Search
  • Follow NativePlanet
Share
ಮುಖಪುಟ » ಸ್ಥಳಗಳು » ಊಟಿ » ಆಕರ್ಷಣೆಗಳು » ಮುಕುರ್ತಿ

ಮುಕುರ್ತಿ, ಊಟಿ

3

ಮುಕುರ್ತಿ ರಾಷ್ಟ್ರೀಯ ಉದ್ಯಾನವನವು ನೀಲಗಿರಿ ಪ್ರಸ್ಥಭೂಮಿಯ ಪಶ್ಚಿಮಕ್ಕೆ ನೆಲೆಗೊಂಡಿದೆ. ಈ ಉದ್ಯಾನವನದಲ್ಲಿರುವ ಜಲಪಾತವು ಊಟಿಯ ಪಶ್ಚಿಮಕ್ಕೆ ನೆಲೆಗೊಂಡಿದ್ದು, ಪಶ್ಚಿಮ ಘಟ್ಟದ ಒಂದು ಭಾಗವಾಗಿ ಗುರುತಿಸಿಕೊಂಡಿದೆ. ಇಲ್ಲಿ ಕಂಡು ಬರುವ ನೀಲಗಿರಿ ತಹರ್ ಎಂಬ ಅಪರೂಪದ ಪ್ರಾಣಿಯನ್ನು ರಕ್ಷಿಸುವ ಸಲುವಾಗಿ ಈ ರಾಷ್ಟ್ರೀಯ ಉದ್ಯಾನವನವನ್ನು ಸ್ಥಾಪಿಸಲಾಗಿದೆ. ಈ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾಗಿ ಸಹ ಗುರುತಿಸಲ್ಪಟ್ಟಿದೆ. ಏಕೆಂದರೆ ಇದು ಪಶ್ಚಿಮ ಘಟ್ಟದ ಭಾಗವಾಗಿದೆ.

ಮುಕುರ್ತಿ ರಾಷ್ಟ್ರೀಯ ಉದ್ಯಾನವನವು ಕೆಲವೊಂದು ಭಾಗದಲ್ಲಿ ಅತಿ ಎತ್ತರವಾದ ಪರ್ವತ ಶೃಂಗಗಳನ್ನು ಹೊಂದಿದೆ. ಇವುಗಳ ಎತ್ತರವು ಸುಮಾರು 4900 ಅಡಿಗಳಿಂದ 8.625 ಅಡಿಗಳವರೆಗೆ ಇರುತ್ತದೆ.ಕೊಲ್ಲಾರಿ ಬೆಟ್ಟ ಶೃಂಗ, ಮುಕುರ್ತಿ ಶೃಂಗ ಮತ್ತು ನೀಲಗಿರಿ ಶೃಂಗಗಳು ಇಲ್ಲಿನ ಎತ್ತರವಾದ ಶೃಂಗಗಳಾಗಿವೆ. ಕೊಲ್ಲಾರಿ ಬೆಟ್ಟವು ಇಲ್ಲಿನ ಪ್ರಸಿದ್ಧ ಶೃಂಗವಾಗಿದೆ. ಈ ಬೆಟ್ಟಗಳ ಎತ್ತರವು ಈ ಪ್ರಸ್ಥಭೂಮಿಯಲ್ಲಿ ಹೆಗ್ಗುರುತುಗಳಾಗಿ ನಿಂತಿವೆ. ಈ ಎಲ್ಲಾ ಬೆಟ್ಟಗಳ ತುದಿಯ ವೈಶಿಷ್ಟ್ಯವೇನೆಂದರೆ, ಇವುಗಳೆಲ್ಲವು ಗ್ರಾನೈಟ್ ಕಲ್ಲು ಬಂಡೆಗಳಿಂದ ಕೂಡಿವೆ.

ನಿಮಗೆ ಕಾಡಿನಲ್ಲಿ ಆರಾಮವಾಗಿ ನಡೆದಾಡಬೇಕೆಂಬ ಆಸೆ ನಿಮಗಿದ್ದರೆ, ಮುಕುರ್ತಿಗೆ ಜಲಾಶಯಕ್ಕೆ ಹೋಗುವ ಅವಕಾಶದಿಂದ ಯಾವ ಕಾರಣಕ್ಕು ವಂಚಿತರಾಗಬೇಡಿ. ಈ ಜಲಾಶಯವನ್ನು ಬೆಟ್ಟದ ಬುಡದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಪೈಕರ ಜಲವಿದ್ಯುತ್  ಯೋಜನೆಯ ಉಪಘಟಕವಾಗಿದ್ದು, ಗ್ಲೆನ್ ಮೊರ್ಗನ್ ಗ್ರಾಮದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat