Search
 • Follow NativePlanet
Share
ಮುಖಪುಟ » ಸ್ಥಳಗಳು» ಪೋರ್ಟ್ ಬ್ಲೇರ್

ಪೋರ್ಟ್ ಬ್ಲೇರ್ : ಅಂಡಮಾನಿನ ರಾಜಧಾನಿ ನಗರ

28

ಪೋರ್ಟ್ ಬ್ಲೇರ್ ಈ ದ್ವೀಪ ಸಮೂಹಗಳ ರಾಜಧಾನಿ ನಗರ. ಇದು ಈ ದ್ವೀಪ ಸಮೂಹಗಳಲ್ಲಿಯೇ ಅತ್ಯಂತ ದೊಡ್ಡ ದ್ವೀಪವಾದ ದಕ್ಷಿಣ ಅಂಡಮಾನ್ ದ್ವೀಪದಲ್ಲಿದೆ. ದ್ವೀಪದ ದಕ್ಷಿಣದಲ್ಲಿರುವ ಕಾರಣ ಹಿತಕರವಾದ ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಮಳೆಗಾಲದಲ್ಲಿ ಬೀಳುವ ಮಳೆ ಇದನ್ನು ಅತ್ಯುತ್ತಮ ರಜಾಕಾಲ ಕಳೆಯುವ ಸ್ಥಳವನ್ನಾಗಿಸಿದೆ. ಇದು ಭಾರತೀಯ ಮತ್ತು ವಿದೇಶಿ ಪ್ರವಾಸಿಗರಿಬ್ಬರಲ್ಲೂ ಅತ್ಯಂತ ಪ್ರಸಿದ್ಧ ತಾಣವಾಗಿದೆ. ಅದರಲ್ಲೂ ಇಲ್ಲಿ ವಿದೇಶಿಯರಿಗೆ ಮೀಸಲಾಗಿರಿಸಿರುವ ಕೆಲವು ಪ್ರದೇಶಗಳು ವಿದೇಶಿಯರನ್ನು ಮತ್ತಷ್ಟು ಆಕರ್ಷಿಸುತ್ತದೆ.

ಒಂದು ನಗರವಾಗಿ ಪೋರ್ಟ್ ಬ್ಲೇರ್ ಹಲವಾರು ಕಾರಣಗಳಿಗೆ ಪ್ರಮುಖವಾಗಿದೆ. ಇದು ಭಾರತದ ಟ್ರೈ ಸರ್ವೀಸ್ ಕಮಾಂಡ್ ನ ಕೇಂದ್ರ ಕಾರ್ಯಾಲಯವೂ ಆಗಿದೆ. ಅಂದರೆ ನೀವು ಊಹಿಸಿರುವಂತೆ ಇಲ್ಲಿ ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೈನ್ಯದ ಸೇನೆಗಳಿವೆ. ಇದು ಕೆಲವು ಮೋಜಿನ ಆಟಗಳಿರುವ ಕಡಲ ತೀರಗಳು ಮತ್ತು ರಜಾ ದಿನಗಳನ್ನು ಕಳೆಯುವ ತಾಣಗಳನ್ನೂ ಹೊಂದಿದ್ದು ಆಕರ್ಷಣೆಯ ಕೇಂದ್ರವಾಗಿದೆ. ಹಾಗೂ ಇದು ಕುಖ್ಯಾತ 'ಕಾಲಾಪಾನಿ' (ಕಪ್ಪು ನೀರಿನ ಜೈಲು)ಗೆ ಪ್ರಸಿದ್ಧವಾಗಿದೆ. ಇದು ಭಾರತದ ಜೈಲುಗಳಲ್ಲೇ 1800 ರಿಂದಲೂ ಪ್ರಸಿದ್ಧವಾಗಿದೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಭಾರತೀಯ ಹೋರಾಟಗಾರರನ್ನು ಬಂಧಿಸಿಡಲು ಬ್ರಿಟೀಷರು 1800 ರ ಕೊನೆಯಲ್ಲಿ ಕಟ್ಟಿದ ಜೈಲು ಇದಾಗಿದೆ. ಇದು ಅಷ್ಟೊಂದು ಕುಖ್ಯಾತವಾಗಲು ಕಾರಣ ಸಹಿಸಲಾಗದ ರೀತಿಯಲ್ಲಿ ಬ್ರಿಟೀಷರು ಅನುಸರಿಸಿದ ಕೆಲವು ಶಿಕ್ಷೆ ನೀಡುವ ತಂತ್ರಗಳು!

ನೀವು ಇಲ್ಲಿರುವಾಗ ನೀರಿನ ಚಟುವಟಿಕೆಗಳ ಆಗರವಾದ ರಾಷ್ಟ್ರೀಯ ಸಾಗರ ಉದ್ಯಾನವನ್ನು ನೋಡಲೇಬೇಕು. ಈ ಉದ್ಯಾನಕ್ಕೆ ಭೇಟಿ ನೀಡುವುದು ಎಂದರೆ ಸುಮಾರು 150 ದ್ವೀಪಗಳಿಗೆ ಭೇಟಿ ನೀಡಿದಂತೆ. ನಿಮ್ಮಲ್ಲಿರುವ ಸಮುದ್ರ ಜೀವಿಗಳ ಆಸಕ್ತಿಯ ಮೇಲೆ ಅವಲಂಬಿತವಾಗಿ ನಿಮ್ಮ ಪ್ರವಾಸ ಕೆಲವು ಘಂಟೆಗಳಿಂದ ಕೆಲವು ದಿನಗಳ ವರೆಗೂ ವಿಸ್ತರಿಸಬಹುದು.

