Search
  • Follow NativePlanet
Share
ಮುಖಪುಟ » ಸ್ಥಳಗಳು» ಪಟಿಯಾಲಾ

ಪಟಿಯಾಲಾ ಪ್ರವಾಸೋದ್ಯಮ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆ

13

ಪಂಜಾಬ್ ರಾಜ್ಯದ ನೈರುತ್ಯ ಭಾಗದಲ್ಲಿ ಮೂರನೇಯ ಅತಿ ದೊಡ್ಡ ನಗರವಾಗಿರುವ ಪಟಿಯಾಲಾ ಪಟ್ಟಣವು ಸಮುದ್ರ ಮಟ್ಟದಿಂದ 250 ಮೀ. ಎತ್ತರದಲ್ಲಿ ನೆಲೆಸಿದೆ. ಸರ್ದಾರ್ ಲಖ್ನಾ ಮತ್ತು ಬಾಬಾ ಅಲಾ ಸಿಂಗ್‍ರಿಂದ ಸ್ಥಾಪಿತವಾದ ಈ ನಗರವು ನಂತರ ಮಹಾರಾಜ ನರೇಂದ್ರಸಿಂಗ್‍ರಿಂದ ಸುಮಾರು (1845-1862) ರ ಸಮಯದಲ್ಲಿ ಕೋಟೆಗಳಿಂದ ಸುಭದ್ರಗೊಳಿಸಲ್ಪಟ್ಟಿತು. ಈ ನಗರವು ಪಟಿಯಾಲಾ ಜಿಲ್ಲೆಯ ಆಡಳಿತಾತ್ಮಕ ರಾಜಧಾನಿಯಾಗಿದ್ದು, ಹಲವು ಸ್ಮಾರಕಗಳು ಮತ್ತು ಹತ್ತು ದ್ವಾರಗಳನ್ನು ಒಳಗೊಂಡಿದೆ.

ಅಧಿಕೃತ ಭಾಷೆಯಾದ ಪಂಜಾಬಿಯ ಜೊತೆ ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಕೂಡ ಕೆಲವು ಆಡಳಿತಾತ್ಮಕ ವಿಚಾರಗಳಲ್ಲಿ ಬಳಸಲಾಗುತ್ತದೆ. ಈ ಪಟ್ಟಣದಲ್ಲಿ ಆಚರಿಸಲಾಗುವ ಕೆಲವು ಪ್ರಮುಖ ಹಬ್ಬಗಳೆಂದರೆ, ದೀಪಾವಳಿ, ಓಕುಳಿ ಹಬ್ಬ, ದಸರಾ ಉತ್ಸವ, ಗುರ್ಪುರಬ್ ಮತ್ತು ಬೈಸಾಖಿ. ಕೇವಲ ಈ ಪಟ್ಟಣದಲ್ಲೆ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ "ಪಟಿಯಾಲಾ ಸಾಂಪ್ರದಾಯಿಕ ಉತ್ಸವ" ಅಥವಾ "ಪಟಿಯಾಲಾ ಹೆರಿಟೇಜ್ ಫೆಸ್ಟಿವಲ್". ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಆಚರಿಸಲಾಗುವ ಈ ಉತ್ಸವವು ಹತ್ತಿರದ ಹಾಗು ದೂರದ ಪ್ರದೇಶಗಳಿಂದ ಹಲವಾರು ಕಲಾಪ್ರಿಯರು ಹಾಗು ಸಂಗೀತಪ್ರಿಯರನ್ನು ತನ್ನತ್ತ ಆಕರ್ಷಿಸುತ್ತದೆ. ಸುಮಾರು ಹತ್ತು ದಿನಗಳ ಕಾಲ ನಡೆಯುವ 'ಕ್ರಾಫ್ಟ್ಸ್ ಮೇಳ' ಇಲ್ಲಿನ ಪ್ರಮುಖ ಆಕರ್ಷಣೆ. ಈ ನಗರವು ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆ ಎನ್ನಲಾಗಿದೆ. ಅದುವೆ "ಪಟಿಯಾಲಾ ಘರಾನಾ" ಎಂದು ಪ್ರಸಿದ್ಧವಾಗಿದೆ.

