Search
  • Follow NativePlanet
Share
ಮುಖಪುಟ » ಸ್ಥಳಗಳು » ಪುರಿ » ಹವಾಮಾನ

ಪುರಿ ಹವಾಮಾನ

ಜೂನ್ ನಿಂದ ಮಾರ್ಚ್ ತನಕ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ವಿಶ್ವಪ್ರಸಿದ್ಧ ರಥಯಾತ್ರೆಯು ಜುಲೈ ತಿಂಗಳಲ್ಲಿ ನಡೆಯುತ್ತದೆ. ಇತರ ಕೆಲವು ಹಬ್ಬಗಳನ್ನು ಇದೇ ಸಮಯದಲ್ಲಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಹವಾಮಾನ ಅತ್ಯುತ್ತಮವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್ ನಿಂದ 45 ಡಿಗ್ರಿ ಸೆಲ್ಸಿಯಸ್ ತನಕವಿರುವ ಕಾರಣ ತುಂಬಾ ಸೆಕೆಯಿರುತ್ತದೆ. ಮಾರ್ಚ್, ಎಪ್ರಿಲ್ ಮತ್ತು ಮೇ ಬೇಸಿಗೆಯ ತಿಂಗಳುಗಳು. ಮಾರ್ಚ್ ನಲ್ಲಿ ಹವಾಮಾನ ಸ್ವಲ್ಪ ಹಿತಕರವಾಗಿದ್ದರೂ ಎಪ್ರಿಲ್ ಮತ್ತು ಮೇಯಲ್ಲಿ ತಡೆಯಲಸಾಧ್ಯ ಉಷ್ಣತೆಯಿರುತ್ತದೆ.

ಮಳೆಗಾಲ

ಮಳೆಗಾಲದಲ್ಲಿ ಈ ಪವಿತ್ರ ನಗರದಲ್ಲಿ ಸಾಮಾನ್ಯದಿಂದ ಭಾರೀ ಮಳೆಯಾಗುತ್ತದೆ. ತೀವ್ರ ಸೆಕೆಯ ಬೇಸಿಗೆಗಾಲದ ಬಳಿಕ ಜೂನ್ ನಲ್ಲಿ ಮೋಡಗಳು ಆವರಿಸುತ್ತದೆ ಮತ್ತು ಅಕ್ಟೋಬರ್ ತನಕ ಇದು ಮುಂದುವರಿಯುತ್ತದೆ. ಮಳೆಗಾಲದಲ್ಲಿ ಪುರಿಗೆ ಭೇಟಿ ನೀಡಬಹುದು. ಯಾಕೆಂದರೆ ಈ ಅವಧಿಯಲ್ಲಿ ಹವಾಮಾನ ಅತ್ಯುತ್ತಮವಾಗಿರುತ್ತದೆ.

ಚಳಿಗಾಲ

ಚಳಿಗಾಲ ನವಂಬರ್ ನಲ್ಲಿ  ಆರಂಭವಾಗುತ್ತದೆ ಮತ್ತು ಫೆಬ್ರವರಿ ತನಕ ಇದು ಮುಂದುವರಿಯುತ್ತದೆ. ಈ ವೇಳೆ ಹವಾಮಾನ ತಂಪಾಗಿರುತ್ತದೆ ಮತ್ತು ತಾಪಮಾನ 10 ಡಿಗ್ರಿ ಸೆಲ್ಸಿಯಸ್ ನಿಂದ 18 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಈ ಅವಧಿಯಲ್ಲಿ ಹವಾಮಾನವು ಪ್ರಕೃತಿ ಸೌಂದರ್ಯ ವೀಕ್ಷಣೆ ಮತ್ತು ಇತರ ಪ್ರವಾಸಿ ಚಟುವಟಿಕೆಗಳಿಗೆ ಹಿತಕರವಾಗಿರುತ್ತದೆ. ಚಳಿಗಾಲದಲ್ಲಿ ಪುರಿಗೆ ಭೇಟಿ ನೀಡುವ ವೇಳೆ ಉಣ್ಣೆ ಬಟ್ಟೆಯನ್ನು ಮರೆಯದೆ ತೆಗೆದುಕೊಂಡು ಹೋಗಬೇಕು