Search
  • Follow NativePlanet
Share
ಮುಖಪುಟ » ಸ್ಥಳಗಳು» ಪೆಲ್ಲಿಂಗ್

ಪೆಲ್ಲಿಂಗ್ - ಧಾರ್ಮಿಕ ಶ್ರದ್ಧಾಳುಗಳಿಗೆ ಮತ್ತು ವಿನೋದಪ್ರಿಯ ಪ್ರವಾಸಿಗರಿಗಾಗಿ

13

ಪೆಲ್ಲಿಂಗ್ ಪಟ್ಟಣವು ಸಮುದ್ರ ಪಾತಳಿಯಿoದ 2150 ಮೀ. ಗಳಷ್ಟು ಎತ್ತರದಲ್ಲಿದೆ.  ಈ ಪಟ್ಟಣದಲ್ಲಿರುವ ಹಿಮಾಚ್ಚಾದಿತ ಪರ್ವತಗಳು ಮತ್ತು ಇಲ್ಲಿನ ಬೆಟ್ಟಗಳ ತುದಿಯಿಂದ ಕಾಣಬಹುದಾದ ಮೈನವಿರೇಳಿಸುವ ವಿಹಂಗಮ ನೋಟ ಹಾಗೂ ಇಲ್ಲಿನ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯು ಪೆಲ್ಲಿಂಗ್ ಪಟ್ಟಣವನ್ನು, ಗ್ಯಾಂಗ್ ಟಾಕ್ ನಂತರದ, ಸಿಕ್ಕಿಂ ನ ಎರಡನೆಯ ಅತೀ ಹೆಚ್ಚು ಸಂದರ್ಷಿತ ತಾಣವನ್ನಾಗಿಸಿದೆ.

ಪೆಲ್ಲಿಂಗ್ ಪಟ್ಟಣವು ಪೂರ್ವದಲ್ಲಿ ಕಾಡುಗಳಿಂದ ತುಂಬಿದ ನೆಲವಾಗಿದ್ದು, ಇದು ಅಸಂಖ್ಯಾತ ವನ್ಯಜೀವಿಗಳ ತವರೂರಾಗಿತ್ತು.  ಆದರೆ, ಈ  ಪ್ರದೇಶವು ಪೇಮಯಂಗಸೆ (Pemayangtse) ಮತ್ತು ಸಂಗಚೊಲಿಂಗ್ (Sangacholing) ಗಳೆಂಬ ಎರಡು ಭೌದ್ಧ ಸನ್ಯಾಸಿ ಮಠಗಳ ನಡುವೆ ಇರುವ ಕಾರಣ, ನಂತರದ ದಿನಗಳಲ್ಲಿ ಈ ಪ್ರದೇಶವು ಒಂದು ಸುಸಜ್ಜಿತ ಗ್ರಾಮವಾಗಿ ಅಭಿವೃದ್ಧಿಯನ್ನು ಸಾಧಿಸಿತು.

ಪೆಲ್ಲಿಂಗ್ ಪಟ್ಟಣದಲ್ಲಿ ಹಾಗೂ ಅದರ ಸುತ್ತಮುತ್ತಲೂ ಇರುವ ಪ್ರವಾಸೀ ತಾಣಗಳು

ಪೆಲ್ಲಿಂಗ್ ಪಟ್ಟಣದ ಎರಡು ಪ್ರಮುಖ ಆಕರ್ಷಣೆಗಳೆಂದರೆ, ಇಲ್ಲಿರುವ ಪೇಮಯಂಗಸೆ ಮತ್ತು ಸಂಗಚೊಲಿಂಗ್ ಗಳೆಂಬ ಎರಡು ಭೌದ್ಧ ಸನ್ಯಾಸಿಮಠಗಳು.  ಇಲ್ಲಿನ ಇತರ ಪ್ರವಾಸೀ ಆಕರ್ಷಣೆಗಳು ಸಿಂಗ್ ಶೋರ್ ಸೇತುವೆ, ಛಂಗೆ ಜಲಪಾತ ಮತ್ತು ಖೆಚುಪೆರಿ ಸರೋವರ.

ಸಂಸ್ಕೃತಿ

ಪೆಲ್ಲಿಂಗ್ ಪಟ್ಟಣದ ಅತೀ ಪ್ರಬಲ ಬುಡಕಟ್ಟು ಜನಾಂಗವೆಂದರೆ, ಅದು ಲಿಂಬು ಪಂಗಡವಾಗಿದೆ.  ಇವರನ್ನು ಹೊರತುಪಡಿಸಿ ಇಲ್ಲಿರುವ ಇತರ ಉಪಜಾತಿಗಳೆಂದರೆ  ಖಮ್ಧಕ್, ಮುರಿಂಗ್ಲಾ, ತಮ್ಲಿಂಗ್, ಲಿಂಗ್ಡೆನ್ ಮತ್ತು ಪೆಘಾ.  ಇಲ್ಲಿನ ಜನರು ಧನಾರ್ಜನೆಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.  ಇಲ್ಲಿ ಬೆಳೆಯುವ ಬೆಳೆಗಳ ಪೈಕಿ ಏಲಕ್ಕಿ, ಮುಸುಕಿನ ಜೋಳ, ಭತ್ತ, ಗೋಧಿ, ಮತ್ತು  ಬಕ್ ವ್ಹೀಟ್ ಗಳು ಸೇರಿವೆ.

ಹಬ್ಬಗಳು ಮತ್ತು ಆಚರಣೆಗಳು

ವರ್ಷಕ್ಕೆ ಒಮ್ಮೆ ಆಚರಿಸಲ್ಪಡುವ ಕಂಚನ್ ಜಂಗಾ ಹಬ್ಬದ ಸಂದರ್ಭದಲ್ಲಿ ಇಡೀ ಪೆಲ್ಲಿಂಗ್ ಪಟ್ಟಣವೇ ಹಬ್ಬದ ಸಂಭ್ರಮಾಚರಣೆಯ ಗುಂಗಿನಲ್ಲಿರುತ್ತದೆ.  ಈ ಹಬ್ಬವು;  ರಂಗೀತ್ ನಲ್ಲಿ ಬಿಳಿನೀರಿನ ಮೇಲಿನ ವಿಹಾರ (rafting), ಏಕವ್ಯಕ್ತಿ ದೋಣಿ ವಿಹಾರ (kayaking), ಉತ್ತೇಜಿತ ಏಕವ್ಯಕ್ತಿ ದೋಣಿ ವಿಹಾರ (promotional kayaking) ಪರ್ವತದ ಮೇಲಿನ ಬೈಕ್ ಸಾಹಸ ಮತ್ತು ಇತರ ಸಾಹಸ ಚಟುವಟಿಕೆಗಳಾದ ಪರ್ವತದ ಮೇಲಿನ ಬೈಕ್ ಸವಾರಿ ಮತ್ತು ಸಾಂಪ್ರದಾಯಿಕ ಕ್ರೀಡೆಗಳು ಇವೇ ಮೊದಲಾದ ಅನೇಕ ಮನರಂಜನಾ ಚಟುವಟಿಕೆಗಳನ್ನು ಒದಗಿಸುತ್ತದೆ.

ಈ ಹಬ್ಬವು ಹೂಗಳ ಪ್ರದರ್ಶನ, ತಿನಿಸುಗಳು ಮತ್ತು ಉಡುಗೆತೊಡುಗೆಗಳ ಮಾರಾಟ ಮಳಿಗೆಗಳನ್ನೂ ಸಹ ಆಯೋಜಿಸುತ್ತದೆ.

ಪೆಲ್ಲಿಂಗ್ ಹವಾಮಾನ

ಪೆಲ್ಲಿಂಗ್ ನ ಹವಾಮಾನವು ಸಾಮಾನ್ಯವಾಗಿ ವರ್ಷವಿಡೀ ಅಪ್ಯಾಯಮಾನವಾಗಿರುತ್ತದೆ.  ಇಂತಹ ಒಂದು ಹವಾಮಾನ ಪರಿಸ್ಥಿತಿಯು, ಪೆಲ್ಲಿಂಗ್ ಪಟ್ಟಣವನ್ನು ವರ್ಷದ ಯಾವ ಕಾಲದಲ್ಲಿಯಾದರೂ ಕೂಡ ಸoದರ್ಶನ ಯೋಗ್ಯವನ್ನಾಗಿಸುತ್ತದೆ.

