Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಮಗಢ » ಹವಾಮಾನ

ರಾಮಗಢ ಹವಾಮಾನ

ರಾಮಗಢ ಪ್ರದೇಶದಲ್ಲಿ ಬೇಸಿಗೆ ಮತ್ತು ಮಳೆಗಾಲದಲ್ಲಿ ವಾತಾವರಣವು ಆಹ್ಲಾದಕರವಾಗಿರುವುದರಿಂದ ಈ ತಾಣಕ್ಕೆ ಹೆಚ್ಚಾಗಿ ಪ್ರವಾಸಿಗರು ಬೇಸಿಗೆ ಮತ್ತು ಮಳೆಗಾಲದಲ್ಲಿಯೇ ಭೇಟಿ ನೀಡಲು ಇಷ್ಟಪಡುತ್ತಾರೆ. ಆದರೆ ಚಳಿಗಾಲ ರಾಮಗಢ ಪ್ರದೇಶದ ಪ್ರಯಾಣಕ್ಕೆ ಅಷ್ಟು ಸೂಕ್ತ ಸಮಯವಲ್ಲ.

ಬೇಸಿಗೆಗಾಲ

(ಮೇ ನಿಂದ ಜೂನ್) : ಬೇಸಿಗೆ ಕಾಲವು ರಾಮಗಢದಲ್ಲಿ ಮೇ ಮತ್ತು ಜೂನ್ ತಿಂಗಳುಗಳ ನಡುವೆ ವಿಸ್ತರಿಸಿದೆ. ಈ ಕಾಲದಲ್ಲಿ ಈ ಪ್ರದೇಶದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 30 ಡಿ. ಸೆ ಮತ್ತು 20 ಡಿ. ಸೆ  ನಷ್ಟು ದಾಖಲಾಗುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್) : ಮಳೆಗಾಲವು ರಾಮಗಢ ಪ್ರದೇಶದಲ್ಲಿ ಜೂನ್ ತಿಂಗಳಿನಲ್ಲಿ ಆರಂಭವಾಗಿ ಸೆಪ್ಟೆಂಬರ್ ತಿಂಗಳ ತನಕ ಮುಂದುವರೆಯುತ್ತದೆ. ರಾಮಗಢದಲ್ಲಿ, ಈ ಸಮಯದಲ್ಲಿ ಸಾಧಾರಣ ಮಳೆಯಾಗುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ) : ನವೆಂಬರ್ ತಿಂಗಳಿನಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಈ ಋತುವಿನಲ್ಲಿ ರಾಮಗಢದಲ್ಲಿ ಗರಿಷ್ಠ ತಾಪಮಾನ 10 ಡಿ. ಸೆ ಮತ್ತು ಕನಿಷ್ಠ ತಾಪಮಾನವು 2 ಡಿ. ಸೆ ನಷ್ಟು ದಾಖಲಾಗುತ್ತದೆ.