ಶ್ರೀನಗರ ವಿಮಾನ ನಿಲ್ದಾಣವನ್ನು ಶೇಖ್ ಉಲ್ ಅಲಮ್ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ. ಇದು ಪುಲ್ವಾಮಾಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚಂಡೀಗಢ ಮತ್ತು ಶಿಮ್ಲಾಗೆ ಇಲ್ಲಿಂದ ನೇರ ಸಂಪರ್ಕವಿದೆ. ಇಲ್ಲಿಂದ ಪ್ರವಾಸಿಗರು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಪುಲ್ವಾಮಾಗೆ ಪ್ರಯಾಣಿಸಬಹುದು. ಶ್ರೀನಗರದಿಂದ 876 ಕಿ.ಮೀ ದೂರದಲ್ಲಿರುವ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪುಲ್ವಾಮಾಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.