ಪೆಲ್ಲಿಂಗ್ ಗೆ ಭೇಟಿ ನೀಡಲು ಪ್ರಶಸ್ತ ಕಾಲ

ಕಂಚನ್ ಜಂಗಾ ಹಬ್ಬದ ಅವಧಿಯು ಪೆಲ್ಲಿಂಗ್ ಗೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ.  ಈ ಹಬ್ಬವು ಆಗಸ್ಟ್ ತಿಂಗಳ ಅವಧಿಯಲ್ಲಿ, ಟಿಬೆಟಿಯನ್ ಕ್ಯಾಲೆಂಡರ್ ನ ಪ್ರಕಾರ ಏಳನೆಯ ತಿಂಗಳಿನ 15 ನೆಯ ದಿನದಂದು ಆಚರಿಸಲ್ಪಡುತ್ತದೆ.

ಪೆಲ್ಲಿಂಗ್ ಗೆ ತಲುಪುವುದು ಹೇಗೆ ?

ಪೆಲ್ಲಿಂಗ್ ಪಟ್ಟಣವು ಭಾರತದ ಇತರ ಪ್ರಮುಖ ಪಟ್ಟಣಗಳೊಡನೆ ವಿಮಾನ ಮತ್ತು ರೈಲುಗಳ ಮೂಲಕ ಉತ್ತಮವಾಗಿ ಸoಪರ್ಕಿಸಲ್ಪಟ್ಟಿದೆ.

ಪೆಲ್ಲಿಂಗ್ ಪ್ರಸಿದ್ಧವಾಗಿದೆ

ಪೆಲ್ಲಿಂಗ್ ಹವಾಮಾನ

ಉತ್ತಮ ಸಮಯ ಪೆಲ್ಲಿಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪೆಲ್ಲಿಂಗ್

  • ರಸ್ತೆಯ ಮೂಲಕ
    There is no route available in ಪೆಲ್ಲಿಂಗ್
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪೆಲ್ಲಿಂಗ್ ಗೆ ಅತೀ ಸಮೀಪದ ರೈಲು ನಿಲ್ದಾಣವು ಜಲ್ಪೈಗುರಿಯಲ್ಲಿದೆ. ಈ ರೈಲು ನಿಲ್ದಾಣವು ಚೆನ್ನೈ, ದೆಹಲಿ, ಹೌರಾ, ಅಲಿಪುರ್, ಮತ್ತು ದಾರ್ಜೀಲಿಂಗ್ ಗಳನ್ನೂ ಒಳಗೊಂಡಂತೆ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪೆಲ್ಲಿಂಗ್ ನ ಅತೀ ಸಮೀಪದ ವಿಮಾನ ನಿಲ್ದಾಣವು ಬಗ್ಡೋಗ್ರಾದಲ್ಲಿದ್ದು, ಇದು ಸುಮಾರು 124 ಕಿ.ಮೀ. ದೂರದಲ್ಲಿದೆ. ಈ ವಿಮಾನ ನಿಲ್ದಾಣಕ್ಕೆ ಚೆನ್ನೈ, ಕೊಲ್ಕತ್ತಾ, ಗುವಾಹಾಟಿ ಮತ್ತು ಮುಂಬೈ ಗಳಿಂದ ವಿಮಾನಗಳು ಲಭ್ಯವಿವೆ. ಈ ವಿಮಾನನಿಲ್ದಾಣಕ್ಕೆ ಬ್ಯಾಂಗ್ ಕಾಕ್ ಮತ್ತು ಪಾರೊ ಗಳಿಂದ ಅಂತರರಾಷ್ಟ್ರೀಯ ವಿಮಾನಗಳು ಕೂಡ ಲಭ್ಯವಿವೆ. ವಿಮಾನ ನಿಲ್ದಾಣದಿಂದ ಪೆಲ್ಲಿಂಗ್ ಗೆ ಟ್ಯಾಕ್ಸಿ ಯ ಮೂಲಕ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat