Search
  • Follow NativePlanet
Share
ಮುಖಪುಟ » ಸ್ಥಳಗಳು » ಸತಾರಾ » ಹವಾಮಾನ

ಸತಾರಾ ಹವಾಮಾನ

ಬೆಟ್ಟಗಳ ನಡುವೆ ಇರುವ ಸತಾರಾ ನಗರಕ್ಕೆ ಉತ್ತೇಜಕ ಹವಾಮಾನದ ಆಶೀರ್ವಾದವಿದೆ. ಇದು ಮುಖ್ಯವಾಗಿ ಉಷ್ಣವಲಯದ ತೇವ ಮತ್ತು ಒಣ ಹವಾಗುಣ ಹೊಂದಿದ್ದು, ಆಹ್ಲಾದಕರ ಹವಾಮಾನವಿರುವುದರಿಂದ ಎಲ್ಲಾ ಋತುಗಳಲ್ಲಿ ಚಳಿಗಾಲವು ಸತಾರಾದ ಭೇಟಿಗೆ ಅತ್ಯುತ್ತಮ ಕಾಲವಾಗಿದೆ.

ಬೇಸಿಗೆಗಾಲ

ಸತಾರಾವು ಬಿಸಿಯಾದ ಬೇಸಿಗೆಯನ್ನು ಅನುಭವಿಸುತ್ತಿದ್ದು ತಾಪಮಾನವು  27 ° C ನಿಂದ 35 ° C  ವರೆಗೆ ವಿಸ್ತರಿಸುತ್ತಿರುತ್ತದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಉಲ್ಬಣಿಸುವ ಶಾಖದಿಂದಾಗಿ ಈ ಅವಧಿಯಲ್ಲಿ ಸ್ಥಳಕ್ಕೆ ಭೇಟಿ ನೀಡುವುದು ಅಷ್ಟೊಂದು ಸೂಕ್ತವಲ್ಲ.

ಮಳೆಗಾಲ

ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳನ್ನು ಮಳೆಗಾಲದ ತಿಂಗಳುಗಳೆಂದು ಹೆಸರಿಸಬಹುದು. ಈ ಅವಧಿಯಲ್ಲಿ ಬೇಸಿಗೆಯನ್ನು ಹೊಡೆದೋಡಿಸುವಷ್ಟು ಭಾರಿ ಮಳೆ ಬೀಳುತ್ತಿದ್ದು ಈ ಕಾಲದಲ್ಲಿ ಪ್ರದೇಶವು ಅತ್ಯಂತ ಸೌಂದರ್ಯಯುಕ್ತವಾಗಿ ಕಾಣುತ್ತದೆ. ನೀವು ಮಳೆ ಆನಂದಿಸುವವರಾಗಿದ್ದಲ್ಲಿ ಈ ಸಮಯದಲ್ಲಿ ಪ್ರಯಾಣ ಒಂದು ಮೋಜಿನ ಅನುಭವ ನೀಡುತ್ತದೆ.

ಚಳಿಗಾಲ

ನವೆಂಬರ್ನಿಂದ ಫೆಬ್ರವರಿವರೆಗೆ ಹರಡಿಕೊಳ್ಳುವ ಚಳಿಗಾಲವು ಸತಾರಾದಲ್ಲಿ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಕಾಲದಲ್ಲಿ  ತಾಪಮಾನ 15 ° C ನಿಂದ 31° C ವರೆಗೆ ಬದಲಾಗುತ್ತಿರುತ್ತಿದ್ದು, ಈ ಅವಧಿಯಲ್ಲಿ ಸತಾರಾಕ್ಕೆ ಭೇಟಿ ನೀಡಬಯಸುವವರು ಉಣ್ಣೆಯ ಉಡುಪುಗಳನ್ನು ಅವಶ್ಯವಾಗಿ ಕೊಂಡೊಯ್ಯಬೇಕು.