Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಿ » ಹವಾಮಾನ

ಸಾಂಗ್ಲಿ ಹವಾಮಾನ

ಸಾಂಗ್ಲಿ ನಗರದ ಹವಾಗುಣವು ವರ್ಷ ಪೂರ್ತಿ ಪ್ರಮುಖವಾಗಿ ಅರೆ ಶುಷ್ಕ ಮತ್ತು ಒಣ ಹವೆಯಿಂದ ಕೂಡಿರುತ್ತದೆ. ಆದರು ಚಳಿಗಾಲದ ಸಮಯವು ಸಾಂಗ್ಲಿಗೆ ಭೇಟಿಕೊಡಲು ಅತ್ಯಂತ ಸೂಕ್ತವಾದ ಸಮಯವಾಗಿದೆ.

ಬೇಸಿಗೆಗಾಲ

ಬೇಸಿಗೆಯು ಸಾಂಗ್ಲಿಯಲ್ಲಿ ಅತ್ಯಂತ ಬಿಸಿಲಿನಿಂದ ಕೂಡಿದ್ದು, ಅತಿಯಾದ ಒಣಹವೆಯನ್ನು ಹೊಂದಿರುತ್ತದೆ. ಆರ್ದ್ರತೆಯು ಇರುವುದಿಲ್ಲ. ಈ ಋತು ಫೆಬ್ರವರಿಯ ಮಧ್ಯಭಾಗದಿಂದ ಜೂನ್ ತಿಂಗಳ ನಡುಭಾಗದವರೆಗು ಇರುತ್ತದೆ. ಬೇಸಿಗೆಯಲ್ಲಿ ಇಲ್ಲಿನ ಹಗಲಿನ ಉಷ್ಣಾಂಶವು 38° ಸೆಲ್ಶಿಯಸ್ ನಷ್ಟು ಸುಡುವ ಬಿಸಿಲನ್ನು ಹೊಂದಿರುತ್ತದೆ. ರಾತ್ರಿ ಇದು 32° ಸೆಲ್ಶಿಯಸ್ ನಷ್ಟಿರುತ್ತದೆ. ಮೇ ಇಲ್ಲಿ ತುಂಬಾ ಬಿಸಿಲಿನಿಂದ ಕೂಡಿರುತ್ತದೆ. ಪ್ರವಾಸಿಗರು ಈ ಅವಧಿಯಲ್ಲಿ ಇಲ್ಲಿಗೆ ಭೇಟಿಕೊಡದಿರುವುದು ಉತ್ತಮ.

ಮಳೆಗಾಲ

ಮಳೆಗಾಲದಲ್ಲಿ ಸಾಂಗ್ಲಿಯಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತದೆ.  ಈ ಮಳೆಯು ಇಲ್ಲಿನ ಸುಡುವ ಬಿಸಿಲಿನಿಂದ ಸ್ವಲ್ಪ ಬಿಡುವುಕೊಡುತ್ತದೆ. ಮಳೆಗಾಲವು ಜೂನ್ ಮಧ್ಯ ಭಾಗದಿಂದ ಅಕ್ಟೋಬರ್ ತಿಂಗಳಿನವರೆಗೆ ಇರುತ್ತದೆ. ಅತಿ ಹೆಚ್ಚು ಮಳೆಯು ಜುಲೈ ಸಮಯದಲ್ಲಿ ಬೀಳುತ್ತದೆ. ಮಳೆಗಾಲದಲ್ಲಿ ಇಲ್ಲಿನ ಉಷ್ಣಾಂಶವು 30° ಸೆಲ್ಶಿಯಸ್ ಆಸು ಪಾಸಿನಲ್ಲಿರುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳು ಮಳೆಗಾಲದ ನಂತರದ ಅವಧಿಯಾಗಿವೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ವರೆಗಿನ ಅವಧಿಯು ಇಲ್ಲಿ ಚಳಿಗಾಲವಾಗಿದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಕನಿಷ್ಠ 13°ಸೆಲ್ಶಿಯಸ್ ನಿಂದ ಗರಿಷ್ಠ 30°ಸೆಲ್ಶಿಯಸ್ ವರೆಗೆ ಇರುತ್ತದೆ. ಅಲ್ಲದೆ ಇಲ್ಲಿನ ಹವಾಗುಣವು ಅತ್ಯಂತ ಹಿತವಾಗಿ ಪ್ರವಾಸಿಗರು ಮೋಜುಮಾಡಲು ಸಹಕರಿಸುತ್ತದೆ.