Search
  • Follow NativePlanet
Share
ಮುಖಪುಟ » ಸ್ಥಳಗಳು» ಪುಲಿಕಾಟ್

ಸರೋವರ ಮತ್ತು ಇತಿಹಾಸಗಳ ಪುಲಿಕಾಟ್

10

ಕೋರಮಂಡಲ ತೀರದಲ್ಲಿರುವ ತಮಿಳುನಾಡಿನ ಈ ಪ್ರದೇಶ ಬಹಳ ಉತ್ತಮವಾದ ಪ್ರಕೃತಿ ಸೊಬಗನ್ನು ಹೊಂದಿರುವ ಸ್ಥಳವಾಗಿದೆ. ಹದಿನೇಳನೆಯ ಶತಮಾನದಲ್ಲಿ ಡಚ್ಚರ ಆಳ್ವಿಕೆಗೆ ಒಳಪಟ್ಟಿದ್ದ ಈ ಸ್ಥಳವು, ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ವಿವಿಧತೆಯನ್ನು ಹೊಂದಿರುವ ಸ್ಥಳವಾಗಿದೆ. ಆದರೆ ಇಲ್ಲಿನ ಇತಿಹಾಸವು ಡಚ್ಚರ ಅವಧಿಗಷ್ಟೇ ಸಿಮಿತವಾಗುವುದಿಲ್ಲ. ಪೋರ್ಚುಗೀಸರು ಮತ್ತು ಬ್ರಿಟೀಷರೂ ಕೂಡ ಇಲ್ಲಿ ಬೇರೆ ಬೇರೆ ಅವಧಿಗಳಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಿದ್ದರು. ಇದು ಈ ಸ್ಥಳದ ಸಂಸ್ಕೃತಿ ಮತ್ತು ಪರಂಪರೆಗೆ ಬಹಳ ಕೊಡುಗೆ ನೀಡಿದೆ. ಬಂದರು ಮತ್ತು ವಾಣಿಜ್ಯ ಕೇಂದ್ರವಾಗಿ ಈ ಸ್ಥಳವು ಕಳೆದ ಶತಮಾನಗಳಲ್ಲಿ ತಮಿಳುನಾಡಿನ ಆರ್ಥಿಕ ಬೆಳವಣಿಗೆಗೆ ಬಹಳ ಕೊಡುಗೆ ನೀಡಿದೆ.

ಪ್ರವಾಸಿಗರ ವಲಯದಲ್ಲಿ ಪುಲಿಕಾಟ್ ಎರಡು ವಿಷಯಗಳಿಗೆ ಪ್ರಸಿದ್ಧವಾಗಿದೆ. ಅವುಗಳೆಂದರೆ ಪುಲಿಕಾಟ್ ಸರೋವರ ಮತ್ತು ಪುಲಿಕಾಟ್ ಪಕ್ಷಿಧಾಮ. ಇದು ಭಾರತದಲ್ಲಿ ಎರಡನೇಯ ಅತಿ ದೊಡ್ಡ ಉಪ್ಪುನೀರಿನ ಸರೋವರ ಎಂಬ ಹೆಗ್ಗಳಿಕೆ ಪಡೆದಿದೆ ಹಾಗು ಪ್ರತಿ ವರ್ಷ ಮಿಲಿಯಗಟ್ಟಲೆ ಜನರನ್ನು ಆಕರ್ಷಿಸುತ್ತದೆ. ಈ ಸ್ಥಳವು ಪುಲಿಕಾಟ್ ಪಕ್ಷಿಧಾಮದ ವಲಯದಲ್ಲಿ ಸೇರುತ್ತದೆ ಹಾಗೂ ಈ ಪಕ್ಷಿಧಾಮ ಆಯಾ ಋತುಮಾನಗಳಲ್ಲಿ ವಲಸೆ ಬರುವ ಅನೇಕ ಜಾತಿಯ ಪಕ್ಷಿಗಳಿಗೆ ವಸತಿನೆಲೆಯಾಗಿದೆ. ಇಲ್ಲಿಗೆ ಬರುವ ಅಸಂಖ್ಯಾತ ತಳಿಯ ಪಕ್ಷಿಗಳಿಂದಾಗಿ ಇಲ್ಲಿ ಪಕ್ಷಿ ವೀಕ್ಷಣೆ ಒಂದು ಆಕರ್ಷಕ ಚಟುವಟಿಕೆಯಾಗಿದೆ.  

ಇಲ್ಲಿ ಇದಲ್ಲದೆ ಇನ್ನೂ ಅನೇಕ ಆಕರ್ಷೆಣೆಗಳಿವೆ. ಅವುಗಳೆಂದರೆ ಡಚ್ ಚರ್ಚ್, ಡಚ್ ಸಿಮೆಂಟರಿ, ಲೈಟ್ ಹೌಸ್, ಚಿಂತಾಮನೀಶ್ವರ ದೇವಾಲಯ ಮತ್ತು ಪೆರಿಯಾ ಪಲ್ಲಿವಸೈ. ಡಚ್ಚರ ಪ್ರಭಾವವನ್ನು ಇಲಿನ ಚರ್ಚುಗಳ, ಹಳೆಯ ಕಟ್ಟಡಗಳ ಮತ್ತು ಸಮಾಧಿಗಳ ವಾಸ್ತುಶಿಲ್ಪದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.

ಚೆನ್ನೈನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಕಾರಣ ಇಲ್ಲಿಗೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದಾಗಿದೆ. ಉಷ್ಣವಲಯದ ಹವಾಮಾನದಲ್ಲಿರುವ ಕಾರಣ ಈ ತಾಣವನ್ನು ತೀವ್ರವಾಗಿರುವ ಬೇಸಿಗೆ ಹಾಗೂ ಜೋರಾದ ಮಳೆಗಾಲದ ಹೊರತಾಗಿ ಬೇರೆ ಯಾವುದೇ ಅವಧಿಯಲ್ಲಿ ಭೇಟಿ ನೀಡಬಹುದಾಗಿದೆ. ಪ್ರಕೃತಿ ಸಹಜ ಸೌಂದರ್ಯ, ಪಕ್ಷಿಗಳ ಕಲರವ, ಪರಂಪರಾಗತ ಕಟ್ಟಡಗಳು ಮತ್ತು ಶ್ರೀಮಂತ ಇತಿಹಾಸ ಇವೆಲ್ಲವೂ ಒಟ್ಟಾರೆಯಾಗಿ ಸೇರಿ ಪುಲಿಕಾಟ್ ಅನ್ನು ಪ್ರಕೃತಿ ಮತ್ತು ಇತಿಹಾಸ ಪ್ರಿಯರಿಗೆ ಹೇಳಿಮಾಡಿಸಿದ ಸ್ಥಳವನ್ನಾಗಿಸಿದೆ.

ಪುಲಿಕಾಟ್ ಪ್ರಸಿದ್ಧವಾಗಿದೆ

ಪುಲಿಕಾಟ್ ಹವಾಮಾನ

ಉತ್ತಮ ಸಮಯ ಪುಲಿಕಾಟ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪುಲಿಕಾಟ್

  • ರಸ್ತೆಯ ಮೂಲಕ
    ಪುಲಿಕಾಟ್ ತಲುಪಲು ಎಲ್ಲಾ ಮಾದರಿಯ ಸಾರಿಗೆಗಳಲ್ಲಿ ಪರಿಣಾಮಕಾರಿ ಸಾರಿಗೆ ಸೌಲಭ್ಯವೆಂದರೆ ಬಸ್ ಗಳ ಮೂಲಕ ಪ್ರಯಾಣ ಮಾಡುವುದು. ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಚಾಲಿತ ಬಸ್ ಗಳು ಚೆನ್ನೈ ಗ್ರಾಮೀಣ ಬಸ್ ನಿಲ್ದಾಣದಿಂದ ಪುಲಿಕಾಟ್ ಗೆ ಲಭ್ಯವಿದೆ. ಚೆನ್ನೈ ನಗರದಿಂದ ಪುಲಿಕಾಟ್ ಪಟ್ಟಣಕ್ಕೆ ಪ್ರಯಾಣ ಅವಧಿ ಕೆಲವು ಗಂಟೆಗಳಾಗಿದ್ದು, ಟಿಕೆಟ್ ದರ ಸುಮಾರು 50 ರೂ. ಆಗಿರುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪುಲಿಕಾಟ್ ಪಟ್ಟಣಕ್ಕೆ ಸಮೀಪವಿರುವ ಪ್ರಮುಖ ರೈಲು ಮಾರ್ಗ ಚೆನ್ನೈ ನಗರದಲ್ಲಿದೆ. ಚೆನ್ನೈನಲ್ಲಿರುವ ರೈಲ್ವೇ ನಿಲ್ದಾಣವು ಭಾರತದ ಇತರೆ ಎಲ್ಲಾ ಭಾಗಗಳಿಗೆ ಸಂಚರಿಸುವ ರೈಲುಗಳನ್ನು ಹೊಂದಿದೆ. ರೈಲು ಮೂಲಕ ಬರುವ ಪ್ರಯಾಣಿಕರಿಗಾಗಿ ರೈಲ್ವೆ ನಿಲ್ದಾಣದಿಂದ ಟ್ಯಾಕ್ಸಿಗಳು ಅಥವಾ ಪುಲಿಕಾಟ್ ತಲುಪಲು ಬಸ್ ಸೌಲಭ್ಯಗಳಿವೆ. ಚೆನ್ನೈ ರೈಲ್ವೆ ನಿಲ್ದಾಣವು ತಿರುವನಂತಪುರಂ, ಬೆಂಗಳೂರು ಮತ್ತು ಹೈದರಾಬಾದ್ ಮೊದಲಾದ ದಕ್ಷಿಣ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ನಿಯಮಿತ ರೈಲುಗಳು ದೆಹಲಿ, ಕೋಲ್ಕತಾ ಮತ್ತು ಮುಂಬೈ ನಂತಹ ಇತರೆ ಪ್ರಮುಖ ಭಾರತೀಯ ನಗರಗಳಿಗೂ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪುಲಿಕಾಟ್ ಗೆ ತಲುಪಲು ಹತ್ತಿರದಲ್ಲಿರುವ ವಿಮಾನ ನಿಲ್ದಾಣವು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಇಂಟರ್ನ್ಯಾಷನಲ್ ಏರ್ಪೋರ್ಟ್) (ಪುಲಿಕಾಟ್ ಪಟ್ಟಣದಿಂದ ಸುಮಾರು 60 ಕಿ.ಮೀ ದೂರ). ಚೆನ್ನೈ ವಿಮಾನ ನಿಲ್ದಾಣ ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೊದಲಾದ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ವಿದೇಶದ ನಗರಗಳಿಗೂ ಕೂಡ ಕೆಲವು ಅಂತಾರಾಷ್ಟ್ರೀಯ ವಿಮಾನಯಾನ ಸೌಲಭ್ಯವಿದೆ. ವಿಮಾನ ನಿಲ್ದಾಣದಿಂದ ಪುಲಿಕಾಟ್ ಸಣ್ಣ ಪಟ್ಟಣವನ್ನು ತಲುಪಲು 1500 ಶುಲ್ಕದಲ್ಲಿ ಟ್ಯಾಕ್ಸಿ ಬಾಡಿಗೆಗೆ ಪಡೆಯಡಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun