ದಿನ | ಹೊರನೋಟ | ಗರಿಷ್ಠ | ಕನಿಷ್ಠ |
Monday 06 May | ![]() |
26 ℃ 79 ℉ | 32 ℃90 ℉ |
Tuesday 07 May | ![]() |
27 ℃ 80 ℉ | 32 ℃90 ℉ |
Wednesday 08 May | ![]() |
27 ℃ 81 ℉ | 32 ℃90 ℉ |
Thursday 09 May | ![]() |
27 ℃ 80 ℉ | 32 ℃89 ℉ |
Friday 10 May | ![]() |
26 ℃ 79 ℉ | 32 ℃90 ℉ |
ಅಕ್ಟೋಬರ್ ನಿಂದ ಡಿಸೆಂಬರ್ ಹಾಗು ಸ್ವಲ್ಪ ಅದರ ಮುಂದಿನ ಅವಧಿಯು ಗೋವಾಗೆ ಭೇಟಿ ನೀಡಲು ಸೂಕ್ತವಾದ ಕಾಲವಾಗಿದೆ. ಈ ಸಮಯದಲ್ಲಿ ವಾತಾವರಣವು ಹಿತಕರವಾಗಿದ್ದು, ಗೋವಾ ಒದಗಿಸುವ ಮೋಜಿನ ಅನುಭವವನ್ನು ಸಂಪೂರ್ಣವಾಗಿ ಸವಿಯಬಹುದು!
ಬೇಸಿಗೆ: ಬೇಸಿಗೆಗಾಲವು ಮಾರ್ಚ್ ನಿಂದ ಮೇ ವರೆಗಿರುತ್ತದೆ. ಗರಿಷ್ಠ ಉಷ್ಣಾಂಶವು 39 ಡಿಗ್ರಿ ಸೆಲ್ಶಿಯಸ್ ಇದ್ದು ಕನಿಷ್ಠ 32 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಒಮ್ಮೊಮ್ಮೆ ರಾತ್ರಿ ಉಷ್ಣಾಂಶವು 28 ಡಿಗ್ರಿ ಸೆಲ್ಶಿಯಸ್ ಗೂ ಜಾರುವುದುಂಟು. ವರ್ಷದಲ್ಲಿ ಹೆಚ್ಚಿನ ಉಷ್ಣಾಂಶದಿಂದ ಕೂಡಿರುವ ತಿಂಗಳೆಂದರೆ ಮೇ.
ಮಳೆಗಾಲ: ಮಳೆಗಾಲದಲ್ಲಿ ಗೋವಾದ ಕಡಲ ತೀರಗಳ ಬಳಿಯ ಸುತ್ತಾಟ ವ್ಯರ್ಥ. ಆದಾಗ್ಯು, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನಮೋಹಕ ಜಲಪಾತಗಳು, ಝರಿಗಳು ಹರಿಯುವುದನ್ನು ಕಾಣಬಹುದು. ಸಮುದ್ರದಲ್ಲಿ ಎದ್ದೆಳುವ ಅಬ್ಬರದ ಅಲೆಗಳ ನೋಟವು ನೋಡಲು ಚೆನ್ನಾಗಿರುತ್ತದೆ. ಈ ಸಮಯದಲ್ಲಿ ತಾಪಮಾನವು 22 ರಿಂದ 28 ಡಿಗ್ರಿ ಸೆಲ್ಶಿಯಸ್ ಶ್ರೇಣಿಯಲ್ಲಿರುತ್ತದೆ.
ಚಳಿಗಾಲ: ಚಳಿಗಾಲದಲ್ಲಿ ಗೋವಾ ತಂಪಾಗಿರುತ್ತದೆ. ತಾಪಮಾನವು 16 ರಿಂದ 18 ಡಿಗ್ರಿ ಸೆಲ್ಶಿಯಸ್ ವರೆಗೆ ಕುಸಿಯುತ್ತದೆ. ಈ ಸಮಯದಲ್ಲಿ ಗೋವಾಗೆ ಬರುವುದು ಅನುಕೂಲಕರವಾಗಿರುತ್ತದೆ.