Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಗೊಂಗ್ » ಹವಾಮಾನ

ಪಂಗೊಂಗ್ ಹವಾಮಾನ

ಮೇ ಮತ್ತು ಸೆಪ್ಟೆಂಬರ್ ತಿಂಗಳದ ದಿನಗಳು(ಬೇಸಿಗೆ) ಪಂಗೊಂಗ್ ಪ್ರವಾಸಕ್ಕೆ ಉತ್ತಮವೆನ್ನಲಾಗುತ್ತದೆ. ಈ ಕಾಲದಲ್ಲಿ ಸ್ಥಳದ ತಾಪಮಾನವು ಸೌಮ್ಯವಾಗಿರುತ್ತದೆ. ಚಳಿಗಾಲದಲ್ಲಿ ಹೆಪ್ಪುಗಟ್ಟಿದ್ದ ಸರೋವರ, ಈಗ ನೀರಾಗಿರುತ್ತದೆ. ಸ್ಥಾನಿಕ ಪ್ರಾಣಿ ಹಾಗು ಸಸ್ಯಗಳ ಜೊತೆಗೆ ವಲಸೆ ಹಕ್ಕಿಗಳು ಇಲ್ಲಿ ಕಂಡುಬರುತ್ತವೆ. ಆದ್ದರಿಂದ ಬೇಸಿಗೆಯಲ್ಲಿ ಪ್ರವಾಸಿಗರು ಆರಾಮವಾಗಿ ಸಂಚರಿಸುತ್ತಾ ಇಲ್ಲಿಯ ಸೌಂದರ್ಯವನ್ನು ಸವಿಯಬಹುದು.

ಬೇಸಿಗೆಗಾಲ

(ಮೇ - ಸೆಪ್ಟೆಂಬರ್): ಪಂಗೊಂಗ್ ನಲ್ಲಿ  ಬೇಸಿಗೆಯು ಸೌಮ್ಯವಾಗಿರುತ್ತದೆ ಮತ್ತು ತಾಪಮಾನವು ಕನಿಷ್ಠ  5 ° ಸಿ ನಿಂದ ಗರಿಷ್ಠ 40 ° ಸಿ ಗಳ ಮದ್ಯದಲ್ಲಿರುತ್ತದೆ. ಆದ್ದರಿಂದ ಈ ಸಮಯವನ್ನು ಪಂಗೊಂಗ್ ಭೇಟಿಗೆ ಒಳ್ಳೆಯ ಸಮಯವೆಂದು ಪರಿಗಣಿಸಬಹುದಾಗಿದೆ.

ಮಳೆಗಾಲ

(ಸೆಪ್ಟೆಂಬರ್-ಜುಲೈ): ಪಂಗೊಂಗ್ ನಲ್ಲಿ ಮಳೆ ಬೀಳುವುದು ಅತಿ ವಿರಳ. ಇದು ಮಳೆ ನೆರಳು ಪ್ರದೇಶದಲ್ಲಿರುವದರಿಂದ ಇಲ್ಲಿಯ ಸರಾಸರಿ ಮಳೆ 15 ಪ್ರಮಾಣ ಸೆಂ.ಮಿ. ಮಾತ್ರ. ಪ್ರವಾಸಿಗರು ಈ ಸಮಯದಲ್ಲಿ ಕೂಡ ಸ್ಥಳಕ್ಕೆ ಭೇಟಿ ನೀಡಬಹುದು.

ಚಳಿಗಾಲ

(ಅಕ್ಟೋಬರ್ - ಫೆಬ್ರವರಿ ): ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳವರೆಗೆ ವಿಸ್ತರಿಸುವ ಚಳಿಗಾಲದಲ್ಲಿ ಸರೋವರವು ಸಂಪೂರ್ಣವಾಗಿ ಹೆಪ್ಪುಗಟ್ಟುತ್ತದೆ. ಆದ್ದರಿಂದ ಲೇಹ್ ಪ್ರವಾಸಿ ಕಚೇರಿಯು ಯಾವುದೇ ಪರವಾನಿಗೆಗಳನ್ನು ಈ ಸಮಯದಲ್ಲಿ ನೀಡುವುದಿಲ್ಲ. ಚಳಿಗಾಲದಲ್ಲಿ ಇಲ್ಲಿ ಕನಿಷ್ಠ -14 ° ಸಿ ಹಾಗೂ ಗರಿಷ್ಠ ಉಷ್ಣಾಂಶ 24 °ಸಿ ದಾಖಲಾಗಿದೆ. ಪಂಗೊಂಗ್ ಭೇಟಿಗೆ ಚಳಿಗಾಲ ಸೂಕ್ತವಲ್ಲ.