Search
  • Follow NativePlanet
Share
ಮುಖಪುಟ » ಸ್ಥಳಗಳು » ರುಖಾಲಾ » ಹವಾಮಾನ

ರುಖಾಲಾ ಹವಾಮಾನ

ರುಖಾಲಾಗೆ ಭೇಟಿಕೊಡಲು ಇಚ್ಛಿಸುವ ಪ್ರವಾಸಿಗರು ಇಲ್ಲಿಗೆ ಮೇ ನಿಂದ ಜುಲೈ ತಿಂಗಳುಗಳ ನಡುವೆ ಭೇಟಿಕೊಡುವುದು ಉತ್ತಮ. ಅಂದರೆ ಬೇಸಿಗೆಯು ಇಲ್ಲಿಗೆ ಭೇಟಿಕೊಡಲು ಪ್ರಶಸ್ತವಾಗಿದೆ. ಆದಾಗ್ಯೂ ಚಳಿಗಾಲದಲ್ಲಿ ಇಲ್ಲಿನ ವಾತಾವರಣವು ಹಿತಕರವಾಗಿರುವುದರಿಂದಾಗಿ ಚಳಿಗಾಲದ ಅವಧಿಯಲ್ಲಿಯೂ ಸಹ ಇಲ್ಲಿಗೆ ಭೇಟಿಕೊಡಬಹುದು.

ಬೇಸಿಗೆಗಾಲ

(ಮೇ ನಿಂದ ಜುಲೈ): ರುಖಾಲಾದಲ್ಲಿ ಬೇಸಿಗೆಯು ಮೇನಲ್ಲಿ ಶುರುವಾಗಿ ಜುಲೈನಲ್ಲಿ ಅಂತ್ಯಗೊಳ್ಳುತ್ತದೆ. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 30° ಸೆಲ್ಶಿಯಸ್ ಮತ್ತು ಕನಿಷ್ಠ 8° ಸೆಲ್ಶಿಯಸ್ ದಾಖಲಾಗುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್): ಮಳೆಗಾಲವು ಇಲ್ಲಿ ಜುಲೈ ತಿಂಗಳಿನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಂತ್ಯಗೊಳ್ಳುತ್ತದೆ. ರುಖಾಲಾದಲ್ಲಿ ಈ ಋತುವಿನಲ್ಲಿ ಮಿತವಾದ ಪ್ರಮಾಣದ ಮಳೆಯನ್ನು ಕಾಣಬಹುದು.

ಚಳಿಗಾಲ

(ಅಕ್ಟೋಬರ್ ನಿಂದ ಜನವರಿ): ಅಕ್ಟೋಬರ್ ತಿಂಗಳಿನಲ್ಲಿ ಚಳಿಗಾಲವು ಆರಂಭವಾಗುತ್ತದೆ. ಈ ಋತುವು ಜನವರಿಯವರೆಗೆ ಮುಂದುವರಿಯುತ್ತದೆ. ಪ್ರತಿ ವರ್ಷವು ಈ ಅವಧಿಯಲ್ಲಿ ಹಿಮಪಾತವೂ ಸಹ ಆಗುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 10° ಸೆಲ್ಶಿಯಸ್ ಮತ್ತು ಕನಿಷ್ಠ -10° ಸೆಲ್ಶಿಯಸ್ ಇರುತ್ತದೆ.