Search
  • Follow NativePlanet
Share
ಮುಖಪುಟ » ಸ್ಥಳಗಳು» ಸಕಲೇಶಪುರ

ಸಕಲೇಶಪುರ – ಜನಪ್ರಿಯತೆ ಗಳಿಸದ ಯಾತ್ರ ಸ್ಥಳ.

32

ಸಕಲೇಶಪುರವು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಒಂದು ಸಣ್ಣ ಗಿರಿಧಾಮವಾಗಿದ್ದು, ವಿಹಾರಕ್ಕೆ ಬರುವವರಿಗೆ ಒಂದು ಚೇತೋಹಾರಿ ಅನುಭವವನ್ನು ಒದಗಿಸುತ್ತದೆ. ಈ ಊರು ಸಮುದ್ರ ಮಟ್ಟದಿಂದ 949 ಮೀಟರ್ ಎತ್ತರದಲ್ಲಿದೆ. ಸಕಲೇಶಪುರವು ಹಾಸನ ಜಿಲ್ಲೆಯಲ್ಲಿದ್ದು ಬೆಂಗಳೂರುಮೈಸೂರು ಹೆದ್ದಾರಿಯಲ್ಲಿ ಬರುತ್ತದೆ. ಈ ಊರು ಭಾರತದಲ್ಲಿಯೇ ಅತಿ ಹೆಚ್ಚು ಕಾಫಿ ಮತ್ತು ಏಲಕ್ಕಿಯನ್ನು ಬೆಳೆಯುವ ಸಲುವಾಗಿ ಪ್ರಸಿದ್ಧವಾಗಿದೆ.

 

ಚಾರಣಿಗರ ಸ್ವರ್ಗ.

ಸಕಲೇಶಪುರವು ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಅದಕ್ಕೆ ಮೊದಲು ಈ ಊರು ಹೊಯ್ಸಳರ ಮತ್ತು ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು. ಹೊಯ್ಸಳರ ಕಾಲದಲ್ಲಿ ಈ ಊರು ಸಕಲೇಶಪುರ ಎಂಬ ಹೆಸರು ಪಡೆಯಿತು. ದಂತಕಥೆಗಳ ಪ್ರಕಾರ, ಹೊಯ್ಸಳರು ಒಂದು ಹಳ್ಳಿಗೆ ಬಂದಾಗ ಅವರಿಗೆ ಒಂದು ಭಗ್ನವಾಗಿರುವ ಶಿವಲಿಂಗವೊಂದು ದೊರೆಯಿತು. ತತ್ ಕ್ಷಣಕ್ಕೆ ಅವರು ಆ ಊರಿಗೆ ಸಕಲೇಶ್ವರ ಎಂದು ಹೆಸರು ಇಟ್ಟರು. ಈ ಊರಿನಲ್ಲಿ ಮಾಡುವ ಕೃಷಿಯಲ್ಲಿ ಅಧಿಕ ಇಳುವರಿ ಬರುಲು ಇದರ ಹೆಸರೆ ಕಾರಣ ಎಂಬುದು ಸ್ಥಳೀಯರ ವಾದ.

ಸಕಲೇಶಪುರವು ತನ್ನ ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಅಲ್ಲದೆ ಇದು ಪ್ರಮುಖವಾಗಿ ಚಾರಣ ಮಾಡುವವರ ನೆಚ್ಚಿನ ತಾಣವಾಗಿ ಖ್ಯಾತಿ ಪಡೆದಿದೆ. ಇಲ್ಲಿನ ಬಿಸಿಲೆ ಮೀಸಲು ಅರಣ್ಯ ಪ್ರದೇಶ ಹಾಗು ಕುಮಾರ ಪರ್ವತದಲ್ಲಿ ಚಾರಣ ಮಾಡುವವರಿಗೆ ಇಲ್ಲಿನ ವೈವಿಧ್ಯಮಯ ಜೀವ ಜಾಲದ ಕುರಿತು ಹೊಸ ಹೊಳಹುಗಳು ಲಭ್ಯವಾಗುವುದಷ್ಟೆ ಅಲ್ಲದೆ ಅವರ ಮನತಣಿಯುವಷ್ಟು  ಅವರ ಕುತೂಹಲ ಕೆರಳುತ್ತಿರುತ್ತದೆ.

