Search
  • Follow NativePlanet
Share
» »ಬರ್ಮುಡಾ ಟ್ರಯಾಂಗಲ್; ಗುಂಡಿಗೆ ಗಟ್ಟಿ ಇರೋರು ಇಲ್ಲಿಗೆ ಹೋಗಲು ಹಿಂದೆ ಮುಂದೆ ನೋಡ್ತಾರೆ!

ಬರ್ಮುಡಾ ಟ್ರಯಾಂಗಲ್; ಗುಂಡಿಗೆ ಗಟ್ಟಿ ಇರೋರು ಇಲ್ಲಿಗೆ ಹೋಗಲು ಹಿಂದೆ ಮುಂದೆ ನೋಡ್ತಾರೆ!

ಭೂಗರ್ಭದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಆ ರಹಸ್ಯಗಳನ್ನು ಇಂದಿನವರೆಗೆ ಯಾರೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇಂದು ನಾವು ನಿಮಗೆ ಅಂತಹ ಒಂದು ರಹಸ್ಯ ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಅದರ ಬಗ್ಗೆ ತಿಳಿದರೆ ನೀವು ಕೂಡ ಆಶ್ಚರ್ಯಪಡುತ್ತೀರಿ. ಆ ಸ್ಥಳದ ಹೆಸರು ಬರ್ಮುಡಾ ಟ್ರಯಾಂಗಲ್. ಇದನ್ನು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ನಿಗೂಢ ಸ್ಥಳವೆಂದು ಪರಿಗಣಿಸಲಾಗಿದೆ.

ಹೌದು, ಬರ್ಮುಡಾ ಟ್ರಯಾಂಗಲ್‌ನಲ್ಲಿ ಅನೇಕ ಹಡಗುಗಳು ನಾಪತ್ತೆಯಾಗಿವೆ. ಆದರೆ ಈ ನಾಪತ್ತೆಯಾದ ಹಡಗುಗಳ ಬಗ್ಗೆ ಇಲ್ಲಿಯವರೆಗೆ ಯಾರಿಗೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಕೆಲವರ ಪ್ರಕಾರ ಬರ್ಮುಡಾ ಟ್ರಯಾಂಗಲ್‌ನಲ್ಲಿ ಕೆಲವು ವೈಜ್ಞಾನಿಕ ಕಾರಣಗಳಿಂದಾಗಿ ಇಲ್ಲಿ ಏನೇ ಹಾದುಹೋದರೂ ಆ ಸ್ಥಳದಲ್ಲಿ ನಾಪತ್ತೆಯಾಗುತ್ತವೆ ಎಂದು ಹೇಳಲಾಗುತ್ತದೆ.

ಭಯಪಡುತ್ತಿರುವ ನಾವಿಕರು

ಭಯಪಡುತ್ತಿರುವ ನಾವಿಕರು

ಅನೇಕ ವರ್ಷಗಳಿಂದ ನೀವು ಕೂಡ ಬರ್ಮುಡಾ ಟ್ರಯಾಂಗಲ್‌ನ ರಹಸ್ಯಗಳ ಬಗ್ಗೆ ಖಂಡಿತ ಕೇಳಿರುತ್ತೀರಿ. ಹಡಗುಗಳು, ವಿಮಾನಗಳು ಈ ಸ್ಥಳದ ಸಮೀಪ ಬಂದ ಕೂಡಲೇ ಶಾಶ್ವತವಾಗಿ ಕಣ್ಮರೆಯಾಗಿವೆಯಂತೆ. ಅಂದಹಾಗೆ ಬರ್ಮುಡಾ ಟ್ರಯಾಂಗಲ್‌ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ತ್ರಿಕೋನ ಪ್ರದೇಶವಾಗಿದೆ. ಇದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ಬರ್ಮುಡಾ ಮತ್ತು ಪೋರ್ಟೊ ರಿಕೊದ ಆಗ್ನೇಯ ಕರಾವಳಿಯ ನಡುವೆ ಇದೆ. ದಶಕಗಳಿಂದ ಈ ಸ್ಥಳದ ಬಗ್ಗೆ ಕೇಳುತ್ತಾ ಬಂದಿರುವ ವಿಜ್ಞಾನಿಗಳು ಸಹ ತಲೆ ಕೆಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ತಮ್ಮ ದೋಣಿಗಳನ್ನು ತೆಗೆದುಕೊಂಡು ಹೋಗಲು ನಾವಿಕರು ಸಹ ನಡುಗುತ್ತಾರೆ.

ಕಾಲ್ಪನಿಕ ಹಾಗೂ ನಿಗೂಢ ಪ್ರದೇಶ

ಕಾಲ್ಪನಿಕ ಹಾಗೂ ನಿಗೂಢ ಪ್ರದೇಶ

ಬರ್ಮುಡಾ ಟ್ರಯಾಂಗಲ್ ಹಲವಾರು ನಿಗೂಢ ಅಪಘಾತಗಳು ಮತ್ತು ಕಣ್ಮರೆಗಳ ಸ್ಥಳವೆಂದೇ ಕುಖ್ಯಾತವಾಗಿದೆ. ಇದನ್ನು ಅನೇಕರು ಕಾಕತಾಳೀಯವೆಂದು ತಳ್ಳಿಹಾಕಲು ನಿರಾಕರಿಸಿದರು. ಹಾಗೆ ನೋಡುವುದಾರೆ ಇಲ್ಲಿ ಯಾವುದೇ ಭಗ್ನಾವಶೇಷಗಳು ಕಂಡುಬಂದಿಲ್ಲ. ಈ ಸ್ಥಳದ ಬಗ್ಗೆ ಓದಿದಷ್ಟು ನಿಗೂಢ. ಆದರೆ ತಜ್ಞರು ಈ ಬಗ್ಗೆ ತರ್ಕಬದ್ಧವಾಗಿ ವಿವರಿಸಿದ್ದಾರೆ. ಮಾನವ ತಪ್ಪಿನಿಂದ ಅಥವಾ ಪ್ರಕೃತಿಯೂ ಕಾರಣವಿರಬಹುದೆಂದು ತಮ್ಮ ವಾದವನ್ನು ಮಂಡಿಸಿದ್ದಾರೆ.

ಅನೇಕ ಕಡೆ ಇದನ್ನು ಕಾಲ್ಪನಿಕ ಪ್ರದೇಶವೆಂದು ಪರಿಗಣಿಸಲಾಗಿದೆ. ‘ಬರ್ಮುಡಾ ಟ್ರಯಾಂಗಲ್' ಎಂಬ ಹೆಸರನ್ನು 1963 ರಲ್ಲಿ ಅಮೇರಿಕನ್ ಲೇಖಕ ವಿನ್ಸೆಂಟ್ ಗಡ್ಡಿಸ್ ಅವರು ಅರ್ಗೋಸಿ ಮ್ಯಾಗಜೀನ್‌ನ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಅಲೌಕಿಕ ಕರಾಳ ಶಕ್ತಿಗಳು ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದ್ದಾರೆ. ಆದರೆ ಗಡ್ಡಿಸ್ ಅವರ ಲೇಖನವು ವೈಜ್ಞಾನಿಕ ಪುರಾವೆಗಳನ್ನು ಹೊಂದಿಲ್ಲ.

ನಿಗೂಢವಾಗಿ ಕಣ್ಮರೆಯಾದ ಡಜನ್‌ಗಟ್ಟಲೆ ಹಡಗುಗಳು

ನಿಗೂಢವಾಗಿ ಕಣ್ಮರೆಯಾದ ಡಜನ್‌ಗಟ್ಟಲೆ ಹಡಗುಗಳು

ಬರ್ಮುಡಾ ಟ್ರಯಾಂಗಲ್‌ನಲ್ಲಿ ಯುಎಸ್ ನೌಕಾಪಡೆಯ ಬಾಂಬರ್‌ಗಳು ಸೇರಿದಂತೆ ಡಜನ್‌ಗಟ್ಟಲೆ ಹಡಗುಗಳು ಮತ್ತು ವಿಮಾನಗಳು ನಿಗೂಢವಾಗಿ ಕಣ್ಮರೆಯಾಗಿವೆ. ಪೈಲಟ್‌ಗಳು ಈ ಪ್ರದೇಶದ ಮೇಲೆ ವಿಮಾನ ಹಾರಿಸುವಾಗ ದಿಗ್ಭ್ರಮೆಗೊಂಡಿದ್ದಾರೆ ಎಂದು ವರದಿಯಾಗಿದೆ. ಡೆವಿಲ್ಸ್ ಟ್ರಯಾಂಗಲ್ ಎಂದೂ ಕರೆಯಲ್ಪಡುವ ಈ ತ್ರಿಕೋನ ಪ್ರದೇಶವು 5,00,000 ಚದರ ಮೈಲುಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಬರ್ಮುಡಾ ಟ್ರಯಾಂಗಲ್ ರಹಸ್ಯವು ಬಹಳ ಸಮಯದಿಂದ ಲಕ್ಷಾಂತರ ಜನರಿಗೆ ಕುತೂಹಲ ಕೆರಳುವಂತೆ ಮಾಡಿದೆ. ಏಕೆಂದರೆ ಈ ಸ್ಥಳದ ಯಾವುದೊಂದು ರಹಸ್ಯಗಳು ಇನ್ನೂ ಬಗೆಹರಿದಿಲ್ಲ.

