Search
  • Follow NativePlanet
Share

ಸತನಾ - ಭಾರತದ ಸಿಮೆಂಟ್ ಸಿಟಿ

12

ಸತನಾ ಮಧ್ಯಪ್ರದೇಶದಲ್ಲಿರುವ ಆಕರ್ಷಕ ನಗರವಾಗಿದೆ. ಇದು ಪ್ರಾಚೀನ ಭಾರತದ ವೈಭವವನ್ನು ಎತ್ತಿ ಹಿಡಿಯುವ ಮತ್ತು ಧಾರ್ಮಿಕ, ಪುರಾಣಗಳ ಸ್ಮರಣೆ ನೀಡುವ ನಗರವಾಗಿದೆ. ಐತಿಹಾಸಿಕವಾಗಿ ಇದು ಬಘೆಲ್ಖಂಡ್ ಪ್ರದೇಶದ ಒಂದು ಭಾಗ ಎನ್ನಲಾಗಿದ್ದು,ಅತ್ಯಂತ ಹಳೆಯ ನಗರವಾದ ಬರ್ಹತ್ ಮತ್ತು ವಿಶ್ವಪ್ರಸಿದ್ಧ ಖಜುರಾಹೋ ದೇವಸ್ಥಾನಗಳ ಸಂಕೀರ್ಣಕ್ಕೆ ಸತನಾ ಹತ್ತಿರದಲ್ಲಿದೆ. ಸತನಾದಲ್ಲಿ ಹೇರಳ ಪ್ರಮಾಣದಲ್ಲಿ ಸುಣ್ಣದ ಕಲ್ಲು ಮತ್ತು ಡೊಲೋಮೈಟ್ ಗಳು ದೊರಕುತ್ತವೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸಿಮೆಂಟ್ ತಯಾರಿಸುವ ಜಿಲ್ಲೆಗಳಲ್ಲಿ ಒಂದಾಗಿದೆ. ಸತನಾದಲ್ಲಿ ಹಲವಾರು ಸಿಮೆಂಟ್ ಕಾರ್ಖಾನೆಗಳಿದ್ದು, ಅಲ್ಲಿನ ಸ್ಥಳೀಯರಿಗೆ ಆರ್ಥಿಕವಾಗಿ ನೆರವಾಗುತ್ತಿದೆ.

ಸತನಾ ಸುತ್ತಮುತ್ತಲ ಪ್ರವಾಸಿ ಕ್ಷೇತ್ರಗಳು

ಸತನಾದ ಪ್ರವಾಸಿ ಆಕರ್ಷಣೆಗಳು ಧಾರ್ಮಿಕ ಮತ್ತು ಪ್ರಾಚೀನ ಸಂಸ್ಕೃತಿಯ ಮಿಶ್ರಣ ಎನ್ನಬಹುದು. ಚಿತ್ರಕೂಟ ಧಾಮ ಮತ್ತು ಮೈಹಾರ್ ಬಹಳ ಮುಖ್ಯವಾಗಿವೆ, ಇತರ ಧಾರ್ಮಿಕ ತಾಣಗಳ ಪೈಕಿ,  ಧಾರ್ವರಿ ಸಾಯಿ ಬಾಬಾ ಮಂದಿರ, ಶಾರದಾ ದೇವಿ ದೇವಾಲಯ, ವೆಂಕಟೇಶ ದೇವಾಲಯಗಳನ್ನು ಸತನಾ ಒಳಗೊಂಡಿದೆ. ಇತರೆ ಆಕರ್ಷಣೆಗಳಲ್ಲಿ ಮಾಧವಗಢ್ ಕೋಟೆ, ಗಿಧಾಕೂಟ ಮತ್ತು ಜಗತ್ವೇದ್ ತಲಾಬ್ ಸೇರಿವೆ. ಸತನಾಕ್ಕೆ ಹೋದವರು ಅವಲಕ್ಕಿ, ಜಿಲೇಬಿ, ಲೋತನ್ ಕೆ ಮುಂಗೌಡಿ ಮತ್ತು ದಹಿ ವಡೆ ತಿನ್ನಲೇ ಬೇಕು. ಏಕೆಂದರೆ ಅಷ್ಟು ಪ್ರಸಿದ್ಧವಾಗಿವೆ ಇಲ್ಲಿನ ಈ ಖಾದ್ಯಗಳು.

