Search
  • Follow NativePlanet
Share
ಮುಖಪುಟ » ಸ್ಥಳಗಳು » ಪೀರ್ಮೆಡೆ » ಹವಾಮಾನ

ಪೀರ್ಮೆಡೆ ಹವಾಮಾನ

ಪೀರ್ಮೆಡೆಯಲ್ಲಿ ವರ್ಷಂಪ್ರತಿ ಉತ್ತಮ ವಾತಾವರಣ ಇರುತ್ತದೆ. ಪ್ರವಾಸಿಗರು ಈ ಪರ್ವತ ಪ್ರದೇಶದಲ್ಲಿ ಬೇಸಿಗೆಕಾಲವನ್ನು ಆಹ್ಲಾದಕರವಾಗಿ ಕಳೆಯಬಹುದು. ಪೀರ್ಮೆಡೆಗೆ ಭೇಟಿ ನೀಡಬಹುದಾದ ಇನ್ನೊಂದು ಅವಧಿಯೆಂದರೆ ಮಳೆಗಾಲ. ಇಲ್ಲಿ ದಟ್ಟ ಹಸಿರು ಇಡೀ ವಾತಾವರಣವನ್ನು ತುಂಬಿರುತ್ತದೆ. ಜೂನ್ ಮತ್ತು ಜುಲೈ ತಿಂಗಳು ಪೀರ್ಮೆಡೆಯಲ್ಲಿ ಮಳೆಗಾಲ ಅತ್ಯಂತ ರೌದ್ರವಾಗಿರುವುದರಿಂದ ಪ್ರವಾಸ ಸೂಕ್ತವಲ್ಲ.

ಬೇಸಿಗೆಗಾಲ

ಮಾರ್ಚ್ನಲ್ಲಿ ಆರಂಭವಾಗುವ ಬೇಸಿಗೆಕಾಲವು ಮೇ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿನ ಗರಿಷ್ಟ ತಾಪಮಾನ 29 ಡಿಗ್ರಿ ಸೆಲ್ಷಿಯಸ್ ಮತ್ತು ಕನಿಷ್ಟ ತಾಪಮಾನವು 22 ಡಿಗ್ರಿ ಇರುತ್ತದೆ. ಪೀರ್ಮೆಡೆಯು ಪರ್ವತ ಪ್ರದೇಶವಾಗಿದ್ದರಿಂದ ಅತಿಯಾದ ಉಷ್ಣತೆಯನ್ನು ಹೊಂದಿರುವುದಿಲ್ಲ. ಬೇಸಿಗೆಯ ಉಷ್ಣತೆಯಿಂದ ಮುಕ್ತಿ ಬೇಕಾದರೆ ಪೀರ್ಮೆಡೆಗೆ ಒಮ್ಮೆ ಭೇಟಿ ಕೊಡಿ.

ಮಳೆಗಾಲ

ಪೀರ್ಮೆಡೆಯಲ್ಲಿನ ಮಳೆಗಾಲವು ನಿರಂತರ ಮಳೆ ಮತ್ತು ಗಾಳಿಯಿಂದ ಕೂಡಿರುತ್ತದೆ. ಜೂನ್ನಲ್ಲಿ ಆರಂಭವಾಗುವ ಮಳೆ ಅಂತ್ಯವಾಗುವುದು ಸಪ್ಟೆಂಬರಿನಲ್ಲಿ. ಮಳೆಗಾಲದಲ್ಲಿ ಪರ್ವತದ ನೋಟ ಅದ್ಭುತ. ಆದರೆ ಅತಿಯಾದ ಮಳೆಯಿಂದಾಗಿ ಪ್ರವಾಸಿಗರು ಈ ಅವಧಿಯಲ್ಲಿ ಭೇಟಿ ಕೊಡುವುದು ಸೂಕ್ತವಲ್ಲ.

ಚಳಿಗಾಲ

ನವೆಂಬರಿನಲ್ಲಿ ಚಳಿಗಾಲವು ಪೀರ್ಮೆಡೆಯಲ್ಲಿ ಆರಂಭವಾಗುತ್ತದೆ. ಹಗಲು ಹೊತ್ತಿನಲ್ಲಿ ಇಲ್ಲಿ ಕಡಿಮೆ ಚಳಿ ಇದ್ದು, ರಾತ್ರಿಯ ಹೊತ್ತಿನಲ್ಲಿ ಮಾತ್ರ ಅತ್ಯಧಿಕ ಚಳಿ ಇರುತ್ತದೆ. ಈ ಅವಧಿಯಲ್ಲಿ ತಾಪಮಾನವು 18 ಡಿಗ್ರಿಯಿಂದ 12 ಡಿಗ್ರಿಯ ತನಕ ಇರುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಸೂಕ್ತವಾದ ಬಟ್ಟೆಗಳನ್ನು ಮತ್ತು ಪುಲ್ಓವರುಗಳನ್ನು ತೆಗೆದುಕೊಂಡು ಹೋಗಲು ಶಿಫಾರಸು ಮಾಡಲಾಗಿದೆ.