Search
  • Follow NativePlanet
Share
ಮುಖಪುಟ » ಸ್ಥಳಗಳು » ಸೈಹಾ » ಹವಾಮಾನ

ಸೈಹಾ ಹವಾಮಾನ

ಮಳೆಗಾಲೋತ್ತರ ಅವಧಿಯಾದ ಅಕ್ಟೋಬರ್ ಮತ್ತು ನವೆಂಬರ್ ಇಲ್ಲಿನ ಭೇಟಿಗೆ ಅತ್ಯಂತ ಸೂಕ್ತವಾದ ಅವಧಿಯಾಗಿದೆ. ಚಳಿಗಾಲ ಅಷ್ಟೊಂದು ತೀವ್ರವಾಗಿರದ ಕಾರಣ ಈ ಅವಧಿಯಲ್ಲೂ ಪ್ರವಾಸ ಕೈಗೊಳ್ಳಬಹುದಾಗಿದೆ. ಬೇಸಗೆ ಕಾಲವೂ ಇಲ್ಲಿನ ಭೇಟಿಗೆ ಉತ್ತಮ ಅವಧಿ.

ಬೇಸಿಗೆಗಾಲ

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳು ಸೈಹಾ ದಲ್ಲಿ ಬೇಸಿಗೆ ಕಾಲವಾಗಿದೆ. ಬೇಸಿಗೆ ಕಾಲ ಸಾಮಾನ್ಯವಾಗಿ ಬಿಸಿಯಾಗಿದ್ದು ತ್ರಾಸದಾಯಕವಾಗಿಲ್ಲ. ಈ ಅವಧಿಯಲ್ಲಿ ಸಾಮಾನ್ಯ ತಾಪಮಾನ 20 ರಿಂದ 30 ಡಿಗ್ರಿ ಸೆಲ್ಸಿಯಸ್ ತನಕ ಇರುತ್ತದೆ. ಮೇ ತಿಂಗಳು ಅತ್ಯಂತ ಬಿಸಿಯಾದ ತಿಂಗಳಾಗಿದೆ. ಈ ಅವಧಿಯು ಬೆಟ್ಟಗುಡ್ಡಗಳಿಂದ ಕುಡಿದ ಸೈಹಾವನ್ನು ತಲುಪಲು ಸರಿಯಾದ ಅವಧಿಯಾಗಿದೆ.

ಮಳೆಗಾಲ

ಸೈಹಾದಲ್ಲಿ ಮಳೆ ವ್ಯಾಪಕವಾಗಿ ಬಿಳುತ್ತದೆ. ಜೂನ್ ನಿಂದ ಸೆಪ್ಟೆಂಬರ್ ಮಳೆಯ ತಿಂಗಳುಗಳಾಗಿವೆ. ಇಲ್ಲಿನ ಮಳೆಗಾಲ ಬಹಳ ತೀವ್ರವಾಗಿರುವ ಕಾರಣ ಈ ಅವಧಿಯಲ್ಲಿ ಇಲ್ಲಿ ಓಡಾಡುವುದು ಬಹಳ ಕಷ್ಟಕರವಾಗಿದೆ. ಈ ಅವಧಿಯು ಇಲ್ಲಿನ ಭೇಟಿಗೆ ಸರಿಯಾದ ಸಮಯವಲ್ಲ.

ಚಳಿಗಾಲ

ಡಿಸೆಂಬರ್ ನಿಂದ ಮಾರ್ಚ್ ತನಕದ ಕಾಲ ಇಲ್ಲಿ ಚಳಿಗಾಲವಾಗಿದೆ. ಈ ಅವಧಿಯ ಸಾಮಾನ್ಯ ತಾಪಮಾನ 11 ರಿಂದ 22 ಡಿಗ್ರಿ ಸೆಲ್ಸಿಯಸ್ ಆಗಿದೆ. ಈ ಅವಧಿಯಲ್ಲಿ ಸೈಹಾಕ್ಕೆ ಪ್ರಯಾಣ ಬೆಳೆಸುವ ಪ್ರವಾಸಿಗಳು ಉಣ್ಣೆ ಬಟ್ಟೆಗಳನ್ನು ಜೊತೆ ಒಯ್ಯುವುದು ಒಳ್ಳೆಯದು.