ನೀವು ಉತ್ಸಾಹಿ ಚಾರಣಿಗರು ಆಗಿರದಿದ್ದ ಪಕ್ಷದಲ್ಲಿ, ನೀವು ಈ ಊರಿನ ನಯನ ಮನೋಹರ ಪರಿಸರವನ್ನು ವೀಕ್ಷಿಸುತ್ತ ತಿರುಗಾಡುವುದರಿಂದ ನಿಮ್ಮ ಮನಸ್ಸಿಗೆ ಮುದ ಸಿಗುತ್ತದೆ. ನೀವು ಸಕಲೇಶಪುಕ್ಕೆ ತಲುಪಲು ರೈಲಿನಲ್ಲಿ ಹಾಸನದವರೆಗೆ ಬರಬೇಕು. ಅದು ಇಲ್ಲಿಂದ 35 ಕಿ.ಮೀ ನಷ್ಟು ದೂರದಲ್ಲಿದೆ. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣಗಳಲ್ಲಿ ಒಂದು ಮಂಗಳೂರಿನಲ್ಲಿದೆ.

ಸಕಲೇಶಪುರ ಪ್ರಸಿದ್ಧವಾಗಿದೆ

ಸಕಲೇಶಪುರ ಹವಾಮಾನ

ಉತ್ತಮ ಸಮಯ ಸಕಲೇಶಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಕಲೇಶಪುರ

  • ರಸ್ತೆಯ ಮೂಲಕ
    ಸಕಲೇಶಪುರದ ಗಿರಿಧಾಮಗಳನ್ನು ಬಸ್ಸುಗಳಲ್ಲಿ ಸುಲಭವಾಗಿ ತಲುಪಬಹುದು. ಬೆಂಗಳೂರು ಮತ್ತು ಮೈಸೂರಿನಿಂದ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ನಿರಂತರವಾಗಿ ಸಕಲೇಶಪುರದತ್ತ ಹೊರಡುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸಕಲೇಶಪುರದಲ್ಲಿ ರೈಲ್ವೆ ನಿಲ್ದಾಣವಿದ್ದು, ಅದು ಬೆಂಗಳೂರು ಮತ್ತು ಮಂಗಳೂರು ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಸಕಲೇಶಪುರ ರೈಲ್ವೆ ನಿಲ್ದಾಣವು ನಗರ ಮಧ್ಯ ಭಾಗದಿಂದ 2 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಹತ್ತಿರದ ಗಮ್ಯ ಸ್ಥಳಗಳನ್ನು ತಲುಪಲು ಇಲ್ಲಿಂದ ಆಟೋ ರಿಕ್ಷಾಗಳಲ್ಲಿ ಹೋಗಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಸಕಲೇಶಪುರಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಇದು ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ವಿಮಾನಯಾನ ಸೌಕರ್ಯ ಕಲ್ಪಿಸುತ್ತದೆ. ಮೊದಲಿಗೆ ಇದನ್ನು ಬಜ್ಪೆ ವಿಮಾನ ನಿಲ್ದಾಣವೆಂದು ಕರೆಯುತ್ತಿದ್ದರು. ಇದು ಕೊಡಚಾದ್ರಿಯಿಂದ 133 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ವಿಮಾನ ನಿಲ್ದಾಣ ದುಬೈ, ಅಬುದಾಭಿ, ಮಸ್ಕತ್, ದೋಹಾ, ಕುವೈತ್ ಮತ್ತು ಬಹ್ರೇನ್ ನಂತಹ ಪ್ರಮುಖ ಮಧ್ಯ ಪ್ರಾಚ್ಯರಾಷ್ಟ್ರಗಳ ವಿಮಾನ ಸಂಪರ್ಕ ಹೊಂದಿದೆ. ಪ್ರವಾಸಿಗರು ಭಾರತದ ಮುಂಬೈ, ಬೆಂಗಳೂರು, ಗೋವಾ, ಕೊಚ್ಚಿ ಮತ್ತು ಕ್ಯಾಲಿಕಟ್ ಗಳಂತಹ ನಗರಗಳಿಂದ ಸಹಾ ಸುಲಭವಾಗಿ ಈ ವಿಮಾನ ನಿಲ್ದಾಣದ ಮೂಲಕ ಸಕಲೇಶಪುರ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat