Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಯಸೇನ್ » ಹವಾಮಾನ

ರಾಯಸೇನ್ ಹವಾಮಾನ

ಪ್ರವಾಸಿಗರು  ರಾಯಸೇನಕ್ಕೆ ಮಳೆಗಾಲದಲ್ಲಿಯೂ ಸಹ ಭೇಟಿ ನೀಡಬಹುದು. ಆದರೆ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಯೋಗ್ಯವಾದ ಅವಧಿ ಎಂದರೆ  ಚಳಿಗಾಲ.  ಅಕ್ಟೋಬರ ಮತ್ತು ನವಂಬರ ತಿಂಗಳುಗಳಲ್ಲಿ ರಾಯಸೇನಕ್ಕೆ ಭೇಟಿ ನೀಡುವುದು  ಅತ್ಯಂತ ಸೂಕ್ತ. ಇವುಗಳು ಇಲ್ಲಿಗೆ ಭೇಟಿ ನೀಡಲು ವರ್ಷದ ಅತ್ಯುತ್ತಮವಾದ ತಿಂಗಳುಗಳಾಗಿವೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣ ಹೆಚ್ಚು ಅಹ್ಲಾದಕರ ಆಗಿದ್ದು, ಪ್ರವಾಸಿಗರನ್ನು ಕ್ರಿಯಾಶೀಲರನ್ನಾಗಿಸುತ್ತದೆ.

ಬೇಸಿಗೆಗಾಲ

ರಾಯಸೇನದಲ್ಲಿ ಬೇಸಿಗೆ ಕಾಲದ ತಾಪಮಾನವು 40 ಡಿಗ್ರಿ ಗಿಂತಲೂ ಮೆಲೆ ಹೋಗುತ್ತದೆ.  ಮದ್ಯಪ್ರದೇಶವು ಕರ್ನಾಟಕ ವೃತ್ತ ಹಾದು ಹೋಗುವ ಹಾದುಹೋಗುವ ರಾಜ್ಯಗಳಲ್ಲಿ ಒಂದಾಗಿದೆ. ಆದ್ದರಿಂದ ಇಲ್ಲಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ  ಹೆಚ್ಚು ಬಿಸಿ ಇರುತದೆ. ಆದ್ದರಿಂದ ಈ ಸಮಯದಲ್ಲಿ ರಾಯಸೇನಕ್ಕೆ ಭೇಟಿ ಕೊಡುವುದು ಖಂಡಿತ ಸೂಕ್ತವಲ್ಲ.

ಮಳೆಗಾಲ

ಸಾಧಾರಣವಾದ ಸೌಮ್ಯ ಮಳೆಯನ್ನು ಪ್ರತಿಯೊಬ್ಬರು ನಿರೀಕ್ಷಿಸುತ್ತಾರೆ. ಜೂನ ನಿಂದ ಸಪ್ಟಂಬರನವರೆಗೂ ಇಲ್ಲಿ ಹಿತಕರವಾದ ಸುತ್ತಮುತ್ತಲ ವಾತಾವರಣ ಮತ್ತು ಹವಾಮಾನವು  ಇರುತ್ತದೆ. ಇದು ಪ್ರವಾಸಿಗರಿಗೆ ತುಂಬಾ ಧನಾತ್ಮಕ ಅಂಶಗಳಾಗಿವೆ.ಹಗಲಿನ ಸಮಯದಲ್ಲಿ ಬಿಸಿಯಾದ ವಾತಾವರಣ ಇದ್ದರೂ, ರಾತ್ರಿ ಸಮಯದಲ್ಲಿ ತಂಪು ಮತ್ತು ಅಹ್ಲಾದಕತೆ ಕೂಡಿದ ವಾತಾವರಣ ಇರುತ್ತದೆ. ಮಳೆಗಾಲದ ಕುರಿತು ಇರುವ ಕೆಲವು ಸಾಮಾನ್ಯ ಸಂಗತಿಗಳನ್ನು ಬಿಟ್ಟರೆ,  ಈ ಅವಧಿಯಲ್ಲಿ ಪ್ರವಾಸಿಗರು ರಾಯಸೇನಕ್ಕೆ ಭೇಟಿಯನ್ನು ಕೊಡಬಹುದು.

ಚಳಿಗಾಲ

ರಾಯಸೇನಕ್ಕೆ ಭೇಟಿ ನೀಡಲು ಚಳಿಗಾಲ ಅತ್ಯುತ್ತಮ ಸಮಯವಾಗಿದೆ. ಈ ಸಮಯದಲ್ಲಿ ವಾತಾವರಣ ಹಿತಕರವಾಗಿದ್ದು, ಪ್ರವಾಸವೂ ಸಹ ಅಷ್ಟೊಂದು ಆಯಾಸಕರವಾಗುವುದಿಲ್ಲ. ಅದಾಗ್ಯೂ ಮಧ್ಯಪ್ರದೇಶದಲ್ಲಿ ಕೊರೆಯುವ ಚಳಿಯ ಅನುಭವವಾಗುತ್ತದೆ. ಆದ್ದರಿಂದ  ಹೋಗುವ ಮೊದಲು  ಅಲ್ಲಿನ ನಿಖರವಾದ ತಾಪಮಾನವನ್ನು ಪರೀಕ್ಷಿಸಿ ಪ್ರಯಾಣದ ಯೋಜನೆಗಳನ್ನು ರೂಪಿಸಿಕೊಳ್ಳಿ ಎಂಬ ಪುಟ್ಟ ಸಲಹೆ ಇದೆ. ಇದರಿಂದ ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.