ಪಟಿಯಾಲಾ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಈ ನಗರವು ತನ್ನಲ್ಲಿರುವ ಶ್ರೀಮಂತ ಸಂಸ್ಕೃತಿ ಹಾಗು ಪರಂಪರೆಯಿಂದಾಗಿ ಪ್ರವಾಸೋದ್ಯಮಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಇಲ್ಲಿ ಹಲವು ಕೋಟೆ ಹಾಗು ಉದ್ಯಾನಗಳನ್ನು ಕಾಣಬಹುದು. ಉದಾಹರಣೆಗೆ ಕಿಲ್ಲಾ ಮುಬಾರಕ್ ಸಂಕೀರ್ಣ, ಶೀಷ್ ಮಹಲ್, ಬರ್ದಾರಿ ಉದ್ಯಾನಗಳು, ಕಿಲ್ಲಾ ಅಂದ್ರೂನ್, ರಂಗ ಮಹಲ್, ಮೈಜಿ ದಿ ಸರಾಯಿ, ಮಾಲ್ ರಸ್ತೆ ಮತ್ತು ದರ್ಬಾರ್ ಹಾಲ್. ಇನ್ನುಳಿದಂತೆ ಸಮನಾ, ಬನುರ್ ಮತ್ತು ಸನೌರ್ ಎಂಬ ಪ್ರವಾಸಿ ಸ್ಥಳಗಳು ಪಟಿಯಾಲಾ ನಗರದ ಬಳಿಯಿವೆ.

ಪಟಿಯಾಲಾದಲ್ಲಿ ದೊರಕುವ ವಿಶೇಷಗಳು

ಟರ್ಬನ್ (ಪಗಡಿ), ಪರಂದಾ(ಕೂದಲನ್ನು ಹಿಡಿದಿಡುವ ಒಂದು ವಸ್ತು), ಪಟಿಯಾಲಾ ಸಲ್ವಾರ್ (ಸ್ತ್ರೀಯರು ಧರಿಸುವ ಒಂದು ಬಗೆಯ ಪ್ಯಾಂಟು), ಜುಟ್ಟಿ (ಒಂದು ಬಗೆಯ ಪಾದರಕ್ಷೆ) ಅಥವಾ ಪಟಿಯಾಲಾ ಪೆಗ್ (ಮದ್ಯದ ಒಂದು ಅಳತೆ): ಇವೆಲ್ಲವೂ ಒಟ್ಟಾರೆಯಾಗಿ ಪಟಿಯಾಲಾ ಪ್ರವಾಸೋದ್ಯಮಕ್ಕೆ ಒಂದು ಇಂಬನ್ನು ನೀಡಿವೆ. ಪ್ರವಾಸಿಗರು ತಮಗೋಸ್ಕರ ಇಲ್ಲವೆ ತಮ್ಮ ಪ್ರೀತಿಪಾತ್ರರಿಗೆ ಕಾಣಿಕೆಯಾಗಿ ನೀಡಲು ಇವುಗಳನ್ನು ಖರೀದಿಸಬಹುದು. ಇವುಗಳಲ್ಲದೆ ಪ್ರವಾಸಿಗರು ತಂಗಲು ಹಲವು ಮಿತವ್ಯಯದ ಹೋಟೆಲುಗಳಿಂದ ಹಿಡಿದು ತಾರಾ ಹೋಟೆಲ್‍ಗಳೂ ಇವೆ.

ತಲುಪುವ ಬಗೆ

ಪ್ರವಾಸಿಗರು ಈ ಸ್ಥಳವನ್ನು ಬಸ್, ಟ್ರೈನ್, ಟ್ಯಾಕ್ಸಿ ಹಾಗು ವಿಮಾನಿನ ಮೂಲಕ ಸುಲಭವಾಗಿ ತಲುಪಬಹುದು. ರೈಲು ಹಾಗು ಬಸ್ಸಿನ ಉತ್ತಮ ಸಂಪರ್ಕ ಜಾಲ ಈ ಪಟ್ಟಣಕ್ಕಿರುವುದರಿಂದ ಪ್ರವಾಸ ಸುಗಮವಾಗಿರುತ್ತದೆ. ಪ್ರಮುಖ ಪಟ್ಟಣಗಳಾದ ದೆಹಲಿ, ಚಂದೀಗಡ್ ಮತ್ತು ಮುಂಬೈಗಳಿಂದ ನಿರಂತರವಾಗಿ ಇಲ್ಲಿಗೆ ರೈಲುಗಳು ಬರುತ್ತಿರುತ್ತವೆ. ಇದಕ್ಕೆ ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೆ ಚಂದೀಗಡ್. ಇದು ಸುಮಾರು 60 ಕಿ.ಮೀ ದೂರದಲ್ಲಿದೆ.

