Search
  • Follow NativePlanet
Share
ಮುಖಪುಟ » ಸ್ಥಳಗಳು » ಪುನಲೂರ್ » ಹವಾಮಾನ

ಪುನಲೂರ್ ಹವಾಮಾನ

ಚಳಿಗಾಲ ಪುನಲೂರಿಗೆ ಭೇಟಿ ನೀಡಲು ಉತ್ತಮವಾದ ಕಾಲ. ಈ ಸಮಯದಲ್ಲಿ ಇಲ್ಲಿ ತಂಪಾದ ವಾತಾವರಣವಿದ್ದು ಉಷ್ಣತೆ ಕಡಿಮೆಯಿದ್ದು ಹಿತವಾಗಿರುತ್ತದೆ. ಮಳೆಗಾಲದಲ್ಲಿಯೂ ಪುನಲೂರನ್ನು ಭೇಟಿ ಮಾಡಬಹುದು.

ಬೇಸಿಗೆಗಾಲ

ಪುನಲೂರ್ ಪಟ್ಟಣ ಕೇರಳದಲ್ಲಿಯೇ ಅತಿಹೆಚ್ಚು ಉಷ್ಣತೆಯನ್ನು ಹೊಂದಿರುವ ಸ್ಥಳವಾಗಿದ್ದು ಬೇಸಿಗೆಯಲ್ಲಿ ಇಲ್ಲಿನ ಉಷ್ಣತೆ ಕೆಲವೊಮ್ಮೆ 41 ಡಿಗ್ರಿಯನ್ನು ತಲುಪುತ್ತದೆ. ಎಪ್ರಿಲ್ ನಿಂದ ಮೇ ವರೆಗೆ ಬೇಸಿಗೆ ಕಾಲವಿದ್ದು ಈ  ಸಮಯ ಪುನಲೂರನ್ನು ಭೇಟಿ ಮಾಡಲು ಸೂಕ್ತ ಸಮಯವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಮಳೆಯ ಮೋಡಗಳು ಪುನಲೂರನ್ನು ಸುತ್ತುವರೆದಿರುತ್ತವೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ತಂಪಾಗಿರುತ್ತದೆ ಮತ್ತು ಹಿತವಾಗಿರುತ್ತದೆ.

ಚಳಿಗಾಲ

ಚಳಿಗಾಲದ ಋತಿವಿನಲ್ಲಿ ಪುನಲೂರಿನ ಉಷ್ಣತೆ 15 ಡಿಗ್ರಿಗೆ ಕುಸಿದಿರುತ್ತದೆ. ಚಳಿಗಾಲ ಇಲ್ಲಿ ಕಡಿಮೆ ಸಮಯ ಅಂದರೆ ಕೇವಲ ಜನವರಿ ಫೇಬ್ರವರಿ ತಿಂಗಳಲ್ಲಿ ಮಾತ್ರ ಇರುತ್ತದೆ. ಚಳಿಗಾಲದಲ್ಲಿ ಪುನಲೂರ್ ಹಿತವಾದ ವಾತಾವರಣ ಹೊಂದಿರುತ್ತದೆ.