Search
  • Follow NativePlanet
Share
ಮುಖಪುಟ » ಸ್ಥಳಗಳು» ಪುಲ್ವಾಮಾ

ಪುಲ್ವಾಮಾ - ಸುಂದರ ಪರಿಸರದಲ್ಲಿ ಧಾರ್ಮಿಕತೆಯ ಸುವಾಸನೆ

14

ಜಮ್ಮು ಕಾಶ್ಮೀರದ ಸುಂದರ ನಗರಗಳಲ್ಲೊಂದು ಪುಲ್ವಾಮಾ. ಇದನ್ನು ’ಕಾಶ್ಮೀರದ ಅಕ್ಕಿ ಪಾತ್ರೆ’ ಎಂದೂ ಕರೆಯಲಾಗುತ್ತದೆ. ಜಿಲ್ಲೆಯು 323 ಹಳ್ಳಿಗಳನ್ನು ಹೊಂದಿದೆ. ಅವಂತಿಪುರ, ಶಾಪಿಯನ್‌, ಪುಲ್ವಾಮಾ, ಟ್ರಾಲ್‌ ಮತ್ತು ಪಾಂಪೋರ್‌ ಎಂದು ಐದು ಗುಂಪುಗಳಾಗಿ ಇವುಗಳನ್ನು ವಿಂಗಡಿಸಲಾಗಿದೆ. ಶ್ರೀನಗರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಪುಲ್ವಾಮಾವನ್ನು 1979 ರಲ್ಲಿ ಜಿಲ್ಲೆಯನ್ನಾಗಿ ಪರಿಗಣಿಸಲಾಯಿತು. ಮೊದಲು ಈ ಪ್ರಾಂತ್ಯಕ್ಕೆ ಪನ್ವಂಗಮ್‌ ಎಂದು ಕರೆಯಲಾಗಿತ್ತು. ನಂತರ ಪುಲ್ಗಾಮ್‌ ಎಂದು ಮರುನಾಮಕರಣ ಮಾಡಲಾಗಿತ್ತು.

1346 ರಿಂದ 1586 ರ ವರೆಗೆ ಕಾಶ್ಮೀರದ ರಾಜರು ಪುಲ್ವಾಮಾ ಪ್ರದೇಶವನ್ನು ಆಳುತ್ತಿದ್ದರು. ಮೊಘಲ್‌ ಆಡಳಿತಗಾರರು 16ನೇ ಶತಮಾನದಲ್ಲಿ ಇಲ್ಲಿಗೆ ಆಗಮಿಸಿದ್ದರು. 19ನೇ ಶತಮಾನದ ಆರಂಭದಲ್ಲಿ ಅಫಘನ್ನರು ಈ ಪ್ರದೇಶವನ್ನು ಆಕ್ರಮಿಸಿಕೊಂಡರು.ಇದು ಇದರ ಗತ ಇತಿಹಾಸ. ಇನ್ನು ಪ್ರವಾಸಿಗರಿಗೆ ಇಲ್ಲಿ ನೋಡಲು ಸಾಕಷ್ಟು ತಾಣಗಳಿವೆ. ಧಾರ್ಮಿಕ ತಾಣಗಳು, ಐತಿಹಾಸಿಕ ತಾಣಗಳು ಸೇರಿದಂತೆ ಹಲವು ಆಕರ್ಷಕ ಪ್ರವಾಸಿ ಕ್ಷೇತ್ರಗಳಿವೆ.

ದೇಶದ ಹಲವು  ಭಾಗಗಳಿಂದ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಐತಿಹಾಸಿಕ ರಸ್ತೆ ಮುಘಲ್‌ ರಸ್ತೆ, ಅಹರ್ಬಲ್‌ ಜಲಪಾತ, ಶಿಕರಗಢ, ಅರಿಪಾಲ ನಾಗ್‌, ಹುರ್ಪೋರಾ ಮತ್ತು ತರ್ಸಾರ‍್ ಹಾಗೂ ಮರ್ಸಾರ‍್ ಕೆರೆಗಳಿಂದ ಪುಲ್ವಾಮಾ ಪ್ರದೇಶ ಪ್ರವಾಸಿಗರ ಸ್ವರ್ಗವಾಗಿದೆ. ಇನ್ನು ಪುಲ್ವಾಮಾಗೆ ಭೇಟಿ ನೀಡಿದ ಪ್ರವಾಸಿಗರು ಕುಂಗ್ವಾಟ್ಟನ್‌ ಮತ್ತು ನಾಗ್ಬರೆನ್‌ ಪ್ರದೇಶಕ್ಕೂ ಭೇಟಿ ನೀಡಬಹುದು. ಇವು ಪ್ರವಾಸಿಗರಿಗೆ ಮುದ ನೀಡುವಂಥ ಸ್ಥಳಗಳು.

ಪೇಯರ‍್ ದೇವಸ್ಥಾನ, ಅವಂತೀಶ್ವರ ದೇವಸ್ಥಾನ, ಶಾಹ್‌ ಹಮ್ದಾನ್‌ ಸಮಾಧಿ ಮತ್ತು ಸೈಯದ್‌ ಹಸನ್‌ ಮಂಟಾಕಿ ಸಮಾಧಿ ಇಲ್ಲಿನ ಜನಪ್ರಿಯ ಸ್ಥಳಗಳು. ಜಾಮಾ ಮಸೀದಿ ಶಾಪಿಯನ್‌ ಮತ್ತು ಅಸರ‍್ ಶರೀಫ್‌ ಪಿಂಜೂರಾ ಕೂಡಾ ಪುಲ್ವಾಮಾದ ಧಾರ್ಮಿಕವಾಗಿ ಪ್ರಾಮುಖ್ಯತೆಯನ್ನು ಹೊಂದಿರುವ ಸ್ಥಳಗಳು.

