Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಲಿಕಾಟ್ » ಹವಾಮಾನ

ಪುಲಿಕಾಟ್ ಹವಾಮಾನ

ಪುಲಿಕಾಟ್ ಪಟ್ಟಣದಲ್ಲಿ ಆಹ್ಲಾದಕರ ವಾತಾವರಣ ಬಹುತೇಕ ವರ್ಷದ ಎಲ್ಲಾ ಅವಧಿಯಲ್ಲೂ ಇರುತ್ತದೆ. ತೀವ್ರ ಬೇಸಿಗೆ(ಮೇ) ಮತ್ತು ನಿಲ್ಲದ ಮಳೆ ಅತ್ಯುತ್ತಮವೆನಿಸಿದರೂ ಸ್ಥಳದ ಭೇಟಿಗೆ ಅನಾನುಕೂಲಕರ. ನವೆಂಬರ್ ತಿಂಗಳಿನಿಂದ ಫೆಬ್ರವರಿ ಆರಂಭಿಕ ಅವಧಿ ಅಭಯಾರಣ್ಯ ಭೇಟಿಯಾಗಲಿ ಮತ್ತು ಹಕ್ಕಿಗಳ ವೀಕ್ಷಣೆಯಲ್ಲಾಗಲಿ ಪ್ರವಾಸಿಗರು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಆದರ್ಶ ಸಮಯವಾಗಿದೆ. ಫ್ಲೆಮಿಂಗೊ ಉತ್ಸವದ ಒಂದು ಮಿನುಗನ್ನು ಪಡೆಯಲು ಬಯಸುವವರಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳು ಪ್ರಶಸ್ತವಾದ ಸಮಯ.

ಬೇಸಿಗೆಗಾಲ

ಪುಲಿಕಾಟ್, ಬಹುಮಟ್ಟಿಗೆ ಉಷ್ಣವಲಯದ ಹವಾಗುಣವನ್ನು ಹೊಂದಿದ್ದು, ಬೇಸಿಗೆಯು ತೀವ್ರ ಶಾಖ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ. ಪುಲಿಕಾಟ್ ನಲ್ಲಿ ಬೇಸಿಗೆಯು ಮಾರ್ಚ್ ನಿಂದ ಪ್ರಾರಂಭವಾಗುತ್ತದೆ ಮತ್ತು ಮೇ ಕೊನೆಯ ತನಕ ಮುಂದುವರೆಯುತ್ತದೆ. ಈ ಅವಧಿಯಲ್ಲಿ ತಾಪಮಾನವು 40 ಡಿ.ಸೆ ನಷ್ಟು ಹೆಚ್ಚಾಗುತ್ತದೆ ಮತ್ತು ದಿನದ ಶಾಖ ರಾತ್ರಿ ಸಮಯದಲ್ಲಿ ತೀವ್ರವಾಗಿ ಇಳಿಯುತ್ತದೆ. ಮೇ ವರ್ಷದ ಅತ್ಯಂತ ಶಾಖಯುಕ್ತ ಸಮಯ ಎಂದು ಪರಿಗಣಿಸಲಾಗಿದ್ದು, ಈ ಸಮಯ ಇಲ್ಲಿನ ಸ್ಥಳಗಳ ವೀಕ್ಷಣೆಗೆ ಯೋಗ್ಯವಾಗಿಲ್ಲ.

ಮಳೆಗಾಲ

ಪುಲಿಕಾಟ್ ನೈಋತ್ಯ ಮತ್ತು ಈಶಾನ್ಯ ಎರಡೂ ಮಾನ್ಸೂನ್ ಗಳಿಂದ ಗಣನೀಯ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಇಲ್ಲಿ ಮಳೆಗಾಲವು, ಜೂನ್ ತಿಂಗಳಿನಲ್ಲಿ ಆರಂಭವಾಗಿ ಸೆಪ್ಟೆಂಬರ್ ತನಕ ಮುಂದುವರಿಯುತ್ತದೆ. ಈ ಪ್ರದೇಶದಲ್ಲಿ ಈಶಾನ್ಯ ಮಾನ್ಸೂನ್ ಚೆನ್ನಾಗಿರುವ ಕಾರಣದಿಂದ ಅಕ್ಟೋಬರ್ ತಿಂಗಳಿನಲ್ಲಿ ಗಣನೀಯ ಮಳೆ ಸುರಿಯುತ್ತದೆ. ಮಳೆಗಾಲದಲ್ಲಿ, ಈ ಪ್ರದೇಶದಲ್ಲಿ ಬೇಸಿಗೆಯಿಂದ ಉಂಟಾದ ಅಸಹನೀಯ ಶಾಖದಿಂದ ಆಹ್ಲಾದಕರ ಪರಿಹಾರ ಸಿಗುತ್ತದೆ.

ಚಳಿಗಾಲ

ಚಳಿಗಾಲವು ಹಿತಕರವಾಗಿರುತ್ತದೆ ಮತ್ತು ಪುಲಿಕಾಟ್ ಪಟ್ಟಣಕ್ಕೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಚಳಿಗಾಲದ ಚಳಿ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಿ ಫೆಬ್ರವರಿ ಅಂತ್ಯದವರೆಗೂ ಮುಂದುವರೆಯುತ್ತದೆ. ಚಳಿಗಾಲದ ಆಹ್ಲಾದಿಸಬಹುದಾದ ಹವಾಮಾನ ಪಟ್ಟಣಕ್ಕೆ ಭೇಟಿ ನೀಡಲು ಉತ್ತಮ ಸಮಯ ಎನಿಸಿಕೊಂಡಿದೆ.