Search
  • Follow NativePlanet
Share
ಮುಖಪುಟ » ಸ್ಥಳಗಳು » ಸವಾಯಿ ಮಾಧೋಪುರ್ » ಹವಾಮಾನ

ಸವಾಯಿ ಮಾಧೋಪುರ್ ಹವಾಮಾನ

ಸವಾಯಿ ಮಾಧೊಪುರಕ್ಕೆ ಭೇಟಿಕೊಡಲು ಅತ್ಯುತ್ತಮ ಅವಧಿ ಚಳಿಗಾಲವಾಗಿದೆ. ಈ ಸಮಯದಲ್ಲಿ ಇಲ್ಲಿನ ಹವಾಮಾನವು ಸ್ವಲ್ಪ ತಂಪಾಗಿ ಮತ್ತು ಹಿತದಿಂದ ಕೂಡಿರುತ್ತದೆ. ಬಹಳಷ್ಟು ಪ್ರವಾಸಿಗರು ಅಕ್ಟೋಬರ್ ನಿಂದ ಏಪ್ರಿಲ್ ವರೆಗೆ ಈ ನಗರಕ್ಕೆ ಭೇಟಿಕೊಡುತ್ತಿರುತ್ತಾರೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್) : ಈ ನಗರದಲ್ಲಿ ಬೇಸಿಗೆಯು ಸ್ವಲ್ಪ ಮಟ್ಟಿಗೆ ಬಿಸಿಲಿನಿಂದ ಕೂಡಿರುತ್ತದೆ. ಅಲ್ಲದೆ ಮೇ ತಿಂಗಳು ಇಲ್ಲಿನ ಅತಿ ಹೆಚ್ಚು ಬಿಸಿಲಿನಿಂದ ಕೂಡಿದ ತಿಂಗಳಾಗಿದೆ. ಮಾರ್ಚ್ ತಿಂಗಳ ಅಂತ್ಯ ಭಾಗದಲ್ಲಿ ಶುರುವಾಗುವ ಬೇಸಿಗೆಯು ಜೂನ್ ಅಂತ್ಯಭಾಗದವರೆಗೆ ವಿಸ್ತರಿಸಿರುತ್ತದೆ. ಏಪ್ರಿಲ್ ನಿಂದ ಜೂನ್ ತಿಂಗಳುಗಳವರೆಗೆ ಇಲ್ಲಿನ ಉಷ್ಣಾಂಶವು ಸುಮಾರು 30° ಯಿಂದ 45° ಸೆಲ್ಶಿಯಸ್ ವರೆಗೆ ಇರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್): ಮಳೆಗಾಲದಲ್ಲಿ ಸವಾಯಿ ಮಾಧೊಪುರ್ ಸ್ವಲ್ಪ ಮಟ್ಟಿಗೆ ಬೆಚ್ಚಗೆ ಹಾಗು ಅತಿಯಾದ ಆರ್ದ್ರತೆಯಿಂದ ಕೂಡಿರುತ್ತದೆ. ಇಲ್ಲಿ ಮಳೆಯು ಸಾಮಾನ್ಯವಾಗಿ ಜೂನ್ ಅಂತ್ಯಭಾಗದಲ್ಲಿ ಶುರುವಾಗಿ ಸೆಪ್ಟೆಂಬರ್ ಮಧ್ಯ ಭಾಗದವರೆಗೆ ಮುಂದುವರೆಯುತ್ತದೆ. ಈ ನಗರವು ಸಾಮಾನ್ಯವಾಗಿ ಸಂಕ್ಷಿಪ್ತವಾದ ಗುಡುಗು ಮತ್ತು ಮಿಂಚುಗಳಿಂದ ಕೂಡಿದ ಅಲ್ಪ ಪ್ರಮಾಣದ ಮಳೆಯನ್ನು ಕಾಣುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಸವಾಯಿ ಮಾಧೊಪುರದಲ್ಲಿ ಚಳಿಗಾಲವು ಸ್ವಲ್ಪ ತಂಪಾಗಿ ಮತ್ತು ಹಿತವಾಗಿರುತ್ತದೆ. ಇದು ನವೆಂಬರ್ ನಿಂದ ಫೆಬ್ರವರಿಯವರೆಗೆ ಹರಡಿಕೊಂಡಿರುತ್ತದೆ. ಈ ಸಮಯದಲ್ಲಿ ಇಲ್ಲಿನ ದಿನದ ಉಷ್ಣಾಂಶವು 20° ಸೆಲ್ಶಿಯಸ್ ನಷ್ಟಿದ್ದು, ಹಿತವಾಗಿ ಮುದನೀಡುತ್ತದೆ. ಹಾಗೆಯೇ ರಾತ್ರಿಯ ಉಷ್ಣಾಂಶವು ಹತ್ತಿರ ಹತ್ತಿರ 2° ಯಷ್ಟು ಹೆಪ್ಪುಗಟ್ಟುವಂತಹ ಉಷ್ಣಾಂಶವನ್ನು ಹೊಂದಿದ್ದು, ವಿಪರೀತ ಚಳಿಯಿಂದ ಕೂಡಿರುತ್ತದೆ.