Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಹವಾಮಾನ

ಸೇಲಂ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Salem, India 30 ℃ Patchy rain possible
ಗಾಳಿ: 9 from the SW ತೇವಾಂಶ: 55% ಒತ್ತಡ: 1011 mb ಮೋಡ ಮುಸುಕು: 30%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 27 ℃ 80 ℉ 40 ℃104 ℉
Tuesday 07 May 27 ℃ 80 ℉ 39 ℃102 ℉
Wednesday 08 May 24 ℃ 76 ℉ 37 ℃98 ℉
Thursday 09 May 26 ℃ 79 ℉ 39 ℃102 ℉
Friday 10 May 27 ℃ 80 ℉ 41 ℃105 ℉

ಡಿಸೆಂಬರ್ ನಿಂದ ಫೆಬ್ರವರಿ ವರೆಗಿನ ಚಳಿಗಾಲ, ಸೇಲಂ ಗೆ ಹೋಗಲು ಸೂಕ್ತ ಕಾಲವಾಗಿದೆ. ಈ ಸಮಯದಲ್ಲಿ ಇಲ್ಲಿ ವಾತಾವರಣ ತಂಪು ಮತ್ತು ಆಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

ಇಲ್ಲಿ ಮಾರ್ಚ್ ಮತ್ತು ಜೂನ್ ತಿಂಗಳು ಬೆಸಿಗೆಯಾಗಿದ್ದು, ಒಣ ಬಿಸಿಲಿನಿಂದ ಕೂಡಿರುತ್ತದೆ. ಮೇ ತಿಂಗಳಿನಲ್ಲಿ ಅತಿ ಹೆಚ್ಚು ಉಷ್ಣಾಂಶ ಇದ್ದು 38 ಡಿಗ್ರಿ ಸೆಲ್ಶಿಯಸ್ ನಷ್ಟಿರುತ್ತದೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಮಳೆ ಆದರೂ ಇಲ್ಲಿನ ಉಷ್ಣಾಂಶ ಕ್ಕೆ ಇದು ಸಾಕಾಗುವುದಿಲ್ಲ. ಇದು ಪ್ರವಾಸಕ್ಕೆ ಯೋಗ್ಯ ಕಾಲವಲ್ಲ.

ಮಳೆಗಾಲ

ಇಲ್ಲಿ ಜುಲೈ ನಿಂದ ನವೆಂಬರ್ ವರೆಗೆ ಮಳೆಗಾಲ. ಸಣ್ಣಗೆ ಬರುವ ಮಳೆ ಇಲ್ಲಿನ ವಾತಾವರಣವನ್ನು ಸ್ವಲ್ಪ ಹದಗೊಳಿಸಿದರೂ ಆಗಸ್ಟ್ ಕೊನೆ ದಿನಗಳಲ್ಲಿ ವಾತಾವರಣ ಸ್ವಲ್ಪ ತಂಪಾಗುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳು ಅತಿ ಹೆಚ್ಚು ಮಳೆ ಸುರಿಸಿ ವಾತಾವರಣವನ್ನು ಆಹ್ಲಾದಕರವಾಗಿಸುತ್ತವೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಇಲ್ಲಿ ಚಳಿಗಾಲ. ಆಗ ವಾತಾವರಣ ಆಹ್ಲಾದಕರವಾಗಿದ್ದು  ತಾಪಮಾನವು 20 ಡಿಗ್ರಿ ಸೆಲ್ಶಿಯಸ್ ನಿಂದ 30 ಡಿಗ್ರಿ ಸೆಲ್ಶಿಯಸ್ ವರೆಗಿರುತ್ತದೆ. ಇದು ನಗರವನ್ನು ನೋಡಲು ಪ್ರವಾಸಿಗರಿಗೆ ಯೋಗ್ಯ ಕಾಲವಾಗಿದೆ.