Search
  • Follow NativePlanet
Share
ಮುಖಪುಟ » ಸ್ಥಳಗಳು» ಪಾಲಕ್ಕಾಡ್

ಪಾಲಕ್ಕಾಡ್ - ಭತ್ತದ ಕಣಜದಲ್ಲಿ ವಿಹರಿಸಿ.

25

ಪಾಲಕ್ಕಾಡ್ ಎಂಬುದು ಕೇರಳ ರಾಜ್ಯದಲ್ಲಿರುವ ಒಂದು ಜಿಲ್ಲೆಯಾಗಿದೆ. ಆಂಗ್ಲ ಭಾಷೆಯಲ್ಲಿ ಪಾಲ್ಗಾಟ್ ಎಂದು ಕರೆಯಲ್ಪಡುವ ಈ ಜಿಲ್ಲೆಯು ಅಂಕು ಡೊಂಕಾಗಿ ಹರಡಿಕೊಂಡಿರುವ ಪಶ್ಚಿಮ ಘಟ್ಟ ಶ್ರೇಣಿಯ ಗುಂಟ ನೆಲೆಸಿದೆ. ಪಾಲಕ್ಕಾಡನ್ನು ಕೇರಳದ ಇನ್ನಿತರ ಪ್ರಾಂತ್ಯಗಳೊಂದಿಗೆ ಪ್ರತ್ಯೇಕಿಸುವ ಅಂಶವೆಂದರೆ, ಅದು ಇಲ್ಲಿನ ಗ್ರಾಮೀಣ ಪರಿಸರ ಮತ್ತು ವಿಸ್ತಾರವಾಗಿ ಹರಡಿಕೊಂಡಿರುವ ಗದ್ದೆಗಳು. ಅನಂತವಾಗಿ ಬೆಳೆದಿರುವ ತೆಂಗಿನ ತೋಟಗಳು, ಹಸಿರು ಹೊದ್ದ ಭೂಭಾಗಗಳು, ದಟ್ಟವಾದ ಉಷ್ಣವಲಯದ ಕಾಡುಗಳು ಮತ್ತು ಕಲುಷಿತವಲ್ಲದ ಬೆಟ್ಟಗಾಡು ಪ್ರದೇಶಗಳೆಲ್ಲವು ಕೂಡಿ ಪಾಲಕ್ಕಾಡನ್ನು ನೋಡುಗರಿಗೆ ದೃಶ್ಯವೈಭವವನ್ನೆ ಕಣ್ಮುಂದೆ ತರುತ್ತವೆ. ಕೇರಳದ ಭತ್ತದ ಉತ್ಪಾದನೆಗೆ ಗಣನೀಯವಾಗಿ ಕೊಡುಗೆ ಸಲ್ಲಿಸುತ್ತಿರುವ ಪಾಲಕ್ಕಾಡ್ ನಿಸ್ಸಂದೇಹವಾಗಿ ಎರಡು ಬಿರುದುಗಳನ್ನು ತನ್ನದಾಗಿಸಿಕೊಂಡಿದೆ. ಅದರಲ್ಲಿ ಒಂದು "ಕೇರಳದ ಭತ್ತದ ಕಣಜ" ಮತ್ತು ಇನ್ನೊಂದು "ಕೇರಳದ ಧಾನ್ಯದ ಉಗ್ರಾಣ"

ಸಂಪ್ರದಾಯಗಳ ಸಮ್ಮಿಲನ

ಪಾಲ್ಘಾಟ್ ಗ್ಯಾಪ್ ಎಂದು ಕರೆಯಲ್ಪಡುವ ಪಾಲಕ್ಕಾಡ್ ಪ್ರಾಂತ್ಯವು ಪಶ್ಚಿಮ ಘಟ್ಟದಲ್ಲಿ ಕಂಡು ಬರುವ ಒಂದು ಸ್ವಾಭಾವಿಕ ರಹದಾರಿಯಾಗಿದ್ದು, ಕೇರಳವನ್ನು ನೆರೆಯ ತಮಿಳುನಾಡಿನೊಂದಿಗೆ ಸಂಪರ್ಕಿಸುವ ಪ್ರವೇಶ ದ್ವಾರವಾಗಿದೆ. ಕೇರಳದ ಇನ್ನಿತರ ಪ್ರದೇಶಗಳಂತಲ್ಲದೆ ಪಾಲಕ್ಕಾಡ್ ತಮಿಳು ಭಾಷಿಕರ ಜನಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೊಂದಿದೆ. ಹೀಗಾಗಿ ಇಲ್ಲಿ ಒಂದು ಮಿಶ್ರ ಸಂಸ್ಕೃತಿಯ ಏಳಿಗೆಯು ಸಹಜವಾಗಿ ಆಗಿದೆ. ತಮಿಳು ನಾಡಿನ ಸಾಮೀಪ್ಯವು ಇಲ್ಲಿ ಕೇವಲ ಸಂಸ್ಕೃತಿಯ ಮೇಲಷ್ಟೇ ಅಲ್ಲದೆ ಇಲ್ಲಿನ ಆಹಾರ ಶೈಲಿಯ ಮೇಲು ಪ್ರಭಾವವನ್ನು ಬೀರಿದೆ. ಹಾಗಾಗಿ ಇಲ್ಲಿ ವಿಭಿನ್ನವಾದ ಕೇರಳ ಮತ್ತು ತಮಿಳು ನಾಡಿನ ರುಚಿಗಳ ಸಂಯೋಜನೆ ಹೊಂದಿರುವ ಆಹಾರಶೈಲಿಯನ್ನು ನಾವು ಕಂಡು ಸವಿಯಬಹುದು.

ಪಾಲಕ್ಕಾಡ್‍ನಲ್ಲಿನ ಅನುಪಮವಾದ ಸಾಂಸ್ಕೃತಿಕ ಇತಿಹಾಸದ ಎರಡು ಪ್ರಮುಖ ಅಂಶಗಳೆಂದರೆ, ಒಂದು ಇಲ್ಲಿನ ದೇವಾಲಯಗಳಲ್ಲಿ ನಡೆಯುವ ಉತ್ಸವಗಳು ಮತ್ತು ಎರಡನೆಯದು ಶುದ್ಧವಾದ ಕರ್ನಾಟಕ ಶಾಸ್ತ್ರೀಯ ಸಂಗೀತದ  ಪರಂಪರೆಯನ್ನು ಇಲ್ಲಿ ಉಳಿಸಿಕೊಂಡು ಬರಲಾಗಿದೆ. ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಚೆಂಬೈ ವೈಧ್ಯನಾಥ ಭಾಗವತರ್ ಮತ್ತು ಪಾಲಕ್ಕಾಡ್ ಮಣಿ ಐಯ್ಯರ್ ರವರ ಜನ್ಮಸ್ಥಳವಾಗಿರುವ ಪಾಲಕ್ಕಾಡ್ ದೇಶಾದ್ಯಂತ ಸಂಗೀತಪ್ರಿಯರ ವಲಯದಲ್ಲಿ ಮನ್ನಣೆಗೆ ಪಾತ್ರವಾಗಿದೆ.

ಪ್ರವಾಸಿಗರ ಸ್ವರ್ಗ

ಪಾಲಕ್ಕಾಡ್ ಹಲವಾರು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಕೋಟೆಗಳು, ದೇವಾಲಯಗಳು, ಜಲಾಶಯಗಳು, ವನ್ಯಜೀವಿಧಾಮಗಳು, ಜಲಪಾತಗಳು, ಉದ್ಯಾನವನಗಳು ಮತ್ತು ನಯನ ಮನೋಹರ ಭೂಭಾಗಗಳನ್ನು ಹೊಂದಿರುವ ಪಾಲಕ್ಕಾಡ್ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಪಾಲಕ್ಕಾಡ್ ಕೋಟೆ ಮತ್ತು ಜೈನ ದೇವಾಲಯಗಳು ಇತಿಹಾಸ ಆಸಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ವರ್ಷಪೂರ್ತಿ ಸೆಳೆಯುತ್ತಿರುತ್ತವೆ. ಮಲಂಪುಳಂ ಜಲಾಶಯ ಮತ್ತು ಉದ್ಯಾನವನಗಳು, ಮನೋರಂಜನಾ ಉದ್ಯಾನವನಗಳು ಈ ಪ್ರಾಂತ್ಯದಲ್ಲಿ ನೆಲೆಗೊಂಡಿದ್ದು, ಪಾಲಕ್ಕಾಡನ್ನು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವನ್ನಾಗಿ ಪರಿವರ್ತಿಸಿವೆ.

ನೆಲ್ಲಿಯಂಪತಿ ಗಿರಿಧಾಮ, ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ ಮತ್ತು ಪರಂಬಿಕ್ಕುಲಂ ವನ್ಯಧಾಮಗಳು ಪರಿಸರ ಪ್ರಿಯರಿಗೆ ಮತ್ತು ವನ್ಯಜೀವಿ ಆಸಕ್ತರಿಗೆ ರಜಾ ದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ತಾಣಗಳಾಗಿವೆ. ಕಂಜಿರಪುಳ, ಧೋನಿ ಜಲಪಾತ, ಒಟ್ಟಪಲಂ, ಕೊಲ್ಲೆಂಗೋಡ್ ಅರಮನೆ ಮತ್ತು ತೆಂಕುರುಸ್ಸಿಗಳೆಲ್ಲವು ಇಲ್ಲಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿದ್ದು, ಪ್ರವಾಸಿಗರನ್ನು ತಮ್ಮತ್ತ ಕೈಬೀಸಿ ಕರೆಯುತ್ತಿವೆ.