ಭೇಟಿ ನೀಡಲು ಉತ್ತಮ ಕಾಲ

ಪಟಿಯಾಲಾ ನಗರವು ಉಷ್ಣವಲಯದ ಹವಾಗುಣವನ್ನು ಹೊಂದಿದ್ದು, ಬೇಸಿಗೆ, ಮಳೆ ಮತ್ತು ಚಳಿಗಾಲದ ಋತುಗಳನ್ನು ಅನುಭವಿಸುತ್ತದೆ. ಈ ನಗರಕ್ಕೆ ಭೇಟಿ ನೀಡಲು ಪ್ರಶಸ್ತವಾದ ಸಮಯವೆಂದರೆ ಅಕ್ಟೋಬರ್ ಹಾಗು ಮಾರ್ಚ್ ಮಧ್ಯದ ಅವಧಿ. ಈ ಸಂದರ್ಭದಲ್ಲಿ ಪಟ್ಟಣವು ಹಿತ ಹಾಗು ಆಹ್ಲಾದಕರವಾದ ವಾತಾವರಣವನ್ನು ಅನುಭವಿಸುತ್ತದೆ.

ಪಟಿಯಾಲಾ ಪ್ರಸಿದ್ಧವಾಗಿದೆ

ಪಟಿಯಾಲಾ ಹವಾಮಾನ

ಉತ್ತಮ ಸಮಯ ಪಟಿಯಾಲಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಟಿಯಾಲಾ

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ ಒಂದರ ಮೂಲಕ ಭಾರತದ ಇತರೆ ಭಾಗಗಳಿಂದ ಪಟಿಯಾಲಾಗೆ ಸುಲಭವಾಗಿ ತಲುಪಬಹುದು. ದೆಹಲಿಯಿಂದ 250 ಕಿ.ಮೀ ದೂರದಲ್ಲಿರುವ ಈ ನಗರವು ನಿರಂತರವಾದ ರಾಜ್ಯ ಹಾಗು ಖಾಸಗಿ ಬಸ್ಸುಗಳ ಸೌಲಭ್ಯವನ್ನು ಹೊಂದಿದೆ. ಅಮೃತ್‍ಸರ್ ಹಾಗು ಚಂದೀಗಡ್‍ಗಳಿಂದ ಉತ್ತಮವಾಸ ಬಸ್ಸುಗಳ ಸೇವೆ ಈ ನಗರಕ್ಕಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಟ್ಟಣವು ತನ್ನದೆ ಆದ ರೈಲು ನಿಲ್ದಾಣವನ್ನು ಹೊಂದಿದ್ದು, ಭಾರತದ ಹಲವು ಪ್ರಮುಖ ಭಾಗಗಳೊಂದಿಗೆ ಸಂಪರ್ಕ ಸಾಧಿಸುತ್ತದೆ. ಪ್ರವಾಸಿಗರು ಮುಂಬೈ, ಚಂದೀಗಡ್ ಮತ್ತು ದೆಹಲಿಗಳಿಂದ ರೈಲಿನ ಮೂಲಕ ಪಟಿಯಾಲಾಗೆ ಆಗಮಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    60 ಕಿ.ಮೀ ದೂರದಲ್ಲಿರುವ ಚಂದೀಗಡ್ ಪಟಿಯಾಲಾಗೆ ಹತ್ತಿರದಲ್ಲಿರುವ ವಾಯು ನಿಲ್ದಾಣ. ಈ ನಿಲ್ದಾಣದಿಂದ ಪಟಿಯಾಲಾಗೆ ತಲುಪಲು ಟ್ಯಾಕ್ಸಿ ಅಥವಾ ಕ್ಯಾಬುಗಳು ಸುಲಭವಾಗಿ ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed