Search
  • Follow NativePlanet
Share
ಮುಖಪುಟ » ಸ್ಥಳಗಳು » ರತ್ನಾಗಿರಿ » ಹವಾಮಾನ

ರತ್ನಾಗಿರಿ ಹವಾಮಾನ

ಎಲ್ಲಾ ಸಮುದ್ರ ತೀರ ಪ್ರದೇಶದಲ್ಲಿ ಕಂಡು ಬರುವ ಹವಾಮಾನವೆ ರತ್ನಾಗಿರಿಯಲ್ಲೂ ಕಂಡು ಬರುತ್ತದೆ. ಡಿಸೆಂಬರ್ ನಿಂದ ಫೆಬ್ರುವರಿ ತಿಂಗಳ ವರೆಗಿನ ಚಳಿಗಾಲದಲ್ಲಿ ಪ್ರವಾಸಿಗರು ರತ್ನಾಗಿರಿಗೆ ಭೇಟಿ ನೀಡಬಹುದು.

ಬೇಸಿಗೆಗಾಲ

ರತ್ನಾಗಿರಿಯಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಮೇ ವರೆಗೂ ಮುಂದುವರೆದು ತಾಪಮಾನ ಹೆಚ್ಚಾಗಿರುತ್ತದೆ. ಈ ದಿನಗಳಲ್ಲಿ ತಾಪಮಾನ 38 ಡಿಗ್ರಿ ಸೆಲ್ಶಿಯಸ್ ಇದ್ದು ಪ್ರವಾಸಕ್ಕೆ ಇದು ಖಂಡಿತವಾಗಿಯೂ ಸೂಕ್ತವಾದ ಕಾಲ ಅಲ್ಲವೇ ಅಲ್ಲ.

ಮಳೆಗಾಲ

ಜೂನ್ ನಿಂದ ಆರಂಭವಾಗುವ ಮಳೆಗಾಲವು ಸೆಪ್ಟೆಂಬರ್ ತಿಂಗಳ ವರೆಗೂ ಇರುತ್ತದೆ. ರತ್ನಾಗಿರಿಯಲ್ಲಿ ಮಳೆಯ ಪ್ರಮಾಣವು ತುಸು ಜಾಸ್ತಿಯಿರುವುದರಿಂದ ಇಡಿ ಪ್ರಕೃತಿಯ ಸ್ವರೂಪವೇ ಬದಲಾಗುತ್ತದೆ. ಹಚ್ಚ ಹಸಿರಾಗಿ ಅರಳುವ ಗಿಡಮರ, ಎಲೆ ಹೂಗಳು ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಿ ನದಿಗಳು ತುಂಬಿ ಹರಿದು ಸಂಪೂರ್ಣ ವಾತಾವರಣವೆ ಅಹ್ಲಾದಕರವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿಂದ ಫೆಬ್ರುವರಿಯವರೆಗೂ ಚಳಿಗಾಲವಿದ್ದು, ಈ ಸಮಯದಲ್ಲಿ ರತ್ನಾಗಿರಿಗೆ ಭೇಟಿ ನೀಡಿದರೆ ಉತ್ತಮವಾದ ಹವಾಮಾನ ಇರುತ್ತದೆ. ಇಡಿ ದಿನ ತಾಪಮಾನ ತಂಪಾಗಿದ್ದು ರಾತ್ರಿಯಲ್ಲಿ 13 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಪ್ರವಾಸಕ್ಕೆ ಇದು ಹಿತವಾದ ಕಾಲವಾಗಿದೆ.