Search
  • Follow NativePlanet
Share
ಮುಖಪುಟ » ಸ್ಥಳಗಳು » ಪೆಲ್ಲಿಂಗ್ » ಹವಾಮಾನ

ಪೆಲ್ಲಿಂಗ್ ಹವಾಮಾನ

ಕಂಚನ್ ಜಂಗಾ ಹಬ್ಬದ ಅವಧಿಯು ಪೆಲ್ಲಿಂಗ್ ಗೆ ಭೇಟಿ ನೀಡಲು ಅತಿ ಸೂಕ್ತ ಕಾಲವಾಗಿದೆ.  ಈ ಹಬ್ಬವು ಆಗಸ್ಟ್ ತಿಂಗಳ ಅವಧಿಯಲ್ಲಿ, ಟಿಬೆಟಿಯನ್ ಕ್ಯಾಲೆಂಡರ್ ನ ಪ್ರಕಾರ ಏಳನೆಯ ತಿಂಗಳಿನ 15 ನೆಯ ದಿನದಂದು ಆಚರಿಸಲ್ಪಡುತ್ತದೆ.

ಬೇಸಿಗೆಗಾಲ

ಪೆಲ್ಲಿಂಗ್ ನಲ್ಲಿ ಬೇಸಿಗೆಯ ಅವಧಿಯು ಮಾರ್ಚ್ ತಿಂಗಳಿನಿಂದ ಮೇ ತಿಂಗಳಿನವರೆಗಿನ ಅವಧಿಯದ್ದಾಗಿರುತ್ತದೆ.  ಈ ಅವಧಿಯಲ್ಲಿ ಉಷ್ಣತೆಯು ಸಾಮಾನ್ಯವಾಗಿ 10 ಡಿಗ್ರಿ ಸೆಲ್ಷಿಯಸ್ ನಿಂದ 28 ಡಿಗ್ರಿ ಸೆಲ್ಷಿಯಸ್ ನವರೆಗೆ ವ್ಯತ್ಯಯಗೊಳ್ಳುತ್ತದೆ. ಮೇ ತಿಂಗಳಿನ ಅವಧಿಯಲ್ಲಿ ಉಷ್ಣತೆಯು ಅತ್ಯಧಿಕವಾಗಿರುತ್ತದೆ.  ಬೇಸಿಗೆಗಳು ಇಲ್ಲಿ ಹದವಾಗಿರುವುದರಿಂದ ಇಲ್ಲಿಗೆ ಬೇಸಿಗೆಯಲ್ಲಿ ಭೇಟಿ ನೀಡುವುದಾದರೆ, ಚಳಿಗಾಲದ ಬಟ್ಟೆಗಳನ್ನು ಕೊಂಡೊಯ್ಯುವಂತೆ ಶಿಪಾರಸು ಮಾಡಲಾಗಿದೆ.

ಮಳೆಗಾಲ

ನೈಋತ್ಯ ಮಾರುತಗಳು ಪೆಲ್ಲಿಂಗ್ ಗೆ ಮಳೆಯನ್ನು ತರುತ್ತವೆ ಮತ್ತು ಈ ಅವಧಿಯು ಜೂನ್ ತಿಂಗಳಿನಿಂದ ಆರಂಭವಾಗುತ್ತದೆ.  ಜೂನ್ ತಿಂಗಳಿನ ನಂತರ ಮಳೆಯ ಪ್ರಮಾಣವು ತಗ್ಗುತ್ತದೆ ಹಾಗೂ ಅಕ್ಟೋಬರ್ ತಿಂಗಳು ಪ್ರವಾಸೀ ದಿನಗಳ ಆರಂಭವನ್ನು ಸೂಚಿಸುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗಿನ ಅವಧಿಯು ಇಲ್ಲಿ ಚಳಿಗಾಲದ ಅವಧಿಯಾಗಿರುತ್ತದೆ.  ಈ ಅವಧಿಯಲ್ಲಿ ಮೂಳೆಯನ್ನೂ ಹೆಪ್ಪುಗಟ್ಟಿಸುವ ಚಳಿಯು ಇಲ್ಲಿ ಮಡುಗಟ್ಟುತ್ತದೆ ಮತ್ತು ಉಷ್ಣಾಂಶವು -5 ಡಿಗ್ರಿ ಸೆಲ್ಷಿಯಸ್ ಮಟ್ಟಕ್ಕೆ ಕುಸಿಯುತ್ತದೆ ಆದರೆ ಗರಿಷ್ಟ ತಾಪಮಾನವು ಎಂದಿಗೂ 16 ಡಿಗ್ರಿ ಸೆಲ್ಷಿಯಸ್ ಅನ್ನು ದಾಟುವುದಿಲ್ಲ.  ಹೀಗಾಗಿ, ಪೆಲ್ಲಿಂಗ್ ಗೆ ಭೇಟಿ ಕೊಡಲು ಚಳಿಗಾಲವು ಉತ್ತಮ ಕಾಲಾವಧಿಯಾಗಿದೆ.