Search
  • Follow NativePlanet
Share
ಮುಖಪುಟ » ಸ್ಥಳಗಳು» ರಾಯಪುರ್

ರಾಯಪುರ್ : ಇತಿಹಾಸದ ಪುಟಗಳ ಮೆಲುಕು

16

ಛತ್ತೀಸ್ ಗಢ್ ನ ರಾಜಧಾನಿ ರಾಯಪುರ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಹಾಗೂ ಪ್ರಮುಖ ಪ್ರವಾಸಿ ಕೇಂದ್ರ. ಭಾರತದ ಅನ್ನದ ಬಟ್ಟಲು ಎಂದೇ ಪ್ರಸಿದ್ಧಿಯಾಗಿರುವ ರಾಯಪುರ್ ಕೈಗಾರಿಕಾ ಮತ್ತು ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರ.

ರಾಯಪುರ್ ಸುತ್ತಮುತ್ತಲಿನ ಪ್ರವಾಸಿ ತಾಣಗಳು

ರಜಾ ದಿನಗಳನ್ನು ತುಂಬಾ ಖುಷಿಯಿಂದ ಕಳೆಯಲು ರಾಯಪುರ್ ಒಂದು ಅತ್ಯುತ್ತಮ ತಾಣ. ಹಿಂದೆ ನಗರದಲ್ಲಿನ ಪ್ರವಾಸಿ ತಾಣಗಳು ಕಡೆಗಣಿಸಲ್ಪಟ್ಟಿದ್ದರೂ ಈಗ ರಾಯಪುರ್ ವಿದೇಶಿಗರು ಮತ್ತು ಇತರ ಪ್ರವಾಸಿಗರಲ್ಲಿ ಜನಪ್ರಿಯತೆ ಗಳಿಸುತ್ತಿದೆ.

ರಾಯಪುರ್ ನ ಪ್ರವಾಸೋದ್ಯಮದಲ್ಲಿ ಹಲವಾರು ಆಕರ್ಷಣೆಗಳಿವೆ. ದೂಧಧಾರಿ ಧಾರ್ಮಿಕ ಕೇಂದ್ರ, ಮಹಾಂತ ಘಾಸಿದಾಸ್ ಮ್ಯೂಸಿಯಂ, ವಿವೇಕಾನಂದ ಸರೋವರ್, ವಿವೇಕಾನಂದ ಆಶ್ರಮ, ಶಾದನಿ ದರ್ಬಾರ್ ಮತ್ತು ಫಿಂಗೇಶ್ವರ್ ಇಲ್ಲಿನ ಪ್ರಮುಖ ಆಕರ್ಷಣೆಗಳು. ವಾಸ್ತುಶಿಲ್ಪದ ಸ್ಮಾರಕಗಳಿಗೆ ಹೆಸರುವಾಸಿಯಾಗಿರುವ ನಗರದಲ್ಲಿನ ಕೆಲವು ಹಳೆ ಕಟ್ಟಡಗಳ ಅವಶೇಷಗಳು ವಿಶ್ವದೆಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ನಗರದ ಹೃದಯ ಭಾಗದಲ್ಲಿರುವ ನಗರ್ ಘಡಿ ಎನ್ನುವ ಹಾಡುವ ಗಡಿಯಾರ ಪ್ರತೀ ಗಂಟೆಗೊಮ್ಮೆ ಛತ್ತೀಸ್ ಗಢದ ಜಾನಪದ ಸಂಗೀತವನ್ನು ಹಾಡುತ್ತದೆ. ಮತ್ತೊಂದು ಆಸಕ್ತಿಯ ಕೇಂದ್ರವೆಂದರೆ ರಾಜೀವ್ ಗಾಂದಿ ವನ್ ಆ್ಯಂಡ್ ಉರ್ಜಾ ಭವನ. ಇಲ್ಲಿರುವ ಎಲ್ಲಾ ಸಾಧನಗಳು ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸಲ್ಪಡುತ್ತದೆ.

ನಗರದ ಇತರ ಆಕರ್ಷಣೆಗಳೆಂದರೆ ಪಾಲರಿ, ಶಹೀದ್ ಸ್ಮಾರಕ ಭವನ, ಮಹಾವೀರ್ ಪಾರ್ಕ್, ಪುಕಹೌತಿ ಮುಕ್ತಾಂಗನ ಮ್ಯೂಸಿಯಂ, ಮಹಾಕೊಶಲ್ ಕಲಾ ಪರಿಷದ್, ಚಂದ್ರಮುಖಿ ಮತ್ತು ಗಿರೊಧಪುರಿ.

