Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಣೆ » ಹವಾಮಾನ

ಪುಣೆ ಹವಾಮಾನ

ಪುಣೆ ನಗರವನ್ನು ಸುತ್ತುವುದಕ್ಕೆ ಚಳಿಗಾಲ ಮತ್ತು ಮಳೆಗಾಲವೆರಡೂ ಕೂಡಾ ಸೂಕ್ತವಾದುದು.

ಬೇಸಿಗೆಗಾಲ

ಮಾರ್ಚ್‌ನಿಂದ ಜುಲೈವರೆಗಿನ ಬೇಸಿಗೆಕಾಲವು ಉಷ್ಣವಾತಾವರಣವನ್ನು ಹೊಂದಿರುತ್ತದೆ. ಬೆಳಗ್ಗೆ ತಂಪಾಗಿರುವ ವಾತಾವರಣ ಸೂರ್ಯ ಮೇಲೇರುತ್ತಿದ್ದಂತೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚುತ್ತಾ ಸಾಗುತ್ತದೆ. ರಾತ್ರಿಯ ಸಮಯವು ತಂಪಾಗಿರುತ್ತದೆ. ಉಷ್ಣಾಂಶವು ಸಾಮಾನ್ಯವಾಗಿ 38°C ನಿಂದ 20°C ಮಧ್ಯೆ ಹೆಚ್ಚು ಕಡಿಮೆಯಾಗುತ್ತಿರುತ್ತದೆ.

ಮಳೆಗಾಲ

ಮಧ್ಯ ಜುಲೈನಿಂದ ಆರಂಭವಾಗುವ ಮಳೆಗಾಲ ಅಕ್ಟೋಬರಿನವರೆಗೂ ಮುಂದುವರಿಯುತ್ತದೆ. ವಾರ್ಷಿಕವಾಗಿ ಉತ್ತಮವಾದ ಮಳೆ ಪುಣೆಯಲ್ಲಿ ಕಂಡುಬರುತ್ತದೆ. ಮಳೆಗಾಲದಲ್ಲಿ  ಉಷ್ಣಾಂಶವು 18°C ನಿಂದ 30°C ಮಧ್ಯೆ ತುಯ್ದಾಡುತ್ತಿರುತ್ತದೆ. ಈ ಅವಧಿಯಲ್ಲಿ ಇಡೀ ನಗರ ಹಸಿರಾಗಿರುತ್ತದೆ.

ಚಳಿಗಾಲ

ಬಹುತೇಕ ಎಲ್ಲಾ ಪ್ರವಾಸಿಗರು ಪುಣೆಗೆ ಭೇಟಿಕೊಡಲು ಚಳಿಗಾಲವನ್ನೇ ಹೆಚ್ಚು ಆಯ್ಕೆಮಾಡಿಕೊಳ್ಳುತ್ತಾರೆ. ನವೆಂಬರಿನಿಂದ ಫೆಬ್ರುವರಿಯವರೆಗೆ ಪುಣೆಯಲ್ಲಿ ತಂಪಾದ ಹಗಲು ಮತ್ತು ತಂಪಾದ ರಾತ್ರಿ ಇರುತ್ತದೆ. ಉಷ್ಣಾಂಶವು ಈ ಸಮಯದಲ್ಲಿ 12°C ಇರುತ್ತದೆ. ಇದು ಪೀಕ್‌ ಸೀಸನ್‌ ಆಗಿರುವುದರಿಂದ ಹೊಟೆಲ್‌ ಬಾಡಿಗೆ ದರಗಳು ಸಾಮಾನ್ಯವಾಗಿ ಹೆಚ್ಚಿರುತ್ತದೆ.