Search
  • Follow NativePlanet
Share
ಮುಖಪುಟ » ಸ್ಥಳಗಳು » ರಜ್ನಾಂದಗಾವ್ » ಹವಾಮಾನ

ರಜ್ನಾಂದಗಾವ್ ಹವಾಮಾನ

ಉಷ್ಣವಲಯದ ಹವಾಮಾನವಿರುವದರಿಂದ ರಾಜ್ನಾಂದಗಾವ್ ದಲ್ಲಿ ತೇವಭರಿತ ಒಣ ಹವೆ ಇರುತ್ತದೆ. ಪ್ರವಾಸಿಗರು ಚಳಿಗಾಲದಲ್ಲಿ (ಅಕ್ಟೋಬರ ನಿಂದ ಫೆಬ್ರುವರಿವರೆ) ಈ ಪ್ರದೇಶಕ್ಕೆ ಪ್ರವಾಸ ಕೈಗೊಳ್ಳಬಹುದು.

ಬೇಸಿಗೆಗಾಲ

ಬೇಸಿಗೆಯಲ್ಲಿ ಒಣ ಹವೆಯನ್ನು ಹೊಂದಿರುವ ರಾಜ್ನಾಂದಗಾವ್ ದಲ್ಲಿ ಮಾರ್ಚ್ ನಿಂದ ಮೇ ವರೆಗೆ ಬಿಸಿಲ ಬೇಗೆ ತುಂಬಾ ಹೆಚ್ಚಿರುತ್ತದೆ. ಈ ಕಾಲದಲ್ಲಿ ಗರಿಷ್ಠ ತಾಪಮಾನ 42°ಸಿ ಮತ್ತು ಕನಿಷ್ಠ 28°ಸಿ ದಾಖಾಲಾಗಿದೆ. ಕಾರಣ ಬೇಸಿಗೆ ಕಾಲದಲ್ಲಿ ರಾಜ್ನಾಂದಗಾವ್ ಕಡೆಗೆ ಪ್ರಯಾಣ ಅಹಿತಕರ.

ಮಳೆಗಾಲ

ಇಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಮಳೆಯನ್ನು ತರುತ್ತಿದ್ದು, ಇವು ಯಾವುದೇ ಮುನ್ಸೂಚನೆ ಇಲ್ಲದೇ ಒಮ್ಮೊಮ್ಮೆ ಅತಿಯಾಗಿ - ಕೆಲವೊಮ್ಮೆ ಸಾಧಾರಣವಾಗಿ ಮಳೆ ಸುರಿಸುತ್ತವೆ. ಜೂನ್ ತಿಂಗಳ ಕೊನೆಯಲ್ಲಿ ಪ್ರಾರಂಭವಾಗುವ ಮಳೆಗಾಲ ಜುಲೈ-ಸೆಪ್ಟಂಬರ ನಲ್ಲಿ ಅತಿಹೆಚ್ಚು ಮಳೆ ತರುತ್ತದೆ.

ಚಳಿಗಾಲ

ಅಕ್ಟೋಬರ ನಿಂದ ಫೆಬ್ರುವರಿವರೆಗಿರುವ ಚಳಿಗಾಲ ಸೌಮ್ಯವಾಗಿದ್ದು, ತಾಪಮಾನ 27°ಸಿ -  13°ಸಿ ವ್ಯಾಪ್ತಿಯಲ್ಲಿರುತ್ತದೆ. ಆಹ್ಲಾದಕರ ಹವಾಮಾನವಿರುವ ಕಾರಣ ಈ ಕಾಲದಲ್ಲಿ ಪ್ರವಾಸ ಕೈಗೊಳ್ಳ ಬಹುದಾಗಿದೆ.