Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ಹವಾಮಾನ

ರುದ್ರಪ್ರಯಾಗ್ ಹವಾಮಾನ

ರುದ್ರಪ್ರಯಾಗ ಸುಂದರ ದೃಶ್ಯಗಳನ್ನು ನೋಡಲು ಬಯಸುವವರು ಬೇಸಿಗೆಯಲ್ಲಿ ಈ ಸ್ಥಳಕ್ಕೆ ಭೇಟೀ ನೀಡುವುದು ಸೂಕ್ತ. ಹಾಗೆಯೆ ಚಳಿಗಾಲವೂ ಕೂಡಾ ಭೇಟಿಗೆ ಉತ್ತಮವಾದ ಸಮಯ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಈ ಸ್ಥಳದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 24 ಡೀ. ಸೆ ಮತ್ತು 15 ಡಿ.ಸೆ ನಷ್ಟು ದಾಖಲಾಗುತ್ತದೆ. ಈ ಅವಧಿಯಲ್ಲಿ ಹವಾಮಾನ ಆಹ್ಲಾದಕರವಾಗಿದ್ದು ರುದ್ರಪ್ರಯಾಗ ಭೇಟಿಗೆ ಸೂಕ್ತವಾದ ಸಮಯ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್): ರುದ್ರಪ್ರಯಾಗ ಪ್ರದೇಶವು ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಮಳೆಗಾಲವನ್ನು ಅನುಭವಿಸುತ್ತದೆ. ವಾರ್ಷಿಕ ಮಳೆಯ ಶೇ. 80 ರಷ್ಟು ಮಳೆಯು ಈ ಪ್ರದೇಶದ ದಕ್ಷಿಣ ಭಾಗದಲ್ಲಿ ದಾಖಲಿಸಲ್ಪಟ್ಟರೆ, ಸುಮಾರು 65 ರಷ್ಟು ಮಳೆಯು ಉತ್ತರಾರ್ಧ ಭಾಗದಲ್ಲಿ ದಾಖಲೆಯಾಗುತ್ತದೆ.

ಚಳಿಗಾಲ

(ನವೆಂಬರ್ ನಿಂದ ಮಾರ್ಚ್): ಚಳಿಗಾಲವು ಇಲ್ಲಿ ನವೆಂಬರ್ ತಿಂಗಳಲ್ಲಿ ಆರಂಭವಾಗಿ ಮಾರ್ಚ್ ತಿಂಗಳಿನ ತನಕ ಮುಂದುವರಿಯುತ್ತದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನಗಳು ಕ್ರಮವಾಗಿ 0 ಡಿ.ಸೆ ಮತ್ತು 15 ಡಿ.ಸೆ ದಾಖಲಾಗುತ್ತದೆ. ಹಿಮಪಾತವು ಈ ಕಾಲದಲ್ಲಿ ಸಾಮಾನ್ಯವಾಗಿರುತ್ತದೆ.