ವದಂತಿಗಳನ್ನು ತಳ್ಳಿಹಾಕಿದ ವಿಜ್ಞಾನಿಗಳು

ವದಂತಿಗಳನ್ನು ತಳ್ಳಿಹಾಕಿದ ವಿಜ್ಞಾನಿಗಳು

ಆದರೆ ಈಗ ಆಸ್ಟ್ರೇಲಿಯಾದ ವಿಜ್ಞಾನಿಯೊಬ್ಬರು ಬರ್ಮುಡಾ ಟ್ರಯಾಂಗಲ್‌ ಸ್ಥಳದ ರಹಸ್ಯವನ್ನು ಕಂಡುಹಿಡಿದಿದ್ದಾರೆ. ಸಿಡ್ನಿ ವಿಶ್ವವಿದ್ಯಾನಿಲಯದ ಸಹವರ್ತಿ ಕಾರ್ಲ್ ಕ್ರುಸ್ಜೆಲ್ನಿಕಿ, ಬರ್ಮುಡಾ ಟ್ರಯಾಂಗಲ್‌ನಲ್ಲಿ ವಿಮಾನಗಳು ಮತ್ತು ದೋಣಿಗಳು ನಿಗೂಢವಾಗಿ ಕಣ್ಮರೆಯಾಗುವುದಕ್ಕೆ ಅಲೌಕಿಕ ಶಕ್ತಿಗಳು ಕಾರಣವಲ್ಲ ಎಂದು ತಿಳಿಸಿದ್ದಾರೆ. ಈ ಘಟನೆಗಳು ಕೆಟ್ಟ ಹವಾಮಾನ ಮತ್ತು ಮಾನವ ತಪ್ಪುಗಳ ಪರಿಣಾಮವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಹೌದು, ಇಲ್ಲಿ ಹಡಗುಗಳು ಕಣ್ಮರೆಯಾಗುವುದಕ್ಕೆ ಅನ್ಯಗ್ರಹ ಜೀವಿಗಳು ಅಥವಾ ಅಲೌಕಿಕ ಶಕ್ತಿಗಳು ಕಾರಣ ಎಂದು ಹೇಳುವ ಜನಪ್ರಿಯ ವದಂತಿಗಳನ್ನು ಕಾರ್ಲ್ ತಳ್ಳಿಹಾಕಿದ್ದಾರೆ.

ಕಣ್ಮರೆಯಾಗುವುದು ಅಸಾಮಾನ್ಯವೇನಲ್ಲ

ಕಣ್ಮರೆಯಾಗುವುದು ಅಸಾಮಾನ್ಯವೇನಲ್ಲ

ಆಸ್ಟ್ರೇಲಿಯಾದ ವಿಜ್ಞಾನಿ ಹೇಳುವ ಪ್ರಕಾರ, ಬರ್ಮುಡಾ ಟ್ರಯಾಂಗಲ್ ನಲ್ಲಿ ಸಮುದ್ರದಲ್ಲಿ ನಿರಂತರವಾಗಿ ಪ್ಯಾಚ್ ಆಗುತ್ತಿರುವುದರಿಂದ ಇಲ್ಲಿ ಕಣ್ಮರೆಯಾಗುವುದು ಅಸಾಮಾನ್ಯವೇನಲ್ಲ. ಅಲ್ಲದೆ "ಇದು ಸಮಭಾಜಕಕ್ಕೆ ಹತ್ತಿರದಲ್ಲಿದೆ, ಪ್ರಪಂಚದ ಶ್ರೀಮಂತ ಭಾಗ ಅಂದರೆ ಅಮೇರಿಕಾ ಸಮೀಪದಲ್ಲಿದೆ. ಆದ್ದರಿಂದ ಇಲ್ಲಿ ಸಾಕಷ್ಟು ದಟ್ಟಣೆ ಇರುತ್ತದೆ".

ಕಾರ್ಲ್ ಅವರು ಫ್ಲೈಟ್ 19 ಉದ್ದೇಶಿಸಿ ಕೂಡ ಮಾತನಾಡಿದ್ದಾರೆ. ಏಕೆಂದರೆ ಫ್ಲೈಟ್ 19 ಎಲ್ಲಾ ಕಣ್ಮರೆಯಾದಾಗ ಈ ಸುದ್ದಿ ಕೂಡ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು. ಏಕೆಂದರೆ ಫ್ಲೈಟ್ 19 ಕಾಣೆಯಾಗಿದ್ದು, ಇದೇ ಬರ್ಮುಡಾ ಟ್ರಯಾಂಗಲ್ ಬಳಿ. 5 ಡಿಸೆಂಬರ್ 1945 ರಂದು ಫ್ಲೋರಿಡಾದ ಓರ್ಟ್ ಲಾಡರ್‌ಡೇಲ್‌ನಿಂದ 14 ಸಿಬ್ಬಂದಿ ಸದಸ್ಯರೊಂದಿಗೆ ಟೇಕಾಫ್ ಆದ ಐದು ವಿಮಾನಗಳ ವಿಮಾನ ಇದಾಗಿತ್ತು.

