Search
 • Follow NativePlanet
Share
ಮುಖಪುಟ » ಸ್ಥಳಗಳು» ಪಂಚಗಣಿ

ಪಂಚಗಣಿ - ಸ್ವಾತಂತ್ರ್ಯಪೂರ್ವ ಬ್ರಿಟೀಷರ ಪ್ರಖ್ಯಾತ ಆಕರ್ಷಣೆ

10

ಪಂಚಗಣಿ ಮತ್ತು ಮಹಾಬಲೇಶ್ವರ ಎಂಬ ಅವಳಿ ಗಿರಿಧಾಮಗಳು ಇಲ್ಲಿನ ಸೌಂದರ್ಯವನ್ನು ಮರುವ್ಯಾಖ್ಯಾನಿಸುತ್ತವೆ. ಈ ಸುಂದರ ತಾಣಗಳಲ್ಲಿ ಶಾಶ್ವತ ಆಕರ್ಷಣೆ ಇದ್ದು, ಅದು ವಾರ್ಷಿಕವಾಗಿ ಪ್ರವಾಸಿಗರು ಮತ್ತು ದೇಶೀಯರನ್ನು ಗುಂಪು ಗುಂಪಾಗಿ ಎಳೆದು ತರುತ್ತವೆ. ಪಂಚಗಣಿಯನ್ನು ಭಾರತದಲ್ಲಿ ಬ್ರಿಟೀಷರು ತಮ್ಮ ಆಳ್ವಿಕೆಯ ಕಾಲದಲ್ಲಿ ಕಂಡುಹಿಡಿದಿದ್ದರು. ಇತಿಹಾಸದ ಪ್ರಕಾರ, ಮೇಲ್ವಿಚಾರಕನಾದ ಜಾನ್ ಚೆಸ್ಸನ್ ಎಂಬ ವ್ಯಕ್ತಿಗೆ ಈ ಜನಪ್ರಿಯ ಬೇಸಿಗೆ ತಾಣದ ಅಧಿಕಾವನ್ನು ನೇಮಿಸಲಾಗಿತ್ತು. ಪಂಚಗಣಿ ಹೆಸರನ್ನು ಅಕ್ಷರಶಃ ಭಾಷಾಂತರಿಸಿದರೆ ಐದು ಬೆಟ್ಟಗಳು ಎಂಬ ಅರ್ಥವನ್ನು ನೀಡುತ್ತದೆ ಮತ್ತು ಇದು ಸಮುದ್ರ ಮಟ್ಟದಿಂದ 1,350 ಮೀಟರ್ ಎತ್ತರದಲ್ಲಿದೆ.

ಬ್ರಿಟೀಷರಿಗೆ ಬೇಸಿಗೆ ಕಾಲದಲ್ಲಿನ ಒಂದು ನೆಚ್ಚಿನ ಏಕಾಂತ ತಾಣ ಎಂದು ಐತಿಹಾಸಿಕವಾಗಿ ಪ್ರಸಿದ್ಧವಾಗಿದೆ, ಇದು ತನ್ನ  ಆಹ್ಲಾದಕರ ಶೀತಕಾಲ, ಬಿಸಿ ಮತ್ತು ಸುಟ್ಟ ಪ್ರಸ್ಥಭೂಮಿಯಿಂದ ಪ್ರವಾಸಿಗರನ್ನು ಸೆಳೆಯುತ್ತಲೇ ಇದೆ. ಈ ಪರ್ವತ ಶ್ರೇಣಿಗಳ ಮಾಯಾಲೋಕದ ಜೊತೆಗೆ ಸೇರಿಕೊಳ್ಳುವ ವರ್ಷದ ಮುಂಗಾರು ಶ್ಲಾಘನೀಯ ಹೊಂದಾಣಿಕೆಯಾಗಿದ್ದು ಸಣ್ಣ ಝರಿಗಳು ವಿಶಾಲವಾದ ಜಲಪಾತಗಳು ಈ ಬೆಟ್ಟಗಳಲ್ಲಿ ಸೇರಿಕೊಂಡಿವೆ  

ಪಂಚಗಣಿ - ಎಲ್ಲರಿಗೂ ಮತ್ತು ಯಾರಿಗಾದರೂ ಒಂದು ಗುರಿ!