ಸಾರಿಗೆಯ ಪ್ರಮುಖ ವಿಧಾನಗಳ ಮೂಲಕ ಪುಲ್ವಾಮಾಗೆ ಸುಲಭವಾಗಿ ತಲುಪಬಹುದು. ಶೇಖ್‌ ಉಲ್‌ ಅಲಮ್‌ ವಿಮಾನ ನಿಲ್ದಾಣವನ್ನು ಸಾಮಾನ್ಯವಾಗಿ ಶ್ರೀನಗರ ವಿಮಾನ ನಿಲ್ದಾಣವೆಂದೇ ಕರೆಯಲಾಗಿದೆ. ಮುಂಬೈ, ಜಮ್ಮು, ನವದೆಹಲಿ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕವಿದೆ. ಇನ್ನು ಪುಲ್ವಾಮಾಗೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಜಮ್ಮು ತಾವಿ ರೈಲ್ವೆ ನಿಲ್ದಾಣ. ಭಾರತದ ಪ್ರಮುಖ ನಗರಗಳನ್ನು ಈ ರೈಲು ನಿಲ್ದಾಣ ಸಂಪರ್ಕಿಸುತ್ತದೆ.

ಪ್ರವಾಸಿಗರ ಮನಸ್ಸಿನಲ್ಲಿ ಪುಲ್ವಾಮಾ ನೆಲೆನಿಲ್ಲುವುದು ಇಲ್ಲಿನ ನಿಸರ್ಗ ಸೌಂದರ್ಯಕ್ಕೆ ಮತ್ತು ಹಿತವಾದ ವಾತಾವರಣದಿಂದಾಗಿ. ಬೆಚ್ಚನೆಯ ಬೇಸಿಗೆ ಮತ್ತು ಹಿಮದಂಥಾ ಚಳಿಗಾಲವನ್ನು ಈ ಪ್ರದೇಶವು ಅನುಭವಿಸುತ್ತದೆ. ನೀವು ಪುಲ್ವಾಮಾಗೆ ಭೇಟಿ ನೀಡುತ್ತೀರಾದರೆ ಏಪ್ರಿಲ್‌ನಿಂದ ಅಕ್ಟೋಬರಿನವರೆಗೆ ಸೂಕ್ತ ಸಮಯ.

ಪುಲ್ವಾಮಾ ಪ್ರಸಿದ್ಧವಾಗಿದೆ

ಪುಲ್ವಾಮಾ ಹವಾಮಾನ

ಉತ್ತಮ ಸಮಯ ಪುಲ್ವಾಮಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪುಲ್ವಾಮಾ

  • ರಸ್ತೆಯ ಮೂಲಕ
    ಶ್ರೀನಗರದಿಂದ ಪುಲ್ವಾಮಾಗೆ ಬಸ್‌ಗಳು ಲಭ್ಯವಿದೆ. ಪ್ರವಾಸಿಗರು ಸಮೀಪದ ನಗರಗಳಾದ ಜಮ್ಮು, ಚಂಡೀಗಢ, ಲೇಹ್‌, ಪಹಲ್ಗಾಮ್‌, ದೆಹಲಿಯಿಂದ ಬಸ್ ಮೂಲಕ ಪುಲ್ವಾಮಾಗೆ ಪ್ರಯಾಣಿಸಬಹುದು. ಜಮ್ಮು ಕಾಶ್ಮೀರದ ಸರ್ಕಾರಿ ಸಾರಿಗೆ ಬಸ್‌ಗಳನ್ನು ಪಡೆದು ಶ್ರೀನಗರದಿಂದ ಕೈಗೆಟಕುವ ಬೆಲೆಯಲ್ಲಿ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜಮ್ಮು ತಾವಿ ರೈಲ್ವೆ ನಿಲ್ದಾಣವು ಪುಲ್ವಾಮಾಗೆ ಸಮೀಪದ ರೈಲು ನಿಲ್ದಾಣ. ನಗರದಿಂದ ಸುಮಾರು 340 ಕಿ.ಮೀ ದೂರದಲ್ಲಿ ಈ ರೈಲ್ವೆ ನಿಲ್ದಾಣವಿದೆ. ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ದಹಲಿ, ತ್ರಿವೇಂಡ್ರಮ್‌ ಮತ್ತು ಚೆನ್ನೈಗಳಿಂದ ಇಲ್ಲಿಗೆ ನೇರ ಸಂಪರ್ಕವಿದೆ. ಜಮ್ಮು ರೈಲು ನಿಲ್ದಾಣದಿಂದ ಪುಲ್ವಾಮಾಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದು ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶ್ರೀನಗರ ವಿಮಾನ ನಿಲ್ದಾಣವನ್ನು ಶೇಖ್‌ ಉಲ್‌ ಅಲಮ್‌ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ. ಇದು ಪುಲ್ವಾಮಾಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ. ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚಂಡೀಗಢ ಮತ್ತು ಶಿಮ್ಲಾಗೆ ಇಲ್ಲಿಂದ ನೇರ ಸಂಪರ್ಕವಿದೆ. ಇಲ್ಲಿಂದ ಪ್ರವಾಸಿಗರು ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆದು ಪುಲ್ವಾಮಾಗೆ ಪ್ರಯಾಣಿಸಬಹುದು. ಶ್ರೀನಗರದಿಂದ 876 ಕಿ.ಮೀ ದೂರದಲ್ಲಿರುವ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪುಲ್ವಾಮಾಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat