ರಾಮಕ್ಕೆ ತಲುಪಲು ಬಯಸುವವರಿಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣವು ಅತ್ಯಂತ ಒಳ್ಳೆಯ ಸೌಲಭ್ಯವನ್ನು ಒದಗಿಸುತ್ತದೆ. ಇಲ್ಲಿಂದ ಭಾರತದ ಇತರ ನಗರಗಳಿಗು ಮತ್ತು ವಿದೇಶಕ್ಕು ನಿರಂತರವಾಗಿ ವಿಮಾನಗಳ ಹಾರಾಟದ ವ್ಯವಸ್ಥೆ ಇದೆ. ಅಲ್ಲದೆ ಹೈದರಾಬಾದ್, ಮುಂಬೈ, ಪುಣೆ ಮತ್ತು ದೆಹಲಿಗಳಿಂದ ನಾಗ್ಪುರಕ್ಕೆ ಪ್ರತಿದಿನ ವಿಮಾನ ಯಾನದ ಸೌಲಭ್ಯವಿದೆ. ವಿಮಾನಯಾನದ ಶುಲ್ಕವು 4,000 ದಿಂದ 7,000 ರೂಪಾಯಿಗಳವರೆಗೆ ಇರುತ್ತದೆ. ವಿಮಾನನಿಲ್ದಾಣದಿಂದ ಸೇವಾಗ್ರಾಮಕ್ಕೆ ತಲುಪಲು ಕಾರು ಮತ್ತು ಕ್ಯಾಬ್ ಗಳ ವ್ಯವಸ್ಥೆ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City