ನವೆಂಬರ್ ನಿಂದದ ಏಪ್ರಿಲ್ ವರೆಗಿನ ಅವಧಿ ಪಿಲಿಭಿಟ್ ಭೇಟಿಗೆ ಸೂಕ್ತ ಸಮಯ. ಹುಲಿ ಮೀಸಲು ಪ್ರದೇಶ ಮತ್ತು ಧಾರ್ಮಿಕ ಸ್ಥಳಗಳು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಪಿಲಿಭಿಟ್ ನಲ್ಲಿ 45 ಡಿ.ಸೆ ಗಳಷ್ಟು ದಾಖಲಾಗುವ, ಮಾರ್ಚ್ ನಿಂದ ಮೇ ತಿಂಗಳ ಅವಧಿ, ಈ ಪಟ್ಟಣದಲ್ಲಿನ ಬೇಸಿಗೆ ಕಾಲ. ಈ ಅವಧಿಯಲ್ಲಿ ಬಿಸಿ ಗಾಳಿ ಜೊತೆಗೂಡಿರುತ್ತದೆ.
ಜುಲೈನಿಂದ ಸೆಪ್ಟೆಂಬರ್ ವರೆಗಿನ ಅವಧಿ ಪಿಲಿಭಿಟ್ ನಗರದಲ್ಲಿ ಮಳೆಗಾಲ. ಪಟ್ಟಣ ಈ ಸಮಯದಲ್ಲಿ ಭಾರೀ ಮಳೆಯನ್ನು ಅನುಭವಿಸುತ್ತದೆ. ಈ ಅವಧಿಯಲ್ಲಿ ಹವಾಮಾನ ತೇವ ಮತ್ತು ಆರ್ದ್ರತೆಯಿಂದ ಕೂಡಿರುತ್ತದೆ.
ಪಿಲಿಭಿಟ್ ನಗರದಲ್ಲಿ, ಡಿಸೆಂಬರ್ ನಿಂದ ಫೆಬ್ರವರಿ ತಿಂಗಳಿನವೆರೆಗೆ ಚಳಿಗಾಲ. ಈ ಸಮಯದಲ್ಲಿ ಹವಾಮಾನ ಸೌಮ್ಯ ಮತ್ತು ಆಹ್ಲಾದಕರವಾಗಿರುತ್ತದೆ. ತಾಪಮಾನವು 12 ಡಿ.ಸೆನಿಂದ 25 ಡಿ.ಸೆ ದಾಖಲಾಗುತ್ತದೆ.