ಫ್ಲೈಟ್ 19 ಕಣ್ಮರೆಗೆ ಕಾರಣ

ಫ್ಲೈಟ್ 19 ಕಣ್ಮರೆಗೆ ಕಾರಣ

ವಾಡಿಕೆಯ ತರಬೇತಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ಯುಎಸ್ ನೇವಿ ಟಿಬಿಎಂ ಅವೆಂಜರ್ ಟಾರ್ಪಿಡೊ ಬಾಂಬರ್‌ಗಳು ಎಲ್ಲಾ ಐದು ವಿಮಾನಗಳೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು. ಆಘಾತಕಾರಿ ವಿಷಯವೆಂದರೆ ಈ ವಿಮಾನಗಳು ಕಣ್ಮರೆಯಾದವು. ಸಿಬ್ಬಂದಿ ಅಥವಾ ಅವಶೇಷಗಳು ಕೂಡ ಕಂಡುಬರಲಿಲ್ಲ.

ಫ್ಲೈಟ್ 19 ಅನ್ನು ಹುಡುಕಲು ಕಳುಹಿಸಲಾದ ಹುಡುಕಾಟ ವಿಮಾನವೂ ಆ ರಾತ್ರಿ ಕಣ್ಮರೆಯಾಯಿತು. ಆದರೆ "ಆ ದಿನ ಅಟ್ಲಾಂಟಿಕ್‌ನಲ್ಲಿ 15 ಮೀ ಅಲೆಗಳು ಅಪ್ಪಳಿಸಿದ್ದರಿಂದ ಫ್ಲೈಟ್ 19 ಕಣ್ಮರೆಯಾಗಿರುವ ಸಾಧ್ಯತೆಯಿದೆ" ಎಂದು ಕಾರ್ಲ್ ಹೇಳುತ್ತಾರೆ. ಅಷ್ಟೇ ಅಲ್ಲ, ವಿಮಾನದಲ್ಲಿದ್ದ ಏಕೈಕ ಅನುಭವಿ ಪೈಲಟ್ ಲೆಫ್ಟಿನೆಂಟ್ ಚಾರ್ಲ್ಸ್ ಟೇಲರ್, ಅವರ ತಪ್ಪಿನಿಂದಾಗಿಯೂ ದುರಂತ ಸಂಭವಿಸಿರಬಹುದೆಂದು ಕಾರ್ಲ್ ಅವರು ಹೇಳುತ್ತಾರೆ.

ಮೀಥೇನ್ ಗ್ಯಾಸ್ ಹೈಡ್ರೇಟ್

ಮೀಥೇನ್ ಗ್ಯಾಸ್ ಹೈಡ್ರೇಟ್

ಇನ್ನೊಂದು ವಾದವೆಂದರೆ ಮೀಥೇನ್ ಗ್ಯಾಸ್ ಹೈಡ್ರೇಟ್. ಕಾರ್ಡಿಫ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸಾಗರದ ತಳದಲ್ಲಿ ಸಮುದ್ರದ ಜೀವಿಗಳ ಕೊಳೆಯುವಿಕೆಯಿಂದ ಸಿಕ್ಕ ಮೀಥೇನ್ ಗ್ಯಾಸ್ ನ ದೊಡ್ಡ ಸಾಂದ್ರತೆಯನ್ನು ಕಂಡುಹಿಡಿದರು. ಸಾಗರ ತಳದ ಕೆಸರು ಮೀಥೇನ್ ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ.

ಈ ಮೀಥೇನ್ ಸಂಗ್ರಹವಾಗುತ್ತಾ ಹೋಗುತ್ತದೆ ಮತ್ತು ಗ್ಯಾಸ್ ಹೈಡ್ರೇಟ್‌ಗಳನ್ನು ರೂಪಿಸುತ್ತದೆ. ಒಂದು ವೇಳೆ ಮೀಥೇನ್ ಪಾಕೆಟ್ ಛಿದ್ರಗೊಂಡರೆ, ಗ್ಯಾಸ್ ಇದ್ದಕ್ಕಿದ್ದಂತೆ ಹೊರಹೊಮ್ಮುತ್ತದೆ, ಇದರಿಂದಾಗಿ ನೀರು ಕಡಿಮೆ ದಟ್ಟವಾಗಿರುತ್ತದೆ. ಇದು ಆ ಪ್ರದೇಶದಲ್ಲಿನ ಯಾವುದೇ ಹಡಗನ್ನು ಮುಳುಗಿಸುತ್ತದೆ. ಅವು ಸಮುದ್ರದ ತಳ ಸೇರಿಕೊಂಡಾಗ ಕೆಸರು ಅದನ್ನು ಬಹಳ ಬೇಗ ಆವರಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X