Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಲಂಬೂರ್ » ಹವಾಮಾನ

ನಿಲಂಬೂರ್ ಹವಾಮಾನ

ಅತಿಯಾದ ಮಳೆ ಮತ್ತು ಅತ್ಯುಷ್ಣ ನಿಲಂಬೂರ್ ಭೇಟಿಗೆ  ಮುಂಗಾರು ಮತ್ತು ಬೇಸಿಗೆ ಸಕಾಲವಲ್ಲ. ಹಿತವಾದ ಚಳಿಗಾಲವು ನಿಲಂಬೂರ್ ಭೇಟಿಗೆ ಸಕಾಲ. ಹಾಗೂ ಮಳೆಗಾಲದ ನಂತರ ಜಲಪಾತಗಳ ಹಾಗೂ ಹಸಿರಿನ ಸೌಂದರ್ಯ ಸವಿಯಲು ಸಮಯ ಯೋಗ್ಯವಾಗಿದೆ.

ಬೇಸಿಗೆಗಾಲ

ನಿಲಂಬೂರ್ ಬೇಸಿಗೆ ತೀವ್ರವಾದ ಮತ್ತು ಬಿಸಿಯಾದ ಹವಾಮಾನವನ್ನು ಹೊಂದಿವೆ. ಬೇಸಿಗೆ ಶಾಖ ಮಾರ್ಚ್ ತಿಂಗಳಿಂದ ಆರಂಭಗೊಂಡು  ಮೇ ಮುಗಿಯುವವರೆಗೂ ಭಾರೀ ಪ್ರಮಾಣದಲ್ಲಿದ್ದು, ಈ ಅವಧಿಯಲ್ಲಿ ಗರಿಷ್ಟ ತಾಪಮಾನವು  35 C ° ಸಿ ಆಗಿರುತ್ತದೆ. ಹಾಗಾಗಿ ನಿಲಂಬೂರ್ ಭೇಟಿಗೆ ಬೇಸಿಗೆ ಸಕಾಲವಲ್ಲ.

ಮಳೆಗಾಲ

ಪಶ್ಚಿಮ ಘಟ್ಟಗಳ ಸಮೀಪ ಇರುವ ನಿಲಂಬೂರ್ ನಲ್ಲಿ ಮಾನ್ಸೂನ್ ಪ್ರಭಾವ ಅಧಿಕವಾಗಿದ್ದು, ಮಳೆಗಾಲದಲ್ಲಿ ವ್ಯಾಪಕ ಮಳೆ ಸುರಿಯುತ್ತದೆ. ಮಳೆಯು ಜೂನ್ ತಿಂಗಳಲ್ಲಿ ಪ್ರಾರಂಭವಾಗಿ  ಸೆಪ್ಟೆಂಬರ್ ರವರೆಗೆ ಮುಂದುವರೆಯುತ್ತದೆ. ಈಶಾನ್ಯ ಮುಂಗಾರಿನ ಪ್ರಭಾವದಿಂದಾಗಿ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಕೂಡ ಭಾರೀಮಳೆ ಬೀಳುತ್ತದೆ. ಭಾರಿ ಮಳೆಯು ಪ್ರವಾಸಕ್ಕೆ ಅಡ್ಡಿ ಮಾಡುತ್ತದೆಯಾದ್ದರಿಂದ ಮಾನ್ಸೂನ್  ಕೂಡ ನಿಲಂಬೂರ್ ಭೇಟಿಗೆ ಸಕಾಲವಲ್ಲ.

ಚಳಿಗಾಲ

ಚಳಿಗಾಲದಲ್ಲಿ ನಿಲಂಬೂರ್ ನಲ್ಲಿ ಅತ್ಯಂತ ಆಹ್ಲಾದಕರ ಮತು ಹಿತವಾದ ಹವಾಮಾನ ಇದ್ದು, ತಾಪಮಾನವು ಹಗಲಿನಲ್ಲಿ 32 ° C ರಷ್ಟು ಹೆಚ್ಚು ಹಾಗೂ ರಾತ್ರಿ ಉಷ್ಣಾಂಶ ಹಠಾತ್   16 ° ಸಿ  ಕಡಿಮೆ ಆಗುತ್ತದೆ. ಚಳಿಗಾಲವು ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ ತನಕ ಮುಂದುವರೆಯುತ್ತದೆ. ಈ ಸಮಯ ನಿಲಂಬೂರ್ ಭೇಟಿಗೆ ಸಕಾಲ. ಚಳಿಗಾಲದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಬಯಸುವವರು  ಚಳಿಗಾಲದ ಉಡುಪುಗಳನ್ನು ತಮ್ಮಜೊತೆ ಕೊಂಡೊಯ್ದರೆ ಉತ್ತಮ.