ರಾಯಪುರ್ ನ ಇತಿಹಾಸದ ಮೇಲೆ ಒಂದು ದೀರ್ಘ ನೋಟ

ರಾಯಪುರ್ ನಗರವು ಹಿಂದೆ ಮಧ್ಯಪ್ರದೇಶದ ಪ್ರಮುಖ ಭಾಗವಾಗಿತ್ತಲ್ಲದೆ ಇಂದೋರ್ ಬಳಿಕ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಪ್ರದೇಶದ ಪ್ರಮುಖ ಆದಾಯ ಮೂಲವೆಂದರೆ ಕೃಷಿ, ಉಕ್ಕು, ಸಿಮೆಂಟ್, ಮಿಶ್ರಲೋಹ, ಅವಲಕ್ಕಿ ಮತ್ತು ಅಕ್ಕಿ. ಛತ್ತೀಸಗಢ್ ನ ಪ್ರಮುಖ ಕೈಗಾರಿಕಾ ಕೇಂದ್ರವಾಗಿರುವ ನಗರದಲ್ಲಿ ಉಕ್ಕು, ವಿದ್ಯುತ್, ಪ್ಲೇವುಡ್, ಸ್ಟೀಲ್ ಮತ್ತು ಅಲುಮಿನಿಯಂನ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ.

ರಾಯಪುರ್ ನ ನಾಗರಿಕತೆ ಮತ್ತು ಸಂಸ್ಕೃತಿ

ರಾಯಪುರ್ ನಲ್ಲಿ ಕಂಡುಬರುವ ಸ್ಥಳೀರಯ ಛತ್ತೀಸಗಢ್ ನವರು. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಜನರು ಈಶಾನ್ಯ ಭಾರತದ ಜನರೊಂದಿಗೆ ಹೊಂದಿಕೊಂಡು ಇಲ್ಲಿ ವಾಸಿಸುತ್ತಿದ್ದಾರೆ. ನಗರವು ಒಡಿಸ್ಸಾ(ಒರಿಸ್ಸಾ)ಗೆ ತುಂಬಾ ಸಮೀಪವಿರುವ ಹಿನ್ನೆಲೆಯಲ್ಲಿ ಒರಿಯಾ ಇಲ್ಲಿನ ಸಾಮಾನ್ಯ ಭಾಷೆ. ಸ್ಥಳೀಯ ಹಬ್ಬಗಳಾದ ಹರೇಲಿ ಹಬ್ಬ, ಪೊಲಾ ಹಬ್ಬ ಮತ್ತು ತೀಜಾ ಹಬ್ಬಗಳು ರಾಯಪುರ್ ನಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳು.

ರಾಯಪುರ್ ತಲುಪುವುದು ಹೇಗೆ

ರಾಯಪುರ್ ಗೆ ಛತ್ತಿಸ್ ಗಢ್ ನ ಇತರ ಪ್ರಮುಖ ನಗರ ಮತ್ತು ಇತರ ರಾಜ್ಯಗಳೊಂದಿಗೆ ಒಳ್ಳೆಯ ಸಂಪರ್ಕವಿದೆ.

ರಾಯಪುರ್ ಗೆ ಭೇಟಿ ನೀಡಲು ಸೂಕ್ತ ಸಮಯ

ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ಇರುವ ಚಳಿಗಾಲದ ವೇಳೆ ರಾಯಪುರ್ ಗೆ ಭೇಟಿ ನೀಡಲು ಸೂಕ್ತ ಸಮಯ.

ರಾಯಪುರ್ ಪ್ರಸಿದ್ಧವಾಗಿದೆ

ರಾಯಪುರ್ ಹವಾಮಾನ

ಉತ್ತಮ ಸಮಯ ರಾಯಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ರಾಯಪುರ್

  • ರಸ್ತೆಯ ಮೂಲಕ
    ಛತ್ತಿಸ್ ಗಢ್ ನ ರಾಜ್ಯ ರಾಜಧಾನಿಯಾಗಿರುವ ರಾಯಪುರ್ ಗೆ ನಗರದ ಇತರ ಎಲ್ಲಾ ನಗರಗಳಿಂದ ಬಸ್ ಸೇವೆಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ದೆಹಲಿ, ನಾಗ್ಪುರ, ಮುಂಬಯಿ, ಚೆನ್ನೈ ಮತ್ತು ಭುವನೇಶ್ವರದಿಂದ ರೈಲು ಸೇವೆಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ರಾಯಪುರ್ ನಲ್ಲಿ ವಿಮಾನ ನಿಲ್ದಾಣವಿದೆ. ವಿಮಾನ ಮೂಲಕ ರಾಯಪುರ್ ಗೆ ಪ್ರಯಾಣಿಸುವುದು ಸುಲಭ. ರಾಷ್ಟ್ರದ ಪ್ರಮುಖ ನಗರಗಳಾದ ದೆಹಲಿ, ಕೊಲ್ಕತ್ತಾ, ಭೋಪಾಲ್, ಅಹ್ಮದಾಬಾದ್, ನಾಗ್ಪುರದಿಂದ ಇಲ್ಲಿಗೆ ವಿಮಾನ ಸೇವೆಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed