Search
  • Follow NativePlanet
Share
ಮುಖಪುಟ » ಸ್ಥಳಗಳು» ರಾಜಗೀರ್

ರಾಜಗೀರ್ : ಸಂಸ್ಕೃತಿ ಮತ್ತು ಇತಿಹಾಸದ ರೋಮಾಂಚನ

29

ರಾಜಗೀರ್ , ರಾಯಧನದ ತವರೂರು. ಭಾರತದ ಬಿಹಾರ ರಾಜ್ಯದ ಪ್ರಾಚೀನ ಮಘದದ ರಾಜಧಾನಿಯಾಗಿತ್ತು. ಭಕ್ತಿಪುರವು ವಿವಿಧ ಸಾರಿಗೆ ಮೂಲಕ ರಾಜಗೀರ್ ಅನ್ನು ಪಾಟ್ನಾಗೆ ಸೇರಿಸುತ್ತದೆ. ರಾಜಗೀರ್ ಒಂದು ಕಣಿವೆಯಲ್ಲಿದ್ದು ಪ್ರವಾಸಿಗರಿಗೆ ಮೋಡಿ ಮಾಡುವ ಸ್ಥಳ. ಈ ಕಣಿವೆಗಳು ಬೆಟ್ಟಗಳಿಂದ ಸುತ್ತುವರೆದಿದೆ. ಒಂದು ನಗರವಾದ ರಾಜಗೀರ್ ಬುದ್ಧ ಮತ್ತು ಬೌದ್ಧ ಮತಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಒಳಗೊಂಡಿದೆ. ರಾಜಗೀರ್ ನ ಸ್ಮಾರಕಗಳು ಮತ್ತು ಸ್ಥಳಗಳು ಪ್ರವಾಸಿಗರಿಗೆ ಜ್ಞಾನ, ಅನುಭವ ಮತ್ತು ರೊಮಾಂಚಕತೆಯನ್ನು ನೀಡುವುದು ಖಂಡಿತ.

ರಾಜಗೀರ್ ನ ಮುಖ್ಯ ಆಕರ್ಷಣೆಗಳು ಅಜಾತಶತ್ರು ಕೋಟೆ, ಜೀವಿಕಮೀವನ್ ಉದ್ಯಾನವನ ಮತ್ತು ಸ್ವರ್ಣ ಬಾಂಧೇರ್. ರಾಜಗೀರ್ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆ ಬ್ರಹ್ಮಕುಂಡ. ಬ್ರಹ್ಮಕುಂಡದಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಬಿಸಿನೀರಿನ ಬುಗ್ಗೆ ಇದ್ದು ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಗೌತಮ ಬುದ್ಧ ಮತ್ತು ಮಹಾವೀರ ತಮ್ಮ ಸಾಕಷ್ಟು ಕಾಲಗಳನ್ನು ಇಲ್ಲಿ ಕಳೆದಿದ್ದರಿಂದ ಜೈನರು ಮತ್ತು ಬೌದ್ಧರಿಗೆ ಈ ಸ್ಥಳದ ಮೇಲೆ ವಿಶೇಷ ಆಕರ್ಷಣೆಯಿದೆ.

ರಾಜಗೀರ್ ಎಂದರೆ ರಾಜಗೃಹ 'ರಾಜರ ಮನೆ'. ಇದು ಜರಾಸಂದ ಮತ್ತು ಪಾಂಡವರ ನಡುವಿನ ಕಥೆಯ ಬಗ್ಗೆ ಮಾಹಿತಿ ನೀಡುತ್ತದೆ. ಜೊತೆಗೆ ಇದು ಗೌತಮ ಬುದ್ಧ ಮತ್ತು ಮಹಾವೀರರು ನೆಲೆಸಿದ್ದಕ್ಕೆ ಕೂಡ ಸಾಕ್ಷಿಯಾಗಿದೆ. ಒಟ್ಟಾರೆ ರಾಜಗೀರ್ ಬೌದ್ಧ ಮತ್ತು ಜೈನ ಮತಗಳ ಪ್ರಮುಖ ಆಕರ್ಷಣೆಯಾಗಿದೆ. ರಾಜಗೀರ್ ನಲ್ಲಿರುವ ಸಪ್ತಪರ್ಣಿ ಗುಹೆಗಳು ಮೊದಲ ಬೌದ್ಧ ಕೌನ್ಸಿಲ್ ನಡೆದ ಸ್ಥಳ. ಇಲ್ಲಿನ ಬೌದ್ಧಮತದ ಬೆಳವಣಿಗೆ ಮತ್ತು ಜನಪ್ರಿಯತೆ ರಾಜಗೀರ್ ಅನ್ನು ಬೌದ್ಧ ಮತದ ಕೇಂದ್ರವಾಗಿಸಲು ಸಹಕರಿಸಿದೆ ಎನ್ನಬಹುದು.

ರಾಜಗೀರ್ ಪ್ರವಾಸಿ ಕೇಂದ್ರಗಳು ಬೌದ್ಧ ಮತದ ಅವಿಭಾಜ್ಯ ಭಾಗವಾಗಿದೆ ಮತ್ತು ಇತರ ಬೌದ್ಧ ಪ್ರವಾಸಿ ಕೇಂದ್ರಗಳಿಗೆ ಸಂಪರ್ಕ ಹೊಂದಿದೆ. ರಾಜಗೀರ್ ನ ಇನ್ನೊಂದು ಬೌದ್ಧ ತಾಣವಾದ ನಳಂದಾದಿಂದ 10 ಕಿ ಮೀ ಅಂತರದಲ್ಲಿದೆ. ಇಲ್ಲಿ ಬೇಸಿಗೆ ಬಿಸಿಯಾಗಿರುತ್ತದೆ ಮತ್ತು ಚಳಿಗಾಲ ಹದವಾದ ಚಳಿಯಿಂದ ಕೂಡಿರುತ್ತದೆ, ರಾಜಗೀರ್ಗೆ ಪ್ರವಾಸ ಕೈಗೊಳ್ಳಲು ಸೂಕ್ತ ಕಾಲ ಅಕ್ಟೋಬರ್ ನಿಂದ ಮಾರ್ಚ್. ರಾಜಗೀರ್ಗೆ ಪ್ರವಾಸ ಕೈಗೊಳ್ಳುವವರು ಮೊದಲೇ ಸರಿಯಾಗಿ ತಿಳಿದುಕೊಂಡು ಹೋಗುವುದು ಸೂಕ್ತ, ಇಲ್ಲಿ ವಿಮಾನ ನಿಲ್ದಾಣವಿಲ್ಲ ಕೇವಲ ರೈಲ್ವೇ ನಿಲ್ದಾಣವಿದೆ. ರಸ್ತೆ ಮೂಲಕ ಸಂಪರ್ಕ ಸೌಲಭ್ಯವಿದೆ.

ರಾಜಗೀರಿನ ಪ್ರಮುಖ ಹಬ್ಬಗಳಲ್ಲಿ ರಾಜಗೀರ್ ನೃತ್ಯ ಮಹೋತ್ಸವ ಪ್ರಮುಖವಾಗಿದೆ, ರಾಜಗೀರಿನ ಸ್ಥಳೀಯರು ಇದನ್ನು ಭಕ್ತಿ ಗೀತೆ, ಸಂಗೀತ ವಾದ್ಯ, ಜನಪದ ನೃತ್ಯ, ಒಪೆರಾ, ಶಾಸ್ತ್ರೀಯ ನೃತ್ಯ ಇವುಗಳ ಮೂಲಕ ಆಚರಿಸುತ್ತಾರೆ. ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಜನರು ತೀರ್ಥ ಸ್ನಾನ ಮಾಡಿ ಸಿಹಿ ಹಂಚುತ್ತಾರೆ. ಇವರು ಆಚರಿಸುವ ಇನ್ನೊಂದು ಹಬ್ಬ ಮಾಲಮಾಸ ಮೇಕ, 3 ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ.

ರಾಜಗೀರ್ ಪ್ರವಾಸೋದ್ಯಮ ಶ್ರೀಮಂತ ಮತ್ತು ವಿಶ್ರಾಂತ ಪ್ರವಾಸಿ ತಾಣಗಳನ್ನು ಹೊಂದಿದೆ. ರಾಜಗೀರಿನಲ್ಲಿರುವ ಬಿಸಿ ನೀರಿನ ಕೊಳ ಬ್ರಹ್ಮಕುಂಡದ ಕಾರಣದಿಂದಾಗಿ ಇದು ಚಳಿಗಾಲದ ರೆಸಾರ್ಟ್ ಆಗಿ ಮಾರ್ಪಟ್ಟಿದೆ.

ರಾಜಗೀರ್ ತಲುಪಲು ಸೂಕ್ತ ಸಮಯ

ಅಕ್ಟೋಬರ್ ನಿಂದ ಮಾರ್ಚ್ ರಾಜಗೀರಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಚಳಿಗಾಲದಲ್ಲಿ ಕಡಿಮೆ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್ ನಷ್ಟು ಇರುತ್ತದೆ.

ರಾಜಗೀರ್ ಪ್ರಸಿದ್ಧವಾಗಿದೆ

ರಾಜಗೀರ್ ಹವಾಮಾನ

ಉತ್ತಮ ಸಮಯ ರಾಜಗೀರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರಾಜಗೀರ್

  • ರಸ್ತೆಯ ಮೂಲಕ
    ರಾಜಗೀರ್ ಬಸ್ಸು,ಟ್ಯಾಕ್ಸಿ ಗಳು ರಸ್ತೆ ಮೂಲಕವಾಗಿ ಸುಲಭವಾಗಿ ಸಂಪರ್ಕ ಹೊಂದಿವೆ. ರಾಜಗೀರ್ ರಸ್ತೆ ಮಾರ್ಗವಾಗಿ ಪಾಟ್ನಾ-110 ಕಿ ಮೀ, ನಳಂದಾ-12 ಕಿ ಮೀ, ಗಯಾ - 78 ಕಿ ಮೀ ಗೆ ಸಂಪರ್ಕ ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರಾಜಗೀರ್ ನಗರದಲ್ಲಿ ರೇಲ್ವೆ ನಿಲ್ದಾಣವಿದೆ ಆದರೆ ಅಷ್ಟೊಂದು ಸಂಪರ್ಕ ಇಲ್ಲದಿರುವುದರಿಂದ ಹತ್ತಿರದ ರೈಲ್ವೇ ನಿಲ್ದಾಣ 78 ಕಿ ಮೀ ನಲ್ಲಿರುವ ಗಯಾ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಜಗೀರ್ ನಲ್ಲಿ ವಿಮಾನ ನಿಲ್ದಾಣ ಇಲ್ಲ. ಹತ್ತಿರದ ವಿಮಾನ ನಿಲ್ದಾಣ 101 ಕಿ ಮೀ ಅಂತರದಲ್ಲಿರುವ ಪಾಟ್ನಾ. ಪಾಟ್ನಾ ಗೆ ಇತರ ಮುಖ್ಯ ನಗರಗಳಿಂದ ಸಂಪರ್ಕ ವ್ಯವಸ್ಥೆ ಇದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri