ಕಿಯಾರಿ ದೇವಾಲಯವು ರುಖಾಲಾದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಆದಿ ಪರಾಶಕ್ತಿ ಸ್ವರೂಪಿಯಾದ ದುರ್ಗಾ ಮಾತೆಯ 300 ವರ್ಷಗಳಷ್ಟು ಹಳೆಯದಾದ ದೇವಾಲಯ ಇದಾಗಿದೆ. ಇದನ್ನು ಬೌದ್ಧ ಮಠಗಳ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ದುರ್ಗಾ ಮಾತೆಯ ವಿಗ್ರಹದೊಂದಿಗೆ, ಲಂಗರ...
ದಿಯೋರಿ ದೇವಾಲಯವು ಹಿಮಾಚಲ್ ಪ್ರದೇಶದ ರುಖಾಲಾದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇವಾಲಯವು ಕಿಯಾರಿ ದೇವಾಲಯದಿಂದ 2 ಕಿ.ಮೀ ದೂರದಲ್ಲಿದೆ. ಸಾಹಸ ಪ್ರಿಯರಾದ ಪ್ರವಾಸಿಗರು ಈ ದೇವಾಲಯಕ್ಕೆ ಚಾರಣದ ಮೂಲಕವೂ ಸಹ ತಲುಪಬಹುದು.
ಸೇಬು ಮತ್ತು ಒಣ ದ್ರಾಕ್ಷಿಗಳ ತೋಟಗಳು ರುಖಾಲಾದ ಪ್ರಮುಖ ಆಕರ್ಷಣೆಯಾಗಿವೆ. ಇಲ್ಲಿ ಬೆಳೆಯಲಾಗುವ ರಾಯಲ್, ಗೋಲ್ಡನ್ ಮತ್ತು ಗ್ರ್ಯಾನಿ ಸ್ಮಿತ್ ಎಂಬ ಜಾತಿಗಳ ಸೇಬುಗಳ ತೋಟವು ಸಹ ಇಲ್ಲಿನ ಆಕರ್ಷಣೆಗಳಲ್ಲಿ ಸ್ಥಾನ ಪಡೆದಿವೆ. ಈ ಸೇಬುಗಳು ತಮ್ಮ ಬಣ್ಣ, ಸ್ವಾದ ಮತ್ತು ಸುಗಂಧದಿಂದಾಗಿ ವಿಶ್ವದೆಲ್ಲೆಡೆ ಖ್ಯಾತಿ ಪಡೆದಿವೆ. ಡಿಸೆಂಬರ್...