ನೀವು ಮೊದಲ ಬಾರಿಗೆ ಭೇಟಿ ನೀಡಿದ ಪ್ರವಾಸಿಗರಾಗಿದ್ದರು ಅಥವಾ ಸರ್ವೋತ್ಕೃಷ್ಟ ಪ್ರವಾಸಿಗರೆ ಆಗಿದ್ದರೂ, ಪಂಚಗಣಿಯ ಆಕರ್ಷಣೀಯ ಬೆಟ್ಟಗಳು ಎಲ್ಲರಿಗೂ ನೀಡಲು ದೊಡ್ಡಪ್ರಮಾಣದ ಕೊಡುಗೆಗಳನ್ನು ಹೊಂದಿವೆ. ದೂರದ ಬೆಟ್ಟಗಳ ಹಿಂದೆ ಆಗುವ ಕನಸಿನಂತಹ ಸೂರ್ಯಾಸ್ತಕ್ಕೆ ಸಾಕ್ಷಿಯಾಗಿ, ಸ್ಟ್ರಾಬೆರಿಯನ್ನು ಹೆಕ್ಕುವ ಮೋಜು, ನಿಧಾನವಾದ ದೋಣಿ ವಿಹಾರ ಅಥವಾ ಇನ್ನೂ ಸ್ವಲ್ಪ ಹೆಚ್ಚು ಸಾಹಸ ಬೇಕೆಂದರೆ - ಪ್ಯಾರಾಗ್ಲೈಡಿಂಗ್ ... ಒಟ್ಟಿನಲ್ಲಿ ನೀವು ಇಲ್ಲಿನ ಆಯ್ಕೆಗಳಿಂದ ಹೊರಗುಳಿಯಲು ಸಾಧ್ಯವೇ ಇಲ್ಲ!.

ಪಂಚಗಣಿಯು ಪಾಶ್ಚಾತ್ಯ ಭಾರತದಲ್ಲಿ ಕಂಡುಬರುವ ಅತ್ಯುತ್ತಮ ಪ್ಯಾರಾಗ್ಲೈಡಿಂಗ್ ಸ್ಥಳಗಳಲ್ಲಿ ಒಂದಾಗಿದೆ. ಇದು 4500 ಅಡಿ ಎತ್ತರದಲ್ಲಿದೆ. ರುದ್ರರಮಣೀಯ ಕಣಿವೆ, ಉಲ್ಲಾಸಕರ ತಂಗಾಳಿ, ಆಕರ್ಷಣೀಯ ದೃಶ್ಯಗಳು - ಇಲ್ಲಿನ ಹಲವಾರು ರೋಮಾಂಚಕಾರಿ ಹಾರುವ ಸ್ಥಳಗಳು, ನಿಮಗೆ ಒಂದು ಸುಂದರ ದೃಶ್ಯ ಚಿಕಿತ್ಸೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ. ಪ್ಯಾರಾಗ್ಲೈಡಿಂಗ್ ನಿಮಗೆ ಹೊಸದಾಗಿದ್ದರೆ, ನೀವು ಅನುಭವಿ ಪೈಲಟ್ ಗಳನ್ನು ಹೊಂದಿರುವ ಪೂರ್ಣಪ್ರಮಾಣದ ಹಾರಾಟಗಳನ್ನು ಆರಿಸಿಕೊಳ್ಳಬಹುದು.