ಸತನಾ ಹೋಗಲು ಉತ್ತಮ ಸಮಯ

ವಾತಾವರಣದ ಉಷ್ಣಾಂಶದಿಂದ ಮಧ್ಯ ಪ್ರದೇಶದಲ್ಲಿರುವ ಸತನಾ ಬೇಸಿಗೆಯಲ್ಲಿ ಉಷ್ಣ ತಾಪಮಾನ, ಮಳೆಗಾಲದಲ್ಲಿ ಮಳೆಯಿಂದಾಗಿ ಆಹ್ಲಾದಕರ ವಾತಾವರಣ ಮತ್ತು ಚಳಿಗಾಲದಲ್ಲಿ ಚಳಿಯಿಂದ ಕೂಡಿದ ವಾತಾವರಣವನ್ನು ಹೊಂದಿರುತ್ತದೆ. ಅಕ್ಟೋಬರ್ ನಿಂದ ಮಾರ್ಚ್ ಸತನಾ ಪ್ರವಾಸಕ್ಕೆ ಉತ್ತಮ ಕಾಲ.

ಸತನಾ ತಲುಪುವ ಬಗೆ

ಸತನಾವನ್ನು ವಿಮಾನ, ರಸ್ತೆ ಮತ್ತು ರೈಲು ಮೂರೂ ಮಾರ್ಗಗಳಲ್ಲಿ ಸುಲಭವಾಗಿ ತಲುಪಬಹುದು. ಹತ್ತಿರದಲ್ಲಿರುವ ಜಬಲ್ಪೂರ್ ದಲ್ಲಿ ಕೂಡ ಸಣ್ಣ ವಿಮಾನ ನಿಲ್ದಾಣವಿದ್ದು ಅಲ್ಲಿಂದ ರಸ್ತೆ ಮೂಲಕ ತಲುಪಬಹುದು. ಹಾಗೆಯೇ ರಸ್ತೆ ಮತ್ತು ರೈಲು ಮಾರ್ಗವಾಗಿ ಕೂಡ ಸುಲಭವಾಗಿ ತಲುಪಬಹುದಾಗಿದೆ.

ಸತನಾ ಪ್ರಸಿದ್ಧವಾಗಿದೆ

ಸತನಾ ಹವಾಮಾನ

ಉತ್ತಮ ಸಮಯ ಸತನಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸತನಾ

  • ರಸ್ತೆಯ ಮೂಲಕ
    ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸಾಕಷ್ಟು ಖಾಸಗಿ ಬಸ್ಸಿನ ವ್ಯವಸ್ಥೆ ಇದೆ. ಇದು ರಾಷ್ಟ್ರೀಯ ಹೆದ್ದಾರಿ 7 ಮತ್ತು 75 ಕ್ಕೆ ಸಂಪರ್ಕ ಹೊಂದಿರುವುದರಿಂದ ಮಧ್ಯಪ್ರದೇಶದ ಜಬಲ್ಪೂರ್, ಭೂಪಾಲ್, ಇಂದೋರ್ ಮತ್ತು ಹೊರ ಭಾಗಗಳಾದ ವಾರಣಾಸಿ, ರೇವಾ, ಅಲಹಾಬಾದ್ ಗಳಿಗೆ ಸುಲಭ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸತನಾದಲ್ಲಿ ರೈಲ್ವೇ ನಿಲ್ದಾಣವಿದೆ ಮತ್ತು ಇದು ಮುಖ್ಯ ನಗರಗಳಿಗೆ ಸಂಪರ್ಕ ಹೊಂದಿದೆ. ಇದು ಮುಂಬೈ -ಹೌರ ಮಾರ್ಗವಾಗಿ ಬರುವುದರಿಂದ ಎಲ್ಲ ಕಡೆಗಳಿಂದ ಸಂಪರ್ಕ ಸುಲಭವಾಗಿದೆ. ಸತನಾ ತಲುಪಲು ರೈಲು ಮಾರ್ಗ ಉತ್ತಮ ಮಾರ್ಗ ಎನ್ನಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸತಾನಾದಲ್ಲೂ ಒಂದು ವಿಮಾನ ನಿಲ್ದಾಣವಿದೆ. ಆದರೆ ಅದು ಸಣ್ಣದು, ಅತಿ ಮಿತ ಪ್ರಮಾಣದಲ್ಲಿ ಸಂಪರ್ಕವನ್ನು ಹೊಂದಿದೆ. ಆದ್ದರಿಂದ 220 ಕಿ ಮೀ ಅಂತರದಲ್ಲಿರುವ ಜಬಲ್ಪೂರ್ ಹತ್ತಿರದ ವಿಮಾನ ನಿಲ್ದಾಣ. ಅಲ್ಲಿಂದ ಟ್ಯಾಕ್ಸಿ ಮೂಲಕ ಸತನಾ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun