Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಜಮಂಡ್ರಿ » ಹವಾಮಾನ

ರಾಜಮಂಡ್ರಿ ಹವಾಮಾನ

ರಾಜಮಂಡ್ರಿಗೆ ಭೇಟಿ ನೀಡಲು ಡಿಸೆಂಬರ್‌ ಮತ್ತು ಜನೆವರಿ ತಿಂಗಳುಗಳು ಉತ್ತಮಕಾಲ. ಈ ವೇಳೆ ಹವಾಮಾನ ಅತಿ ಶೀತಲವಾಗಿರುವುದರಿಂದ ಉತ್ತಮ ಪ್ರವಾಸಿ ಅನುಭವಗಳನ್ನು ನೀಡುತ್ತದೆ.

ಬೇಸಿಗೆಗಾಲ

ಸಾಮಾನ್ಯವಾಗಿ 36 ಡಿಗ್ರಿ ಸೆಲ್ಶಿಯಸ್‌ ಇರುವ ವಾತಾವರಣ ಬೇಸಿಗೆಯಲ್ಲಿ 48 ರಿಂದ 51 ಡಿಗ್ರಿ ಸೆಲ್ಶಿಯಸ್‌ ವರೆಗೂ ಏರಿಕೆಯಾಗುತ್ತದೆ. ಏಪ್ರಿಲ್‌ನಿಂದ ಜೂನ್‌ ವರೆಗೆ ಈ ಕಾಲ ಇರುತ್ತಿದ್ದು, ನಿಮ್ಮ ರಾಜಮಂಡ್ರಿ ಪ್ರವಾಸಕ್ಕೆ ಖಂಡಿತವಾಗಿಯೂ ಬೇಸಿಗೆ ಯೋಗ್ಯವಾಗಿಲ್ಲ.

ಮಳೆಗಾಲ

ಮಳೆಗಾಲದಲ್ಲಿ ರಾಜಮಂಡ್ರಿ ಪ್ರವಾಸಕ್ಕೆ ದಿನಹೊಂದಿಸಿಕೊಳ್ಳಬಹುದು. ಉತ್ತಮ ಮಳೆಯಾಗುತ್ತದಾದರೂ ಹವಾಗುಣ ಪ್ರವಾಸಕ್ಕೆ ಉತ್ತಮವಾಗಿರುತ್ತದೆ. ಜುಲೈನಿಂದ ಅಕ್ಟೋಬರ್‌ ವರೆಗೆ ಮಳೆಗಾಲವಿರುತ್ತದೆ. ಬಂಗಾಳಕೊಲ್ಲಿಯ ಚಂಡಮಾರುತ, ಬಿರುಗಾಳಿಯನ್ನು ಅವಲಂಬಿಸಿ ಮಳೆಯ ಪ್ರಮಾಣ ನಿರ್ಧಾರವಾಗುತ್ತದೆ.

ಚಳಿಗಾಲ

ರಾಜಮಂಡ್ರಿಯ ಚಳಿಗಾಲ ಹಿತಕರವಾಗಿದ್ದು, ್ತಾಪಮಾನ 30 ಡಿಗ್ರಿ ಸೆಲ್ಶಿಯಸ್‌ನಿಂದ  27 ಡಿಗ್ರಿವರೆಗೂ ಕೆಳಗಿಳಿಯುತ್ತದೆ. ಡಿಸೆಂಬರ್‌ ಮತ್ತು ಜನವರಿ ಅತಿ ತಂಪು ಹವಾಗುಣವನ್ನು ಹೊಂದಿದ್ದು, ರಾಜಮಂಡ್ರಿಯಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮವಾಗಿದೆ.