Search
  • Follow NativePlanet
Share
ಮುಖಪುಟ » ಸ್ಥಳಗಳು » ರಿಷಿಕೇಶ » ಹವಾಮಾನ

ರಿಷಿಕೇಶ ಹವಾಮಾನ

ರಿಷಿಕೇಶಕ್ಕೆ ವರ್ಷದ ಯಾವ ಸಮಯದಲ್ಲಿ ನೇಕಾದರೂ ಭೇಟಿ ನೀಡಬಹುದು. ಮೇ ತಿಂಗಳಲ್ಲಿ ಉಷ್ಣಾಂಶ ಻ತಿ ಹೆಚ್ಚಾಗಿರುವುದರಿಂದ ೀ ಸಮಯದಲ್ಲಿ ಮಾತ್ರ ಸ್ವಲ್ಪ ದೂರವುಳಿಯುವುದು ಒಳ್ಳೆಯದು.

ಬೇಸಿಗೆಗಾಲ

(ಮಾರ್ಚ್-ಜೂನ್): ಮಾರ್ಚ್ ನಲ್ಲಿ ಪ್ರಾರಂಭವಾಗುವ ಬೇಸಿಗೆಗಾಲವು ಜೂನ್ ವರೆಗೂ ವಿಸ್ತರಿಸಿರುತ್ತದೆ. ಈ ಸಂದರ್ಭದಲ್ಲಿ ರಿಷಿಕೇಶದಲ್ಲಿ ಉಷ್ಣಾಂಶ 35 ಡಿಗ್ರಿಯಷ್ಟಿರುತ್ತದೆ. ಮೇ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದಲ್ಲ. ಏಕೆಂದರೆ ಈ ಸಮಯದಲ್ಲಿ ವಾತಾವರಣ ಅಹಿತಕರವಾಗಿರುತ್ತದೆ.

ಮಳೆಗಾಲ

(ಜುಲೈ-ಸೆಪ್ಟೆಂಬರ್): ಜುಲೈ ನಿಂದ ಶುರುವಾಗುವ ಮಳೆ ಸೆಪ್ಟೆಂಬರ್ ವರೆಗೂ ಮುಂದುವರೆಯುತ್ತದೆ. ರಿಷಿಕೇಶದಲ್ಲಿ ಮಳೆಯು ಸಾಧಾರಣ ಪ್ರಮಾಣದಲ್ಲಿ ಆಗುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

ಚಳಿಗಾಲ

(ನವೆಂಬರ್-ಫೇಬ್ರವರಿ): ನವೆಂಬರ್ ನಲ್ಲಿ ಪ್ರಾರಂಭವಾಗುವ ಚಳಿಗಾಲವು ಫೆಬ್ರುವರಿಯ ವರೆಗೂ ವಿಸ್ತರಿಸಿರುತ್ತದೆ. ಈ ಸಂದರ್ಭದಲ್ಲಿ ರಿಷಿಕೇಶದಲ್ಲಿ ಕನಿಷ್ಠ ಹಾಗು ಗರಿಷ್ಠ ಉಷ್ಣಾಂಶಗಳು ಕ್ರಮವಾಗಿ 19°C ಮತ್ತು 33°C ಆಗಿರುತ್ತದೆ.