Search
  • Follow NativePlanet
Share
ಮುಖಪುಟ » ಸ್ಥಳಗಳು » ರೌರ್ಕೆಲಾ » ಹವಾಮಾನ

ರೌರ್ಕೆಲಾ ಹವಾಮಾನ

ಚಳಿಗಾಲದ ಅವಧಿಯು ರೂರ್‍ಕೆಲ ನಗರದ ಆಕರ್ಷಣೆಗಳನ್ನು ನೋಡಲು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಆಗ ಇಲ್ಲಿನ ದಿನಗಳು ಅತ್ಯಂತ ಆಹ್ಲಾದಕರವಾದ ವಾತಾವರಣವನ್ನು ಹೊಂದಿದ್ದು, ವಿಹಾರಕ್ಕೆ ಮತ್ತು ಸ್ಥಳ ವೀಕ್ಷಣೆಗೆ ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಇದಲ್ಲದೆ ಈ ಸಮಯದಲ್ಲಿ ಇಲ್ಲಿ ದಿನ ಪೂರ್ತಿ ಹೊರಗೆ ಕಳೆಯುವಂತಹ ಹವಾಮಾನವಿರುತ್ತದೆ.

ಬೇಸಿಗೆಗಾಲ

ರೌರ್ಕೆಲಾದಲ್ಲಿ ಅತ್ಯಂತ ಬಿಸಿಲಿನಿಂದ ಕೂಡಿದ ವಾತಾವರಣವಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಆರ್ದ್ರತೆಯು ಪ್ರವಾಸಿಗರಿಗೆ ಮತ್ತಷ್ಟು ಅಸೌಕರ್ಯವುಂಟು ಮಾಡುತ್ತದೆ. ಮಾರ್ಚ್ ತಿಂಗಳಿನಲ್ಲಿ ಆರಂಭವಾಗುವ ಬೇಸಿಗೆಯು ಮೇ ತಿಂಗಳಿನವೆರೆಗು ಇರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳುಗಳು ರೂರ್‍ಕೆಲದಲ್ಲಿ ಅತ್ಯಂತ ಬಿಸಿಲಿನಿಂದ ಕೂಡಿದ ತಿಂಗಳುಗಳಾಗಿರುತ್ತವೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಸುಮಾರು 40° ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

ಮಳೆಗಾಲವು ರೌರ್ಕೆಲಾದಲ್ಲಿ ಜೂನ್‍ನಲ್ಲಿ ಆರಂಭವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ. ಮಳೆಗಾಲವು ಇಲ್ಲಿನ ಹವಾಮಾನದಲ್ಲಿ ಗಣನೀಯ ಬದಲಾವಣೆಯನ್ನು ತರುತ್ತದೆ. ಕೆಲವು ಡಿಗ್ರಿಗಳಷ್ಟು ಉಷ್ಣಾಂಶವನ್ನು ಕಡಿಮೆ ಮಾಡುವಂತಹ ಮಳೆ ಇಲ್ಲಿ ಬೀಳುತ್ತದೆ. ರೌರ್ಕೆಲಾದಲ್ಲಿ ವಾರ್ಷಿಕವಾಗಿ 160 ರಿಂದ 200 ಸೆಂ.ಮೀ ಮಳೆ ಬೀಳುತ್ತದೆ. ಆದರೂ ಇಲ್ಲಿನ ಹವಾಮಾನವು ಆದಷ್ಟೂ ಪ್ರವಾಸಿಗರ ಸ್ನೇಹಿಯಾಗಿದೆ.

ಚಳಿಗಾಲ

ರೌರ್ಕೆಲಾಗೆ ಭೇಟಿ ನೀಡುವುದಾದಲ್ಲಿ ಚಳಿಗಾಲವು ಅತ್ಯುತ್ತಮ ಕಾಲವಾಗಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗಣನೀಯವಾಗಿ ಕಡಿಮೆಯಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಕನಿಷ್ಠ ಉಷ್ಣಾಂಶವು 15° ಸೆಲ್ಶಿಯಸ್ ಇರುತ್ತದೆ. ಜೊತೆಗೆ ಈ ಅವಧಿಯಲ್ಲಿ ಬೀಸುವ ತಣ್ಣನೆಯ ಗಾಳಿಯು ಚಳಿಗಾಲವನ್ನು ಮತ್ತಷ್ಟು ತಂಪಗೆ ಮಾಡುತ್ತದೆ.