ಪಂಚಗಣಿ - ಪ್ರಕೃತಿ ಪ್ರೇಮಿಗಳಿಗೆ ಒಂದು ಸಂತೋಷದ ತಾಣ

ನೀವು ಪ್ರಶಾಂತವಾದ ವನರಾಶಿಯನ್ನು ನೋಡ ಬಯಸಿದಲ್ಲಿ, ಪ್ರಯಾಣಿಸುವ ಆನಂದವನ್ನು ಹೆಚ್ಚಿಸುವ ಬಹಳಷ್ಟು ಆಕರ್ಷಣೆಗಳು ಇಲ್ಲಿವೆ. ವಾಯ್ ಗ್ರಾಮದ ಬಳಿ ಇರುವ, ಕೃಷ್ಣ ನದಿಯು ಹಾದು ಹೋಗುವ ಧೂಮ್ ಆಣೆಕಟ್ಟು ದೋಣಿ ವಿಹಾರ ಕೈಗೊಳ್ಳಲು ಸೂಕ್ತ ತಾಣವಾಗಿದೆ.

ಸೊಂಪಾದ, ಹೇರಳವಾದ ಕೃಷ್ಣ ಕಣಿವೆಯ ಮೇಲೆ, ನೀವು ವನಭೋಜನಕ್ಕೆ, ಹೊರಾಂಗಣ ಚಟುವಟಿಕೆಗಳಿಗೆ ಮತ್ತು ಹಾಗೆ ವಾಯುವಿಹಾರವನ್ನು ಬಯಸಿದರೆ ಅದಕ್ಕೆ ಸೂಕ್ತ ಸ್ಥಳಗಳಾದ ಪ್ರಸಿದ್ಧ ಪಾರ್ಸಿ ಪಾಯಿಂಟ್ ಮತ್ತು ಸಿಡ್ನಿ ಪಾಯಿಂಟ್ ಗಳನ್ನು ನೋಡಬಹುದು. ಪಂಚಗಣಿಯ ಸೌಂದರ್ಯವನ್ನು ನೋಡಿಲ್ಲದವರು, ಈ ಆಕರ್ಷಕ ಬಂಡೆಯ ಮೇಲಿಂದ ಪಂಚಗಣಿಯನ್ನು ಆನಂದಿಸಿಬಹುದು. ಇದು ಪಂಚಗಣಿಯ ಬಸ್ ನಿಲ್ದಾಣದಿಂದ ಕೇವಲ 2 ಕಿಮೀ ದೂರವಿದೆ. ಮುಂಗಾರಿನ ಸಮಯದಲ್ಲಿ ಉತ್ತಮವಾಗಿ ಕಾಣುವ ಭಿಲಾರ್ ಜಲಪಾತಗಳ ಮೇಲೆ ನಿಮ್ಮ ಕಣ್ಣುಗಳು ಬೀಳುತ್ತವೆ. ಬಹು ಪ್ರಸಿದ್ಧ ಸಾಂಪ್ರದಾಯಿಕ ಪ್ರಸ್ಥಭೂಮಿಯಾದ ಇದರ ರಚನೆ  ಕುದುರೆ ಸವಾರಿ ಮತ್ತು ಪಾರಸೈಲಿಂಗ್ ನಂತಹ ಉತ್ಸಾಹಪೂರ್ಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಸೂಕ್ತವಾಗಿದೆ.  

