ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ಇರುವ ಚಳಿಗಾಲದ ವೇಳೆ ರಾಯಪುರ್ ಗೆ ಭೇಟಿ ನೀಡಲು ಸೂಕ್ತ ಸಮಯ.
ಬೇಸಿಗೆ ತುಂಬಾ ಉಷ್ಣತೆ ಮತ್ತು ಶುಷ್ಕವಾಗಿರುತ್ತದೆ. ಮಾರ್ಚ್ ನಿಂದ ಆರಂಭವಾಗುವ ಬೇಸಿಗೆ ಮೇ ತನಕ ಮುಂದುವರಿಯುತ್ತದೆ. ಈ ವೇಳೆ ಉಷ್ಣಾಂಶವು 28ರಿಂದ 42 ಡಿಗ್ರಿ ತನಕವಿರುತ್ತದೆ.
ಮಾನ್ಸೂನ್ ಜೂನ್ ನಲ್ಲಿ ಆರಂಭವಾಗಿ ಸೆಪ್ಟಂಬರ್ ತನಕ ಮುಂದುವರಿಯುತ್ತದೆ. ಈ ಸಮಯದಲ್ಲಿ ಸರಾಸರಿ ತಾಪಮಾನವು 30 ಡಿಗ್ರಿ ತನಕವಿರುತ್ತದೆ.
ಚಳಿಗಾಲದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯ. ಚಳಿಗಾಲವು ಅಕ್ಟೋಬರ್ ನಿಂದ ಜನವರಿ ತನಕವಿರುತ್ತದೆ. ಈ ವೇಳೆ ತಾಪಮಾನವು 13-30 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಈ ವೇಳೆ ಭೇಟಿ ನೀಡುವುದಾದರೆ ನಿಮ್ಮೊಂದಿಗೆ ತೆಳು ಉಣ್ಣೆಯ ಬಟ್ಟೆಗಳನ್ನು ಕೊಂಡೊಯ್ಯಲು ಮರೆಯಬೇಡಿ.