ಪಾಲಕ್ಕಾಡ್ ಸುಖಕರವಾದಂತಹ ರೈಲು ಮತ್ತು ರಸ್ತೆ ಮಾರ್ಗವನ್ನು ಹೊಂದಿದೆ. ಈ ಪ್ರಾಂತ್ಯದ ಹವಾಗುಣವು ಬೇಸಿಗೆಯನ್ನು ಹೊರತುಪಡಿಸಿ ವರ್ಷದ ಎಲ್ಲಾ ಕಾಲವು ಅತ್ಯಂತ ಹಿತಕರವಾಗಿರುತ್ತದೆ. ಅಪರೂಪದ ಸಂಪ್ರದಾಯಗಳ ಸಮ್ಮಿಲನ, ನಯನ ಮನೋಹರ ಭೂ ಪ್ರದೇಶಗಳು, ಪ್ರತ್ಯೇಕತೆಯಿಂದ ಕೂಡಿರುವ ಪ್ರವಾಸಿ ತಾಣಗಳು ಮತ್ತು ವರ್ಣಮಯ ಉತ್ಸವಗಳೆಲ್ಲವು ಕೂಡಿ ಪಾಲಕ್ಕಾಡನ್ನು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡಿವೆ.

ಪಾಲಕ್ಕಾಡ್ ಪ್ರಸಿದ್ಧವಾಗಿದೆ

ಪಾಲಕ್ಕಾಡ್ ಹವಾಮಾನ

ಉತ್ತಮ ಸಮಯ ಪಾಲಕ್ಕಾಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಾಲಕ್ಕಾಡ್

  • ರಸ್ತೆಯ ಮೂಲಕ
    ಪಾಲಕ್ಕಾಡ್ ನಗರವು ರಸ್ತೆ ಮೂಲಕ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ನೆರೆಯ ತಮಿಳು ನಾಡಿನ ಹಲವು ಜಿಲ್ಲೆಗಳಿಂದ ಹಲವಾರು ಬಸ್ಸುಗಳು ಪಾಲಕ್ಕಾಡಿಗೆ ಬಂದು ಹೋಗುತ್ತಿರುತ್ತವೆ. ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳು ಕೊಯಮತ್ತೂರ್, ಕೊಚ್ಚಿ, ಕ್ಯಾಲಿಕಟ್ ಮತ್ತು ತ್ರಿಶ್ಶೂರ್ ನಗರಗಳಿಂದ ಪಾಲಕ್ಕಾಡಿಗೆ ಬಂದು ಹೋಗುತ್ತಿರುತ್ತವೆ. ತಿರುವನಂತಪುರಂ , ಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಿಂದ ವೊಲ್ವೋ ಬಸ್ಸುಗಳು ಪಾಲಕ್ಕಾಡಿಗೆ ಬರುತ್ತಿರುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಾಲಕ್ಕಾಡ್ ರೈಲು ನಿಲ್ದಾಣ ಅಥವಾ ಒಲವಕ್ಕೋಡ್ ಜಂಕ್ಷನ್ ಎಂದು ಸಹ ಕರೆಯಲ್ಪಡುವ ಈ ನಿಲ್ದಾಣವು ಕೇರಳದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಕೇರಳದ ವಿವಿಧ ಭಾಗಗಳೊಂದಿಗೆ ಬೆಂಗಳೂರು, ಚೆನ್ನೈ ,ದೆಹಲಿ, ಮುಂಬಯಿ ಮತ್ತು ಹೈದರಾಬಾದ್‍ಗಳಂತಹ ಪ್ರಧಾನ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಈ ನಿಲ್ದಾಣದಿಂದ ಪ್ರವಾಸಿಗರು 3 ಕಿ.ಮೀ ದೂರದಲ್ಲಿರುವ ಪಾಲಕ್ಕಾಡ್ ನಗರಕ್ಕೆ ಟ್ಯಾಕ್ಸಿಗಳಲ್ಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಪಾಲಕ್ಕಾಡ್ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಕೊಯಮತ್ತೂರ್ ವಿಮಾನ ನಿಲ್ದಾಣವು ಪಾಲಕ್ಕಾಡಿನಿಂದ 50 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಟ್ಯಾಕ್ಸಿ ಸೇವೆಗಳು ಕೊಯಮತ್ತೂರಿನಿಂದ ಪಾಲಕ್ಕಾಡಿಗೆ ಲಭ್ಯವಿವೆ. ವಿಮಾನದಲ್ಲಿ ಈ ಊರಿಗೆ ಬರಬೇಕೆಂದು ಬಯಸುವವರು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (160 ಕಿ.ಮೀ) ಮತ್ತು ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (110 ಕಿ.ಮೀ) ಗಳನ್ನು ಸಹ ಬಳಸಬಹುದು.Palakkad does not have an airport. The nearest airport is located at Coimbatore which lies at a distance of about 50 km from the town of Palakkad. Taxi services are available from Coimbatore airport to Palakkad town. Those who travel by air can also consider Kochi International Airport (160 km) and Calicut International Airport (110 km).
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri