ಏಪ್ರಿಲ್ ಮತ್ತು ಅಕ್ಟೋಬರಿನವರೆಗೆ ಇಲ್ಲಿ ಅವಧಿ ಅತ್ಯುತ್ತಮವಾದದ್ದು. ಪುಲ್ವಾಮಾ ಜಿಲ್ಲೆಗೆ ಭೇಟಿ ನೀಡಲು ಇದು ಸೂಕ್ತ ಸಮಯ. ಯಾಕೆಂದರೆ ಇಲ್ಲನ ವಾತಾವರಣ ಅಷ್ಟು ಹಿತವಾಗಿರುತ್ತದೆ.
(ಏಪ್ರಿಲ್‌ನಿಂದ ಜೂನ್): ಪುಲ್ವಾಮಾದ ಬೇಸಿಗೆಗಾಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಸಿಲು ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ತಾಪಮಾನ 35 ರಿಂದ 22 ಡಿಗ್ರಿ ಸೆಲ್ಷಿಯಸ್ ತಾಪಮಾನವನ್ನು ಹೊಂದಿರುತ್ತದೆ. ಹೀಗಾಗಿ ಇಲ್ಲಿನ ಸುಂದರ ತಾಣಗಳನ್ನು ನೋಡಲು, ಬಾಹ್ಯ ಚಟುವಟಿಕೆ ಕೈಗೊಳ್ಳಲು ಸೂಕ್ತ ಕಾಲವಿದು. ಆದರೆ ಸಾಧ್ಯವಾದಷ್ಟು ಮೇ ತಿಂಗಳಲ್ಲಿ ಇಲ್ಲಿಗೆ ಪ್ರಯಾಣ ಮಾಡುವುದನ್ನು ದೂರಮಾಡಿ. ಯಾಕೆಂದರೆ ಈ ಸಂದರ್ಭದಲ್ಲಿ ಇಲ್ಲಿನ ತಾಪಮಾನ ಹೆಚ್ಚಿರುತ್ತದೆ.
(ಜುಲೈನಿಂದ ಸಪ್ಟೆಂಬರ‍್): ಮಳೆಗಾಲ ಶುರುವಾಗುವುದು ಜುಲೈನಲ್ಲಿ. ಸಪ್ಟೆಂಬರಿನವರೆಗೆ ಮಳೆ ಸುರಿಯುತ್ತಿರುತ್ತದೆ. ಮಳೆಗಾಲದಲ್ಲಿ ಇಲ್ಲಿ ಮಧ್ಯಮ ಪ್ರಮಾಣದ ಮಳೆ ಬರುತ್ತದೆ, ಮಳೆಯಲ್ಲಿ ನೆನೆಯುವ ಮನಸಿದ್ದವರು, ಮಳೆಯನ್ನು ಇಷ್ಟಪಡುವವರು ಇಲ್ಲಿಗೆ ಆಗಮಿಸಬಹುದು.
(ಡಿಸೆಂಬರಿನಿಂದ ಫೆಬ್ರವರಿ): ಚಳಿಗಾಲದಲ್ಲಿ ಇಲ್ಲಿನ ಚಳಿಯನ್ನು ತಡೆದುಕೊಳ್ಳುವುದು ಕಷ್ಟ. ಯಾಕೆಂದರೆ ವಿಪರೀತ ಚಳಿ ಮತ್ತು ತಾಪಮಾನವು -5 ಡಿಗ್ರಿ ಸೆಲ್ಷಿಯಸ್‌ಗಿಂತ ಕಡಿಮೆ ಇರುತ್ತದೆ. ಹಾಗೆಯೇ ಗರಿಷ್ಠ ತಾಪಮಾನವು 10 ಡಿಗ್ರಿ ಸೆಲ್ಷಿಯಸ್ ಈವರೆಗೆ ದಾಖಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಪ್ರವಾಸಿಗರು ಇಲ್ಲಿಗೆ ಪ್ರಯಾಣ ನಡೆಸುವುದನ್ನು ಆದಷ್ಟು ದೂರ ಮಾಡುವುದು ಒಳಿತು. ಯಾಕೆಂದರೆ ಇಂತಹ ವಾತಾವರಣದಲ್ಲಿ ಇಲ್ಲಿನ ಸುಂದರ ಪರಿಸರವನ್ನು ನೋಡುವುದು ಅಸಾಧ್ಯ.