ಸೆಲ್ಯುಲಾರ್ ಜೈಲಿಗೆ ಸಮೀಪದಲ್ಲಿರುವ ಅಂಡಮಾನ್ ನೀರಿನಾಟಗಳ ಸಮೂಹ ಪಾರಾಸೈಲಿಂಗ್, ವಾಟರ್ ಸ್ಕೂಟರ್, ಪೆಡಲ್ ಬೋಟ್ಸ್ ಮತ್ತು ಕಯೇಕಿಂಗ್ ನಂತಹ ಹಲವು ರಂಜನೀಯ ವಾಟರ್ ಸ್ಪೋರ್ಟ್ ಗಳನ್ನು ಹೊಂದಿದೆ. ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿಯೂ ಅಂಡಮಾನ್ ನಲ್ಲಿನ ನೀರಿನ ಆಟಗಳು ನಿಮ್ಮನ್ನು ಪ್ರಕೃತಿಯ ಮತ್ತಷ್ಟು ಸಮೀಪಕ್ಕೆ ಕರೆದೊಯ್ಯುತ್ತದೆ. ಇದರ ಜೊತೆಗೆ ಇಲ್ಲಿನ ಹವಾಮಾನ ಈ ಖುಷಿಯನ್ನು ದುಪ್ಪಟ್ಟುಗೊಳಿಸುತ್ತದೆ.

ಪೋರ್ಟ್ ಬ್ಲೇರ್ ಅನ್ನು ಪ್ರವಾಸಿಗರು ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಭಾರತದ ಕೊಲ್ಕತ್ತಾ, ಭುವನೇಶ್ವರ್ ಮತ್ತು ಚೆನ್ನೈನಿಂದ ತಲುಪುವುದು ಒಂದು ಮರೆಯಲಾಗದ ಅನುಭವವೇ ಸರಿ. ಇದರ ಜೊತೆಗೆ ಭಾರತದ ನೌಕಾಯಾನ ನಿಗಮ ಹಲವಾರು ನಗರಗಳಿಂದ ಹಡಗು ಸೌಕರ್ಯಗಳನ್ನೂ ಕಲ್ಪಿಸಿದೆ.

ಪೋರ್ಟ್ ಬ್ಲೇರ್ ಪ್ರಸಿದ್ಧವಾಗಿದೆ

ಪೋರ್ಟ್ ಬ್ಲೇರ್ ಹವಾಮಾನ

ಪೋರ್ಟ್ ಬ್ಲೇರ್
30oC / 85oF
 • Cloudy
 • Wind: WSW 22 km/h

ಉತ್ತಮ ಸಮಯ ಪೋರ್ಟ್ ಬ್ಲೇರ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪೋರ್ಟ್ ಬ್ಲೇರ್

 • ರಸ್ತೆಯ ಮೂಲಕ
  ಅಂಡಮಾನ್ ಮತ್ತು ನಿಕೋಬಾರ್ ಅನ್ನು ತಲುಪಲು ಯಾವುದೆ ರಸ್ತೆ ಮಾರ್ಗಗಳಿಲ್ಲ. ಆದರೆ, ಇದನ್ನು ತಲುಪಿದಾಗ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಹರಿಸಲು ಉತ್ತಮ ಸೌಲಭ್ಯಗಳಿವೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  There is no railway station available in ಪೋರ್ಟ್ ಬ್ಲೇರ್
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಭಾರತದ ಎಲ್ಲಾ ಪ್ರಮುಖ ವಿಮಾನಯಾನ ಕಂಪನಿಗಳು ಪೋರ್ಟ್ ಬ್ಲೇರ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣಕ್ಕೆ ಭಾರತದ ಕೊಲ್ಕತ್ತಾ, ಭುವನೇಶ್ವರ ಮತ್ತು ಚೆನ್ನೈ ನಿಂದ ನಿಯಮಿತವಾದ ವಿಮಾನ ಸೌಲಭ್ಯವನ್ನು ಹೊಂದಿವೆ. ಮುಂಬಯಿಯಿಂದ ನೇರವಾಗಿ ವಿಮಾನ ಸಂಪರ್ಕ ಸಾಧಿಸುವ ಪ್ರಸ್ತಾಪವಿದ್ದು ಸದ್ಯದಲ್ಲೇ ಪೂರ್ತಿಗೊಳ್ಳಲಿದೆ. ಚೆನ್ನೈನಿಂದ ಪೋರ್ಟ್ ಬ್ಲೇರ್ ಸುಮಾರು ಎರಡುವರೆ ಗಂಟೆಯ ಪ್ರಯಾಣವಾಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
14 Aug,Fri
Return On
15 Aug,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Aug,Fri
Check Out
15 Aug,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Aug,Fri
Return On
15 Aug,Sat
 • Today
  Port Blair
  30 OC
  85 OF
  UV Index: 6
  Cloudy
 • Tomorrow
  Port Blair
  28 OC
  83 OF
  UV Index: 6
  Moderate or heavy rain shower
 • Day After
  Port Blair
  28 OC
  83 OF
  UV Index: 6
  Patchy rain possible