Search
  • Follow NativePlanet
Share
ಮುಖಪುಟ » ಸ್ಥಳಗಳು » ಪಂಚಕುಲ » ಆಕರ್ಷಣೆಗಳು » ಯಾದವಿಂದ್ರ ಉದ್ಯಾನವನ

ಯಾದವಿಂದ್ರ ಉದ್ಯಾನವನ, ಪಂಚಕುಲ

18

ಯಾದವಿಂದ್ರ  ಅಥವ ಪಿಂಜೋರ್ ಉದ್ಯಾನವು ಪಿಂಜೋರ್ನಲ್ಲಿದೆ. ಇದನ್ನು ಮೊಗಲ್ ಉದ್ಯಾನದ ಶೈಲಿಯಲ್ಲಿ ಪಟಿಯಾಲ ವಂಶದ ದೊರೆಗಳು ನಿರ್ಮಿಸಿದರು. ಇದನ್ನು 17ನೇ ಶತಮಾನದಲ್ಲಿ ಔರಂಗಜೇಬನ ಕಾಲದಲ್ಲಿ ನಿರ್ಮಿಸಲಾಯಿತು. ಪಟಿಯಾಲದ ದೊರೆ ಮಹರಾಜ ಯಾದವಿಂದ್ರ ಸಿಂಗನ ಹೆಸರನ್ನೇ ಈ ಉದ್ಯಾನಕ್ಕೆ ಇಡಲಾಗಿದೆ.

ಉತ್ತರ ಭಾರತದ ಉದ್ಯಾನಗಳಲೆಲ್ಲ ಬಹುಶಃ ಯಾದವಿಂದ್ರ ಉದ್ಯಾನವೇ ಅತ್ಯಂತ ಹಳೆಯದು ಮತ್ತು ಸುಂದರವಾದದ್ದು. ಪ್ರಯಾಣಿಕರಿಗಾಗಿಯೇ ಇಲ್ಲಿಯೇ ಬೆಳಕಿನ ಕಾರಂಜಿ, ವಸತಿ ಕೋಣೆಗಳು ಮತ್ತು ರೆಸ್ಟೊರೆಂಟ್ನ ವ್ಯವಸ್ಥೆಯನ್ನು ಮಾಡಲಾಗಿದೆ.

ಯಾದವಿಂದ್ರ ಉದ್ಯಾನವನವು ಚಂಡಿಗಢದಿಂದ 22ಕಿಮೀ ದೂರದಲ್ಲಿದೆ. ಉದ್ಯಾನದಲ್ಲಿ ಹಲವು ಮಹಡಿ ಅಥವ ಛಾವಣಿ ಅಥವ ಹಂತಗಳನ್ನು ನಿರ್ಮಿಸಲಾಗಿದೆ. ರಾಜಸ್ತಾನಿ-ಮೊಗಲರ ಶೈಲಿಯಲ್ಲಿ ಇಲ್ಲೊಂದು ಅರಮನೆ ಕೂಡ ಇದೆ. ಈ ಅರಮನೆಯು ಮೊದಲನೆ ಛಾವಣಿಯಲ್ಲಿ ಶೀಶ ಮಹಲ್ ಮತ್ತು ಹವಾ ಮಹಲ್ನ ಪಕ್ಕದಲ್ಲಿ ಈ ಅರಮನೆಯಿದೆ. ಮುಖ್ಯದ್ವಾರವು ಈ ಮಹಡಿಗೆ ತೆರೆದುಕೊಳ್ಳುತ್ತದೆ. ಎರಡನೆಯದರಲ್ಲಿ ರಂಗ ಮಹಲಿದೆ ಮತ್ತು ಮೂರನೆಯದರಲ್ಲಿ ಮರಗಳು, ಹೂಗಿಡಗಳು ಮತ್ತು ಹಣ್ಣಿನ ತೋಟವಿದೆ. ಇದರ ನಂತರದ ಹಂತದಲ್ಲಿ ಕಾರಂಜಿಗಳನ್ನು ಒಳಗೊಂಡ ಜಲಮಹಲಿದೆ.

ಇದನ್ನು ವಿಶ್ರಾಂತಿಯ ಸ್ಥಳವೆಂದು ಗುರುತಿಸಲಾಗುತ್ತದೆ. ದಟ್ಟವಾದ ಮರಗಳು ಮತ್ತು ಕಾರಂಜಿಗಳನ್ನು ಇದರ ನಂತರದ ಸ್ಥಳದಲ್ಲಿ ಕಾಣಬಹುದಾಗಿದೆ. ಕಡೆಯ ಮಹಡಿಯಲ್ಲಿ ಬಯಲು ರಂಗಮಂದಿರವಿದ್ದು ಇದ್ದು ತಟ್ಟೆಯಾಕಾರದಲ್ಲಿದೆ. ಉದ್ಯಾನದ ಪಕ್ಕದಲ್ಲೇ ಪ್ರಾಣಿಸಂಗ್ರಹಾಲಯವಿದೆ.

ಈ ಸಂಕೀರ್ಣದ ಪಕ್ಕದಲ್ಲೇ ಒಂದು ದೇಗುಲ ಮತ್ತು ಬಯಲು ವಸ್ತು ಸಂಗ್ರಹಾಲಯವಿದೆ. ಇಲ್ಲೊಂದು ಸಾಂಸ್ಕೃತಿಕ ರೈಲ್ವೇ ಮಾರ್ಗವನ್ನು ನಿರ್ಮಿಸಲಾಗಿದ್ದು ಈ ರೈಲು ಉದ್ಯಾನವನ, ಸ್ಮಾರಕಗಳು ಮತ್ತು ಸಂಕೀರ್ಣದ ಒಳಗೆ ಪ್ರಯಾಣಿಕರಿಗೆ ಸುತ್ತು ಹಾಕಿಸುತ್ತದೆ.

ಇದು ಘಗ್ಗರ್ನ ಉಪನದಿಗಳಾದ ಕೌಶಲ್ಯ ಮತ್ತು ಝಜ್ಜರ್ ನದಿ ಪ್ರದೇಶದಲ್ಲಿದೆ. ಈ ಪ್ರದೇಶದ ಹೆಸರನ್ನು ಪಂಚಪುರ ಎನ್ನುವುದರಿಂದ ತೆಗೆದುಕೊಳ್ಳಲಾಗಿದ್ದು ಇದಕ್ಕೆ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವಿದೆ. ಪಂಚಪುರವು ಪಾಂಡವರ ಪಟ್ಟಣವಾಗಿತ್ತು. ಶಿವಾಲಿಕ್ ಬೆಟ್ಟಶ್ರೇಣಿಗಳಿಂದಾಗಿ ಈ ಪ್ರದೇಶದ ನಿಸರ್ಗ ಸೌಂದರ್ಯವು ಇಮ್ಮಡಿಸಿದೆ.

ಏಪ್ರಿಲ್ ತಿಂಗಳ ಬೈಸಾಕಿ ಮತ್ತು ಜೂನ್-ಜುಲೈಗಳಲ್ಲಿ ನಡೆಯುವ ಮಾವಿನ ಮೇಳವು ಪ್ರವಾಸಿಗರನ್ನು ಆಕರ್ಷಿಸುತ್ತದೆ. 2006ರಿಂದ ಹರಿಯಾಣ ಪ್ರವಸೋದ್ಯಮವು ಪಿಂಜೋರೆ ಸಾಂಸ್ಕೃತಿಕ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಈ ಉತ್ಸವದಲ್ಲಿ ಪಿಂಜೋರ್ನ ಸಂಸ್ಕೃತಿ ಮತ್ತು ಯಾದವಿಂದ್ರ ಉದ್ಯಾನದ ಹಿರಿಮೆಯನ್ನು ವೈಭವೀಕರಿಸಿ ಆಚರಿಸಲಾಗುವುದು. ಈ ಸಮಯದಲ್ಲಿ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.

ಯಾದವಿಂದ್ರ ಉದ್ಯಾನವನದ ಸಮೀಪದಲ್ಲೇ ಭೀಮಾದೇವಿ ದೇವಾಲಯ ಮತ್ತು ಹಳೆಯ ಸ್ನಾನಗೃಹಗಳಿವೆ. ಇಲ್ಲಿಗೆ ಸುಲಭವಾಗಿ ದೇಶದ ಯಾವ ಭಾಗದಿಂದ ಬೇಕಾದರೂ ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು. ಶಿಮ್ಲಾದ ಹಾದಿಯಲ್ಲಿನ ಕಲ್ಕಾ ಇಲ್ಲಿಂದ 5ಕಿಮೀ ದೂರದಲ್ಲಿದೆ.

ಪಿಂಜೊರ್ ಪ್ರಾಚೀನ ಶಿಲಾಯುಗಕ್ಕೆ ಸೇರಿದ ಗೋಪುರ ಪರಿಕರಗಳಿಗೆ ಹೆಸರುವಾಸಿಯಾಗಿದೆ. ಕ್ರಿ.ಶ 10ನೇ ಶತಮಾನಕ್ಕೆ ಸೇರಿದ ಹಲವು ವಿಗ್ರಹಗಳು ಮತ್ತು ಪ್ರಾಚೀನ ವಸ್ತುಗಳು ಇಲ್ಲಿ ಉತ್ಖನನ ಸಮಯದಲ್ಲಿ ಸಿಕ್ಕಿವೆ. ಒಂದೂವರೆ ಕೋಟಿ ವರ್ಷಗಳ ಹಿಂದೆ ಇಲ್ಲಿ ಪ್ರಾಚೀನ ಮನುಷ್ಯ ಜನಾಂಗವು ವಾಸಿಸಿತ್ತು ಎಂದು ಹೇಳಲಾಗುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu