Search
  • Follow NativePlanet
Share
ಮುಖಪುಟ » ಸ್ಥಳಗಳು » ರೇವಾ » ಹವಾಮಾನ

ರೇವಾ ಹವಾಮಾನ

ಬೇಸಿಗೆ ಸಮಯದಲ್ಲಿ ರೇವಾದಲ್ಲಿ ಸುಡುಬಿಸಿಲು ಇರುತ್ತದೆ, ಆದರೆ ಚಳಿಗಾಲದಲ್ಲಿ ಮಿತವಾದ ಬಿಸಿಲು ಇರುತ್ತದೆ. ಮಳೆಗಾಲದಲ್ಲಿ ಆಹ್ಲಾದಕರ ಮತು ತಂಪಿನ ವಾತಾವರಣ ಪ್ರವಾಸಿಗರಿಗೆ ಎದುರಾಗುತ್ತದೆ. ಚಳಿಗಾಲದಲ್ಲಿ ರೇವಾಗೆ ಭೇಟಿ ನೀಡಲು ಅತ್ಯಂತ ಸೂಕ್ತ. ಈ ಸಮಯದಲ್ಲಿ ಆಹ್ಲಾದಕರ ಮತು ತಂಪಿನ ವಾತಾವರಣವಿರುವುದರಿಂದ ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಯಾವುದೇ ತೊಂದರೆಯಾಗುವುದಿಲ್ಲ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ರೇವಾದಲ್ಲಿ ಉರಿಬಿಸಿಲು ಇರುತ್ತದೆ. ಅತ್ಯಂತ ಹೆಚ್ಚಿನ ಉಷ್ಣಾಂಶವೆಂದರೆ ಎಪ್ರಿಲ್ ನಿಂದ ಜೂನ್ ವರೆಗೆ. ಈ ಸಮಯದಲ್ಲಿ ಅತಿ ಹೆಚ್ಚು ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್ ವರೆಗೆ ಸಾಗುತ್ತದೆ, ಕಮ್ಮಿಯಿಂದರೆ 35 ಡಿಗ್ರಿ ಸೆಲ್ಸಿಯಸ್ ವರೆಗಿರುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ರೇವಾಗೆ ಭೇಟಿ ನೀಡುವುದು ಸೂಕ್ತವಲ್ಲ.

ಮಳೆಗಾಲ

ರೇವಾದಲ್ಲಿ ಜುಲೈ ತಿಂಗಳಿಂದ ಸೆಪ್ಟಂಬರ್ ವರೆಗೆ ಸಾಧಾರಣ ಮಳೆಯಾಗುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಮಳೆಗಾಲದ ಅನುಭವವನ್ನು ಸವಿಯಬಹುದು, ಆದರೆ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಕಷ್ಟವಾಗಬಹುದು. ಮಳೆಗಾಲದಲ್ಲಿ ಮಳೆಯಿಂದ ರಕ್ಷಣೆ ಮಾಡಿಕೊಳ್ಳಲು ಪ್ರವಾಸಿಗರು ರೈನ್ ಕೋಟ್ ಮತ್ತು ಕೊಡೆ ಉಪಯೋಗಿಸುವುದು ಸೂಕ್ತ.

ಚಳಿಗಾಲ

ಚಳಿಗಾಲದ ತಿಂಗಳು ರೇವಾದಲ್ಲಿ ಅಕ್ಟೋಬರ್ ನಿಂದ ಫೆಬ್ರವರಿಯವರೆಗೆ. ಈ ಸಮಯದಲ್ಲಿ ಅತಿ ಕನಿಷ್ಠ ಉಷ್ಣಾಂಶವೆಂದರೆ 12 ಡಿಗ್ರಿ ಸೆಲ್ಸಿಯಸ್ ನಿಂದ ಅತಿ ಹೆಚ್ಚಿನ ಅಂದರೆ 23 ಡಿಗ್ರಿ ಸೆಲ್ಸಿಯಸ್ ವರೆಗಿರುತ್ತದೆ.