ನೀವು ಪ್ರಕೃತಿ ಪ್ರೇಮಿಯಾಗಿದ್ದರೆ, ನಿಮಗೆ ಶೇರ್ ಬಾಗ್ ಎಂಬ ನೋಡುವಂತಹ ಸ್ಥಳವಿದೆ. ನೈಸರ್ಗಿಕವಾದ ಒಳ್ಳೆಯ ವಿನ್ಯಾಸವಿರುವ ಭೂದೃಶ್ಯ, ಅದ್ಭುತವಾದ ಮಕ್ಕಳ ಉದ್ಯಾನವನ ಮತ್ತು ಪಕ್ಷಿಗಳ, ಮೊಲಗಳ, ಟರ್ಕಿಗಳ ಮತ್ತು ಹಂಸಗಳ ತವರಾಗಿದೆ. ಇಲ್ಲಿ ಐತಿಹಾಸಿಕ ಗುಹೆಗಳು ಮತ್ತು ವ್ಯಾಪಕವಾಗಿರುವ ದೇವಾಲಯಗಳನ್ನು ಕಾಣಬಹುದು, ಆದರೆ ಉತ್ತೇಜಕ ಸ್ಥಳವಾದ ಭೀಮ್ ಚೌಲ (ದೆವ್ವಗಳ ಅಡುಗೆಮನೆ) ಮತ್ತು ಹ್ಯಾರಿಸನ್ ಕಣಿವೆಯನ್ನು ತಪ್ಪದೇ ವೀಕ್ಷಿಸಿ.

ಒಂದು ಆಕರ್ಷಣೀಯವಾದ, ಆಹ್ವಾನಿಸುವ ಬೆಟ್ಟ ಪ್ರದೇಶ

ಪಂಚಗಣಿಯು ವಸಾಹತುಶಾಹೀ ಯುಗದ ಹಲವಾರು ವಿಲಕ್ಷಣತೆಯಿಂದ ಆಕರ್ಷಣೀಯವಾದ ಚಿಕ್ಕಮನೆಗಳಿಂದ ಮಾಡಲಾಗಿದೆ. ಶಾಂತಿಯನ್ನು ಬಯಸುವ, ನಗರದ ಸದ್ದು ಗದ್ದಲಗಳಿಂದ ದೂರವಿರಲು ಬಯಸುವ ಪ್ರವಾಸಿಗರು ಇಲ್ಲಿನ ಚಿಕ್ಕಮನೆಗಳನ್ನು ಬಾಡಿಗೆಗೆ ತೆಗೆದುಕೊಂಡು ತಮ್ಮ ವಾರಾಂತ್ಯವನ್ನು ಕಳೆಯಬಹುದಾಗಿದೆ. ಈ ಸ್ಥಳದಲ್ಲಿನ ಅನೇಕ ಕಟ್ಟಡಗಳು ಮತ್ತು ಸ್ಮಾರಕಗಳು ಹೆಮ್ಮೆ ಪಡುವಂತಹವುಗಳಾಗಿದ್ದು, ಇವುಗಳ ವಾಸ್ತುಶಿಲ್ಪ ಬ್ರಿಟಿಷರ ಕಾಲ, ಪಾರ್ಸಿಗಳ ಮನೆ ಮತ್ತು ಇನ್ನಿತರೆ ಹಲವಾರರಿಂದ ಸ್ಫೂರ್ತಿಯನ್ನು ಪಡೆದಂತಿದೆ.

ಇಲ್ಲಿನ ವಾಸ್ತವವಾದ ಇನ್ನೊಂದು ಸತ್ಯವೆಂದರೆ, ಪಂಚಗಣಿಯಲ್ಲಿರುವ ಗಾಳಿಯಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಇದ್ದು, ಶುದ್ಧ ವಾತಾವರಣವನ್ನು ಹೆಚ್ಚು ಹೊಂದಿದೆ. ಈ ಪ್ರದೇಶದ ಹವಾಮಾನ, ಜನರು ಕಾಯಿಲೆಯಿಂದ ಹೊರಬರಲು ಪ್ರಯೋಜನಕಾರಿಯಾಗಿದೆ, ಮನಸ್ಸಿನ ಪುನರುತ್ಸಾಹಕ್ಕೆ ಮಾತ್ರವಲ್ಲದೆ, ನಿಮ್ಮ ದೇಹವು ಅಕ್ಷರಶಃ ಚಿಕಿತ್ಸೆ ಪ್ರಕ್ರಿಯೆಯಿಂದ ಗುಣವಾಗಲು ನೆರವಾಗುತ್ತದೆ. ವಿಶೇಷವಾಗಿ ಕ್ಷಯ ಸೋಂಕು ಇರುವ ಜನರು ಇಲ್ಲಿಗೆ ಬಂದರೆ ಸಂತೃಪ್ತಿಯಾಗಿ ಗುಣವಾಗಬಹುದು.

ಪಂಚಗಣಿಗೆ ಗಾಡಿ ಸವಾರಿ ಮಾಡುವುದನ್ನು ಹೇಳಲು, ವಿಸ್ಮಯ-ಸ್ಪೂರ್ತಿದಾಯಕ ಮತ್ತು ಸುಂದರವಾಗಿರುತ್ತದೆ. ನೀವು ಮುಂಬೈ ನಿಂದ ಪ್ರಯಾಣಿಸುತ್ತಿದ್ದರೆ, 285 ಕಿಮೀ ಪ್ರಯಾಣವಿರುವ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯನ್ನು ಬಳಸಬಹುದು, ನೀವು ಮೊದಲು ನಿಲ್ಲುವ ಸ್ಥಳ ಪಂಚಗಣಿಯಾಗಿರುತ್ತದೆ. ಅಥವಾ ನೀವು ಮುಂಬೈ ಇಂದ ಗೋವ ರಸ್ತೆಯಲ್ಲಿ ಬಂದರೆ ಪೊಲ್ಹತ್ಪುರ್ ಬಳಿ ಎಡಕ್ಕೆ ತಿರುಗಬೇಕು ಮತ್ತು ಅಲ್ಲಿಂದ ಮೇಲೇರಿದರೆ ನೀವು ಮೊದಲು ಮಹಾಬಲೇಶ್ವರಕ್ಕೆ ಬರುತ್ತೀರಿ. ಪಂಚಗಣಿಯು ಇಳಿಯುವಾಗ ಸತಾರಕ್ಕೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ. ನೀವು ದೊಡ್ಡ ಗುಂಪಿನಲ್ಲಿ ಪ್ರಯಾಣ ಬೆಳೆಸಿದ್ದರೆ, ಪಂಚಗಣಿ-ಮಹಾಬಲೇಶ್ವರ ರಸ್ತೆಯಲ್ಲಿನ ಅಂಜುಮನ್-ಇ-ಇಸ್ಲಾಂ ಶಾಲೆಯ ಎದುರಲ್ಲಿರುವ ಬಂಗಲೆಯನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಒಳ್ಳೆಯದು.

ಸೆಪ್ಟೆಂಬರ್ ಇಂದ ಮೇ ವರೆಗು ಮುಂಗಾರು ಇಳಿದ ಸಮಯವಾದ್ದರಿಂದ ಭೇಟಿ ನೀಡಲು ಸೂಕ್ತ ಸಮಯವಾಗಿರುತ್ತದೆ. ಚಳಿಗಾಲದಲ್ಲಿ ಪಂಚಗಣಿಯ ತಾಪಮಾನ 12 ° C ಇರುತ್ತದೆ ಮತ್ತು ಬೇಸಿಗೆಯು ಸಹ ತಂಪಾಗಿ ಇರುತ್ತದೆ. ಪಂಚಗನಿಯು ವರ್ಷವಿಡೀ ಭೇಟಿ ನೀಡಬಹುದಾದ ಸ್ಥಳ, ಆದ್ದರಿಂದ ಕುಟುಂಬಗಳು ಮತ್ತು ಪ್ರವಾಸಿಗರು ಪದೆ ಪದೆ ಭೇಟಿ ನೀಡಿ ಇಲ್ಲಿನ ತೆವ ಮಣ್ಣಿನ ವಾಸನೆ ಹಾಗು ಸೊಂಪಾದ ವನರಾಶಿಯ ಅದ್ಭುತ ಸೌಂದರ್ಯದಲ್ಲಿ ತಮ್ಮನ್ನು ತಾವೇ ಮರೆಯುತ್ತಾರೆ.

