Search
  • Follow NativePlanet
Share
ಮುಖಪುಟ » ಸ್ಥಳಗಳು » ರಾನಿಖೇತ್ » ಹವಾಮಾನ

ರಾನಿಖೇತ್ ಹವಾಮಾನ

ರಾನಿಖೇತ್ ನೋಡಲು ಹೋಗಬಯಸುವವರು ಬೇಸಿಗೆಯಲ್ಲಿ ಹೋಗುವುದು ಸಮಂಜಸವಾಗಿದೆ. ಇದಲ್ಲದೆ ಮಳೆಗಾಲದಲ್ಲೂ ಹವಾಮಾನ ಅಷ್ಟೇನೂ ಪ್ರತಿಕೂಲವಾಗಿರದೆ ಇರುವ ಕಾರಣ ಮಳೆಗಾಲವೂ ಭೇಟಿಗೆ ಸರಿಯಾದ ಸಮಯ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ ತನಕ): ರಾನಿಖೇತ್ ನಲ್ಲಿ ಮಾರ್ಚ್ ತಿಂಗಳಿನಲ್ಲಿ ಬೇಸಿಗೆಗಾಲ ಆರಂಭವಾಗುತ್ತದೆ ನಂತರ ಮುಂದುವರಿದು ಮೇ ತನಕ ಇರುತ್ತದೆ. ಈ ಅವಧಿಯ ಕನಿಷ್ಠ ಮತ್ತು ಗರಿಷ್ಠ ತಾಪಮಾನ 8 ಡಿಗ್ರಿ ಸೆಲ್ಶಿಯಸ್ ನಿಂದ 22 ಡಿಗ್ರಿ ಸೆಲ್ಶಿಯಸ್ ತನಕ ಇರುತ್ತದೆ.

ಮಳೆಗಾಲ

(ಜೂನ್ ನಿಂದ ಆಗಸ್ಟ್) : ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆಗಾಲ ರಾನಿಖೇತ್ ನಲ್ಲಿ ಆಗಸ್ಟ್ ತನಕ ಮುಂದುವರಿಯುತ್ತದೆ. ಇಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ರಾನಿಖೇತ್ ನಲ್ಲಿ ಚಳಿಗಾಲ ಡಿಸೆಂಬರ್ ನಿಂದ ಆರಂಭವಾಗಿ ಫೆಬ್ರವರಿಯ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ತಾಪಮಾನ 3 ರಿಂದ 7 ಡಿಗ್ರಿ ಸೆಲ್ಶಿಯಸ್ ತನಕ ಬದಲಾಗುತ್ತಾ ಇರುತ್ತದೆ.