ಪಂಚಗಣಿ ಪ್ರಸಿದ್ಧವಾಗಿದೆ

ಪಂಚಗಣಿ ಹವಾಮಾನ

ಪಂಚಗಣಿ
21oC / 70oF
 • Clear
 • Wind: NW 7 km/h

ಉತ್ತಮ ಸಮಯ ಪಂಚಗಣಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಪಂಚಗಣಿ

 • ರಸ್ತೆಯ ಮೂಲಕ
  ರಾಜ್ಯ ರಸ್ತೆ ಸಾರಿಗೆ ಮುಂಬೈ ಮತ್ತು ಪುಣೆ ಇಂದ ಪಂಚಗಣಿಗೆ ಬಸ್ ಸೇವೆಗಳನ್ನು ಒದಗಿಸುತ್ತದೆ. ಬಸ್ ಶುಲ್ಕ 300 ರೂ ಗೆ ಹತ್ತಿರವಾಗಿದೆ. ಖಾಸಗಿ ಪ್ರವಾಸ ಆಯೋಜಕರಿಂದ ಸಹ ನೀವು ಬಸ್ಸುಗಳ ಆಯ್ಕೆ ಮಾಡಬಹುದು, ಆದರೆ ಅದರ ಶುಲ್ಕ ತಾವು ಆರಿಸಿದ ಬಸ್ಸಿನ ಮೇಲೆ ನಿಗದಿಯಾಗುತ್ತದೆ - ಸೂಪರ್ ಫಾಸ್ಟ್, ಡಿಲಕ್ಸ್, ಐಷಾರಾಮಿ, ಸ್ಲೀಪರ್, ಇತ್ಯಾದಿ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  100 ಕಿಮೀ ದೂರವಿರುವ ಪುಣೆ ಜಂಕ್ಷನ್ ಪಂಚಗಣಿಗೆ ಇರುವ ಒಂದು ಹತ್ತಿರದ ಪ್ರಮುಖ ರೈಲು ನಿಲ್ದಾಣ. ಪುಣೆ ರೈಲು ನಿಲ್ದಾಣ ಭಾರತದ ಇತರೆ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಬೆಂಗಳೂರು, ಚೆನೈ, ಹೈದರಾಬಾದ್, ಮುಂಬೈ ಮತ್ತು ಇತರೆ ಸ್ಥಳಗಳಿಂದ ದಿನ ನಿತ್ಯವೂ ರೈಲು ವ್ಯವಸ್ಥೆ ಇದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪುಣೆ, ಪಂಚಗಣಿಗೆ ಇರುವ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಟ್ಯಾಕ್ಸಿಯನ್ನು ನೇಮಿಸಿಕೊಂಡು ವಿಮಾನ ನಿಲ್ದಾಣದಿಂದ ಪಂಚಗಣಿಗೆ ತಲುಪುವುದಕ್ಕೆ 2000 ರೂ ಆಗುತ್ತದೆ. ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣ ಇದಕ್ಕೆ ಇರುವ ಹತ್ತಿರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಭಾರತದ ಸ್ಥಳಗಳು ಹಾಗು ವಿದೇಶಗಳ ಸಂಪರ್ಕವನ್ನು ಚೆನ್ನಾಗಿ ಕಲ್ಪಿಸುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Feb,Mon
Return On
19 Feb,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Feb,Mon
Check Out
19 Feb,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Feb,Mon
Return On
19 Feb,Tue
 • Today
  Panchgani
  21 OC
  70 OF
  UV Index: 12
  Clear
 • Tomorrow
  Panchgani
  23 OC
  73 OF
  UV Index: 12
  Partly cloudy
 • Day After
  Panchgani
  23 OC
  74 OF
  UV Index: 12
  Partly cloudy